ಸತೀಶ್ ಬಿಳಿಯೂರು ಅವರ ಕವಿತೆ-ಬಿಡುವಿಲ್ಲದೆ ಸರಿದಿದೆ ಸಮಯ

ಬಿಡುವಿಲ್ಲದೆ ಸರಿಯುತ್ತಿದೆ ಸಮಯ
ಎಲ್ಲಿ ಎತ್ತ ಸಾಗಬೇಕು ತಿಳಿದಿಲ್ಲ
ಎಲ್ಲಿಗೆ ಹೇಳೋದು ಯಾರಲ್ಲಿ ಕೇಳೋದು
ತಿಳಿಯದಾಗಿದೆ ಹಿಂದು ಮುಂದು

ದಾಟಿ ದಾಟಿ ಸಾಗಿದೆ ಸುಮಾರು ಮೈಲಿ
ಹಾದಿಯುದ್ದಕ್ಕೂ ಚುಚ್ಚಿದೆ ಇಲ್ಲಿ
ನೋವಿನ ಮುಳ್ಳುಗಳದ್ದೆ ಕಾರುಬಾರು
ಮೇಲೆ ಕೆಳಗೆ ಸರಿದಾಡಿ ಭರವಸೆಯೇ ಢಮಾರು

ಪಯಣದ ನಡುವೆ ಇಲ್ಲದಾಗಿದೆ ನಿಲ್ದಾಣ
ಸುಡುವಂತಹ ಕಿಚ್ಚಿನ ಮಾತಲಿ ಹಿಂಡಿದೆ ಪ್ರಾಣ
ಈ ಜಗದೊಳಗೆ ಕಣ್ಣಿದ್ದು ಇಲ್ಲದಂತೆ ಚರಣ
ಜೀವನದ ಹಾದಿಯ ಕೊನೆ ಕ್ಷಣ

ಬದುಕಿನ ದಾರಿ ಎಲ್ಲಿ ಕೊನೆಯಾಗುವುದೋ
ಈ ಜಂಜಾಟದ ಹಾದಿ ಎಲ್ಲಿ ಮುಟ್ಟುವುದೋ
ಭಗವಂತನ ಕೈಯೊಳಗಿನ ಸಮಯದ ಆಟ
ಆಡಿ ಆಡಿ ಸುಸ್ತಾಗಿ ಸೇರಿ ಬಿಡುವುದು ಚಟ್ಟ.

Leave a Reply

Back To Top