ಕಾವ್ಯ ಸಂಗಾತಿ
ಅಕ್ಷತಾ ಜಗದೀಶ
ಅಮ್ಮ.. ನೀನೊಂದು ಕಡಲು….
ಪ್ರೀತಿಯ ಕಡಲಿನ ಮೇಲೆ
ತೇಲುತಿಹ ಹಾಯಿ ದೋಣಿ
ನಾನೇ…
ತೊರೆದು ದಡವ ಸೇರಲಾರೆ
ಒಲುಮೆಯ ಕಡಲಬಿಟ್ಟು ಹೋಗಲಾರೆ…..
ಒಡಲಾಳದಲ್ಲಿ ಇದ್ದರೂ
ಅದೇಷ್ಟೋ ನೋವು…
ಶಾಂತ ಕಡಲಿನಂತೆ ಕಾಣುವ
ದೇವತೆ ನೀನು …
ಅಬ್ಬರದ ಅಲೆಗಳ ನಡುವೆ
ಪ್ರೇಮದಿ ತೇಲಿಸಿದೆ ಬಾಳಿನ ಹಡಗು…
ಕಡಲಿಲ್ಲದೆ ದೋಣಿಗೆ ನಡೆಯಿಲ್ಲ
ಅಮ್ಮ ನೀನಿರದೆ ಈ
ಬಾಳಿಗೆ ಅರ್ಥವಿಲ್ಲ….
ನೀನೊಂದು ಅಮೃತದ ಕಡಲು
ಈ ಬ್ರಹ್ಮಾಂಡದಲ್ಲಿ ನಿನಗ್ಯಾರು
ಮಿಗಿಲು…..
ಪ್ರೇಮ ಪರ್ವದ ಸಾಗರದಲ್ಲಿ
ನಿನ್ನಂತರಾಳದ ಒಡಲಿನಲ್ಲಿ
ಆ ನೀಲಿ ಕಡಲಿಗೆ ಸರಿಸಾಟಿ
ನಿನಮ್ಮ ….
ನಿನ್ನ ಅಲೆಗಳ ಲಾಲಿಗೆ ತೇಲುವ
ಹಾಯಿ ದೋಣಿ
ನಾನಮ್ಮ…..
ಅಕ್ಷತಾ ಜಗದೀಶ.