ರವೀಂದ್ರನಾಥ್ ಟ್ಯಾಗೋರ್ ರವರ ಕವಿತೆ ‘ನಿರ್ಭಯವು ಮನದೊಳಗೆ’-ಅನುವಾದ ಪಿ.ವೆಂಕಟಾಚಲಯ್ಯ

ನಿರ್ಭಯವು ಮನದೊಳಗೆ, ಶಿರವೆತ್ತಿ ನಭದೆಡೆಗೆ,
ಮುಕ್ತ ಜ್ಞಾನಾರ್ಜನೆಯವಕಾಶ ಇರುವಲ್ಲಿಗೆ,
ದ್ವೇಷ ಅಸೂಯೆ ಹಗೆ, ತಡೆಗಳೆದ್ದು ಮನೆಯೊಳಗೆ,
ಒಡೆದು ತುಣುಕುಗಳಾಗದ, ತಾಣ ಇರುವಲ್ಲಿಗೆ,
ಸತ್ಯದಾಳದಿಂ, ಚಿಮ್ಮುವ ಪದಗಳಿರು ವಲ್ಲಿಗೆ,
ನಿತ್ಯ ಪೂರ್ಣತೆಯೆಡೆಗೆ, ದುಡಿದು ದಣಿವ ನರಿಯದ ,
ಶ್ರಮ ಜೀವಿಗಳ ತೋಳುಗಳು ಚಾಚಿ
ರುವಲ್ಲಿಗೆ,
ಶುಷ್ಕ ಮರಳುಗಾಡಿನಲಿ, ಸತ್ತಂತಿರು ವರೆಡೆಗೆ,
ಸತತ ಹರಿಯುತಿರುವ, ನಿರ್ಮಲ ಜ್ಞಾನ ಗಂಗೆಯು,
ತನ್ನಯ ಪಥವನು,ಅಂತ್ಯಗೊಳಿಸದೆ ಇರುವಲ್ಲಿಗೆ,
ನಿನ್ನಿಂದಲೇ, ಮುನ್ನಡಿಯುರುವುದೀ ಮನವು,
ಮುಕ್ತವಿಚಾರಶೀಲ,ಕ್ರಿಯಾಶೀಲತೆಯೆದೆಡೆಗೆ,
ಎನ್ನ ನಾಡನು ಜಾಗೃತಗೊಳಿಸೋ ” ಓ ,ತಂದೆ”,
ಅಂತಹ ಬಿಡುಗಡೆಯ ಸ್ವರ್ಗವು ಇರುವಲ್ಲಿಗೆ.


One thought on “ರವೀಂದ್ರನಾಥ್ ಟ್ಯಾಗೋರ್ ರವರ ಕವಿತೆ ‘ನಿರ್ಭಯವು ಮನದೊಳಗೆ’-ಅನುವಾದ ಪಿ.ವೆಂಕಟಾಚಲಯ್ಯ

  1. Very nice translation with appropriate words which needs profound language knowledge and control.. Keep it up.

Leave a Reply

Back To Top