ಪ್ರಮೋದ ಜೋಷಿ ಕವಿತೆ ಇಲಿಯವಧೆ

ಇರುವೆ ಜಿರಲೆ ಇಲಿ ಮುಕ್ತ
ಸುಂದರ ಸುಸಜ್ಜಿತ ಮನೆ
ವಾಸಿಸುತ್ತಿದ್ದೆವು ಎಲ್ಲರೂ
ಆ ಸುಂದರ ಮನೆಯೊಳು

ಬಂದಿತೊಂದು ದಿನ ಇಲಿ
ಕಂಡೊಡಣೆ ಎಲ್ಲರೂ ಗಲಿಬಿಲಿ
ಕೊಲ್ಲುವ ಬಗೆಯ ಚರ್ಚಿಸಿ
ನಿರ್ಧಾರಕೆ ಬಂದರು

ಎಲ್ಲ ಕೋಣೆಯ ಬಾಗಿಲು ಮುಚ್ಚಿ
ಪೊರಕೆ ಬಡಿಗೆ ದೊಣ್ಣೆ ಹಿಡಿದು
ಜಾಲಾಡಿದೆವು ಸಂದಿಗೊಂದಿ
ವೀರ ಯೋಧರಂತೆ

ಸಿಕ್ಕಿತೇ ನಮಗೆ ಸಲೀಸಾಗಿ
ಓಡಾಡಿತು ಮೂಲೆ ಮೂಲೆಗೆ
ಬೀಳುವ ಏಟೆಲ್ಲಾ ವ್ಯರ್ಥ
ಓಡಾಡಿದ್ದೊಂದೇ ಸತ್ಯ

ಅಂತೂ ಸಿಕ್ಕಿತು ಪೊರಕೆಯಡಿ
ಕೋಲಿನಿಂದ ಒತ್ತಿದರು ಆಸರೆಗಾಗಿ
ದೊಣ್ಣೆಯಿಂದ ಬಡಿದು ಕೊಂದು
ಕುಣಿದಾಡಿದರು ಯಶಸ್ಸಿಗಾಗಿ

ಹತಭಾಗ್ಯ ಇಲಿ ಸತ್ತಿತು
ಚಕ್ರವ್ಯೂಹ ಭೇದಿಸದೇ
ವೀರಯೋಧನಂತೆ ಹೋರಾಡಿ
ವೀರ ಮರಣ ಹೊಂದಿತು

ಕೃಷ್ಣ ವರ್ಣದ ಸುಂದರ ದೇಹ
ಕಪ್ಪು ಚಂದ್ರನಂಥಾ ಕಂಗಳು
ಕಂದು ಪಾದ, ಹುರಿಮಾಡದ ಮೀಸೆ
ಸತ್ತೊಯಿತಲ್ಲಾ ಇಲಿ ವರ್ಣಿಸಲೇನಂತ

ಕಸದ ತಟ್ಟೆಯಾಯ್ತು ಶವವಾಹಕ
ಹೊರುವವರು ನಾವೆ
ಹೊತ್ತುಕೊಂಡು ನಡೆದೆವು
ಒಬ್ಬರ ಹಿಂದೆ ಒಬ್ಬರು

ಅಂತಿಮ ಘಟ್ಟ ಚರಂಡಿಯೇ
ಚರಂಡಿಯೊಳು ಇಲಿ ಲೀನ
ಆದೆವು ನಾವೆಲ್ಲಾ ಮೌನ
ಮುಕ್ತವಾಯ್ತು ಮನೆ ಮತ್ತು ಮನ.


   
  

4 thoughts on “ಪ್ರಮೋದ ಜೋಷಿ ಕವಿತೆ ಇಲಿಯವಧೆ

  1. ☺️☺️☺️☺️☺️
    ಸರ್
    ಒಂದು ವರ್ಷದ ಹಿಂದೆ ಒಂದು ಚೋಟುದ್ದ ಇಲಿ ಅದ್ಹೇಗೋ ಮನೆ ಸೇರಿಕೊಂಡಿತ್ತು ನಾನು ತಿನ್ನಲು ತಂದಿಟ್ಟ ಗೋಡಂಬಿ ಬಾದಾಮಿ ಖರ್ಜೂರ ಸೇಂಗಾ ಎಲ್ಲವನ್ನ ದಿನವೂ ಯಥೇಚ್ಚವಾಗಿ ಸೇವಿಸಿ ಚೋಟುದ್ದ ಇದ್ದ ಇಲಿ ಒಂದು ಮೊಳದಷ್ಟು ಉದ್ದ ಬೆಳೆದಿತ್ತು ಹೊಡೆದು ಕೊಂದರೆ ಎಲ್ಲಿ ಪಾಪ ಹತ್ತಿಗಿತ್ತೀತಂತ ಹೊಸ ಬಲೆ ತಂದಿಟ್ಟೆ ಅದಕ್ಕೆ ಅಂತ ದಿನವೂ ಹೋಟೇಲ್ನಿಂದ ತಿಂಡಿ ತಂದಿಡ್ತಿದ್ದೆ ಸುಮಾರು ನಾಲ್ಕುವರೆಯಿಂದ ಐದು ಸಾವಿರ ರೂಪಾಯಿಯವರೆಗೆ ಖರ್ಚು ಮಾಡಿದೆ ಆದರೆ ಇಲಿ ಮಾತ್ರ ಬಲೆಯಲ್ಲಿ ಬೀಳಲಿಲ್ಲ ಮನೆಯಲ್ಲಿನ ಬಟ್ಟೆ ಟೀವಿ, ಕಂಪ್ಯೂಟರ್, ಇತ್ಯಾದಿಗಳ ಕೇಬಲ್ ಕಡಿದು ತುಂಡಾಗಿಸತೊಡಗಿತು ಮನೆಯಲ್ಲಿ ನನ್ನ ಹೆಂಡತಿ, ಮಕ್ಕಳು ಇಲಿಯಮೇಲಿನ ಸಿಟ್ಟನ್ನು ನನ್ನ ಮೇಲೆ ತೋರಿಸತೊಡಗಿದರು ಕೊನೆಗೆ ಗಟ್ಟಿ ನಿರ್ಧಾರ ಮಾಡಿ ನಿಮ್ಮ ಕವನದಲ್ಲಿಯ ತರಹ ವೀರಾವೇಶದಿಂದ *ವಧೆ* ಮಾಡಿಬಿಟ್ಟೆ ಸರ್

  2. Such a wonderful kavana.. And most of us have already experienced this.. Great sir.. Very nicely written..

Leave a Reply

Back To Top