ಕಾವ್ಯ ಸಂಗಾತಿ
ಮನ್ಸೂರ್ ಮುಲ್ಕಿ
ನನ್ನವ್ವ
ತವರಿಗೆ ಬಂದೀನಿ ತರವಾಗಿರಲೆಂದು
ಸೋರುತ್ತಿರೋ ಮನಕಂಡು ಅತ್ತೀನಿ
ಕಾಡುತೈತೆ ನಿನ್ನ ನೆನಪು ಹೆಂಗವ್ವ ಇರಲಿ
ನಿನ್ನ ಮುತ್ತಿನ ಮನೆಯಾಗ ಬೆಳಕೆಲ್ಲ ಮರೆಯಾಗೈತಿ
ಬಂಗಾರಿ ಬಾ ಇಲ್ಲಿ ಎಂದು ಕರೆದವ್ವ ಎಲ್ಲಿ
ತಂಗಾಳಿ ಕಾಣದೆ ಕೊರಗೀನಿ
ಕುಣಿದಿದ್ದೆ ಮನೆಯಾಗ ನಿನ್ನ ನೆರಳಾಗ
ನನ್ಗೆಜ್ಜೆ ಶಬ್ದವಿಲ್ಲ ನಿನ್ನೆರಳು ಕೂಡ ಇಲ್ಲ ಈಗ
ಆ ನಿನ್ನ ಬೆರಳು ಚುಕ್ಕಿ ತೋರಿಸ್ತೈತಿ
ಚಂದ್ರಮ ಬೆಳಕ ಅಂಗಳದಾಗ
ನಿನ್ನ ಮಡಿಲಾಗ ಕುಂತಿರೋ ದಿನದಾಗ
ಹ್ಯಾಂಗವ್ವ ನಾನಿರಲಿ ಈ ಮನೆಯಾಗ
ಹೊರಟು ಹೋಗ್ತೀನಿ ಗಂಡನ ಮನೆಯಾಗ
ಅಲ್ಲಿರೋ ಸುಖದಲ್ಲಿ ತವರ ಕಾಣ್ತೀನಿ
ಕೂಸು ನನ್ನ ಕೈ ಹಿಡಿದು ನಡೆಯಲು
ಅವ್ವ ನನ್ನಲ್ಲೇ ನಿನ್ನ ಕಾಣ್ತೀನಿ
ಮನ್ಸೂರ್ ಮುಲ್ಕಿ