ಕಾವ್ಯ ಸಂಗಾತಿ
ಅನಸೂಯ ಜಹಗೀರದಾರ
ತರಹಿ ಗಜಲ್
ಶಮ ಮೇಡಂ ಅವರ ಮಿಶ್ರಾ.(ಅಗೋಚರವಾದ..)
ಜಗವ ಮೆಚ್ಚಿಸುವ ಪರಿ ಗೊಂದಲವಹುದು
ಅಗೋಚರನಾದ ನಿನ್ನಮೆಚ್ಚಿಸಬಹುದು
ಸೀತೆಗೂ ಅಪವಾದ ಬುವಿ ಸೇರುವಂತಾಯ್ತು
ಒಂದು ಮಾತು ಅರ್ಥಗೆಡಿಸಿ ನೂರಾರು ಹೇಳಬಹುದು
ದಾರಿ ಯಾವುದಾದರೂ ಅಲ್ಲಿಗೆಯೆ ಕೊನೆಗೆಲ್ಲ ಹೋಗುವುದು
ಹೋದವರ ಖಾಲಿತನ ದಿನ ದಿನವೂ ಕಾಡಬಹುದು
ನಾಲ್ಕು ದಿನದ ಬದುಕು ನಿತ್ಯ ಸಾಕ್ಷೀಕರಿಸುತಿದೆ ಇಲ್ಲಿ
ಮರಣ ಸತ್ಯ ರಹಸ್ಯ ಅಭೇಧ್ಯವಾಗಿಹುದು
ಬರುವವರಿಗೆ ಸ್ವಾಗತ ಇರುವವರು ಜಾಗ ಕದಲಿಸಲೇಬೇಕು
ಹಸಿರು ಕಾಣದ ಹಕ್ಕಿ ಬಿಕ್ಕಿ ಬಿಕ್ಕಿ ಹಾಡುತಿಹುದು
ಸಾವಿರದ ಮನೆಯ ಸಾಸಿವೆ ತರುವುದು ಸಾಧ್ಯವೇ ಅನು
ಜೀವನದ ಅವಸ್ಥೆಗಳನು ಸ್ವೀಕರಿಸಲು ಮನವು ಅಳುತಿಹುದು
ಅನಸೂಯ ಜಹಗೀರದಾರ