ಕಾವ್ಯ ಸಂಗಾತಿ
ಮುತ್ತು ಬಳ್ಳಾ ಕಮತಪುರ
ನನ್ನಮ್ಮ
ಬಾಂದಳದ ಚಂದಿರನ
ಮನೆಯಂಗಳಕ್ಕೆ ಕರೆದು
ತುತ್ತು ಮಾಡಿ ರೊಟ್ಟಿ ತಿನಿಸುವ
ನನ್ನಮ್ಮ ನನ್ನ ನಿತ್ಯ ಬೆಳದಿಂಗಳು..
ಖಾಲಿ ಪಾತ್ರೆ ಸದ್ದೆ ಮಾಡದೆ
ಇರುವಸ್ಟ್ರಲ್ಲಿ ನನಗೆ ಉಣಿಸಿ
ನೀರು ಕುಡಿದು ಮಲಗುವ …
ನನ್ನಮ್ಮ ನನ್ನ ನಿತ್ಯ ಬೆಳದಿಂಗಳು
ಗುಮ್ಮಾ ಬಂತು ಅಲ್ಲಿ ನೋಡು
ಕಡ್ಡಿ ! ಬಂತು ಇಲ್ಲಿ ನೋಡು…………… ನೂರೆಂಟು ಸುಳ್ಳು ಹೇಳಿ ;
ಆ ಆ ಎಂದೂ ಎಣಿಕೆಗೆ ಮಿಗಿಲದ
ತುತ್ತು ಮಾಡಿ ತಿಳಿಸಿದವಳು
ನನ್ನಮ್ಮ ನನ್ನ ನಿತ್ಯ ಬೆಳದಿಂಗಳು…
ಹೂ ತಂದು ಮುಡಿಗೆ ಕಟ್ಟಿ
ನನಗೆ ಬೇಡ ನೀನು ಮುಡಿ
ಅರಳುವ ಹೂವಿನ ನಗು ನೀ
ಬಿದ್ದು ಹೋಗುವ ಮರಕೆ
ಯಾಕೆ !ಇಂದೂ,ನಾಳೆ ಎನ್ನುವ
ನನ್ನಮ್ಮನನ್ನ ನಿತ್ಯ ಬೆಳದಿಂಗಳು
ಸೀರೆ ಸೆರಗ ಅಂಚಿನಲ್ಲಿ
ಕಟ್ಟಿದ ದೇವರ ಅಂಗಾರ
ಹಣೆಗೆ ಹಚ್ಚಿ ;ಲೋಕ ಮೆಚ್ಚುವ
ಮಗನಾಗು ಎಂದೂ ನನ್ನ
ಆಯಸ್ಸು ನಿನಗೆ ಕೂಡಲಿ
ಎಂದೂ ಹರಕೆ ಹೊತ್ತು ಕಾದ.
ನನ್ನಮ್ಮ ನನ್ನ ನಿತ್ಯ ಬೆಳದಿಂಗಳು.
ಅಕ್ಷರ ಕಲಿಯದ ನನ್ನಮ್ಮ
ಬದುಕಿನ ಕವಿತೆಯ ಪದಗಳ
ಸಾಲುಗಳಾಗಿ ಎದೆಂಗಳದಲಿ
ಉಸಿರ ಧಮನಿಯಲಿ ಸಂಚಾರ
ನನ್ನಮ್ಮ ನನ್ನ ನಿತ್ಯ ಬೆಳದಿಂಗಳು
ಮುತ್ತು ಬಳ್ಳಾ ಕಮತಪುರ
ಅಂತರಾಳದ ಕವಿತೆ
ತುಂಬಾ ಚನ್ನಾಗಿದೆ ಸರ್