ಕಾವ್ಯ ಸಂಗಾತಿ
ಮಾಲಾ ಚೆಲುವನಹಳ್ಳಿ
ಬರ
ಬಯಲಿನಲ್ಲಿ ನಲಿದ ಗರಿಕೆ
ಮುದುರಿ ನೆಲವ ಕಚ್ಚಿತು
ಬೀದಿಯಲ್ಲಿ ಬೀಸೋ ಗಾಳಿ
ಬಿಸಿಯ ಉಸಿರ ಕಕ್ಕಿತು
ಬರದ ಛಾಯೆ ಬಡಿದು ರೈತ
ಬದುಕಿಗಂಜಿ ನರಳಿದ
ಎದಿರುಗಾಣ್ವ ಬವಣೆ ಅರಿತು
ವರುಣನನ್ನೇ ಶಪಿಸಿದ
ಕಾಡಗಿಚ್ಚು ವನಕೆಲ್ಲ ಹರಡಿ
ಸರ್ವ ಭಕ್ಷ್ಯ ಮಾಡಿತು
ಖಗ ಮೃಗವು ವನವ ಬಿಟ್ಟು ಚೀರಿ
ದೂರ ದೂರ ಓಡಿತು
ಬೆವರ ಸೆಲೆಗೆ ಸೋತು ಕಾಯ
ಬಳಲಿ ನರಳಿ ನಲುಗಿತು
ಬೇಗೆಯಿಂದ ಸೊರಗಿ ತರುವು
ಜಲದ ತಾಣ ಅರಸಿತು
ಮುಗಿಲಿಗಾತ ಹೊಗೆಯ ಸ್ಪರ್ಶ
ಹಗೆಯ ರೂಪ ತಾಳಿತು
ಮೋಡ ತಾನು ತಡೆದು ವರ್ಷ
ಕುಹಕ ಮಾಡಿ ನಕ್ಕಿತು
ಮಾಲಾ ಚೆಲುವನಹಳ್ಳಿ
ಸೂಪರ್ ಕವನ
ವಾಸ್ತವ ಚಿತ್ರಣ ಕಣ್ಣಿಗೆ ಕಟ್ಟಿದ ಹಾಗೆ ಚಿತ್ರಿಸಿರುವಿರಿ ಅಕ್ಕ
ಬರದ ಛಾಯೆ ಯ ಕವಿತೆ ಚೆನ್ನಾಗಿದೆ ಮಾಲಾ ಮೇಡಂ..
ಧನ್ಯವಾದಗಳು
ತುಂಬಾ ಧನ್ಯವಾದಗಳು