ಕಾವ್ಯ ಸಂಗಾತಿ
ಮಹಾಲಕ್ಷ್ಮೀ ಪ್ರಜ್ವಲ್ ಸಾಂಬ್ರಾಣಿ
“ನನ್ನೊಲುಮೆಯ ಅಮ್ಮ”
ನವಮಾಸ ಹೊತ್ತು
ನನ್ನನ್ನು ಹೆತ್ತು
ಎಲ್ಲ ನೋವನ್ನು ಮರೆತು
ಹಣೆಗೆ ನೀ ಕೊಟ್ಟೆ ನನಗೆ ಮೊದಲ ಮುತ್ತು
ಪ್ರೀತಿಯಿಂದ ಮಾಡುವೆ ನನಗೆ ಮುದ್ದು
ತಪ್ಪು ಮಾಡಿದಾಗ ನೀ ಕೊಡುವೆ ಗುದ್ದು
ನನ್ನೆಲ್ಲ ನೋವುಗಳಿಗೆ ನಿನ್ನ ಆರೈಕೆ ಮದ್ದು
ಸದಾಕಾಲ ನನ್ನ ಜೊತೆ ಇದ್ದು ಕಾಪಾಡುವ ಬಂಧು
ನನ್ನೆಲ್ಲ ತಪ್ಪುಗಳನ್ನು ಕ್ಷಮಿಸುವ ಕರುಣಾಮಯೇ
ನನ್ನ ಸಿಟ್ಟನ್ನು ಸಹಿಸಿ, ನಿನಗಿಂತ ನನ್ನನ್ನು ಹೆಚ್ಚು ಪ್ರೀತಿಸುವೆ
ನನ್ನ ಅನಾರೋಗ್ಯ ದೂರವಾಗಿಸಲು ಸೇವೆ ಮಾಡುವೆ
ನನ್ನೆಲ್ಲ ಕನಸುಗಳು ನನಸಾಗಲು ಹರಕೆ ಕಟ್ಟಿ ದೇವರಿಗೆ ಬೇಡಿಕೊಳ್ಳುವೆ
ನನ್ನ ಜೀವನದ ಇಂಧನ ನೀನು
ನನ್ನ ಮೊದಲ ಗುರು ನೀನು
ನನ್ನ ಸಾಧನೆಗೆ ಮಾದರಿ ನೀನು
ನನ್ನ ಬದುಕಿಗೆ ದಾರಿದೀಪ ನೀನು
ನಿನ್ನ ಒಂದು ಅಂಶವಷ್ಟೇ ನಾನು
ಅಮ್ಮ ನೀನೇಷ್ಟು ಒಳ್ಳೆಯವಳು?
ನನ್ನ ಪ್ರತಿಯೊಂದು ಸಾಧನೆಯನ್ನು ಸಂಭ್ರಮಿಸಿ ಕೊಂಡಾಡುವಷ್ಟು
ನನ್ನೆಲ್ಲ ಹೆಜ್ಜೆಯಲ್ಲೂ ಕೈ ಬಿಡದೆ ಜೊತೆಗಿರುವಷ್ಟು
ಬೇರೆಯವರು ಹೀಯಾಳಿಸಿದಾಗ ಅವರ ಜೊತೆ ವಾದಕ್ಕಿಳಿಯುವಷ್ಟು
ನಾನು ನಿನ್ನ ಋಣ ತೀರಿಸಲಾಗದಷ್ಟು
ನಿನ್ನನ್ನು ದೇವರೊಂದಿಗೂ ಸಹ ಹೋಲಿಕೆ ಮಾಡಲಾಗದಷ್ಟು
ಮಹಾಲಕ್ಷ್ಮೀ ಪ್ರಜ್ವಲ್ ಸಾಂಬ್ರಾಣಿ
ತಾಯಿ ದೇವರ ಕೊಡುಗೆ