ಆಧುನಿಕ ದಲಿತ ಸ್ತ್ರೀ ಲೋಕದ ಆತ್ಮಗೌರವದ ಸಂಕೇತ, ಸಾಹಿತಿ ಡಾ.ಜಯದೇವಿ ಗಾಯಕವಾಡ-ಸಿದ್ದಾರ್ಥ ಟಿ.ಮಿತ್ರಾ

ಆಧುನಿಕ ದಲಿತ ಸ್ತ್ರೀ ಲೋಕದ ಆತ್ಮಗೌರವದ ಸಂಕೇತಃ  ಸಾಹಿತಿ ಡಾ.ಜಯದೇವಿ ಗಾಯಕವಾಡ

ವಿಶಾಲವಾದ ಕನ್ನಡ ಸಾಹಿತ್ಯ ಪ್ರಪಂಚದಲ್ಲಿ ಅನೇಕ ಸಾಹಿತಿಗಳು ಲೇಖಕರು,ಬೆಳಗಿದ್ದಾರೆ ,ಬೆಳಗುತ್ತಿದ್ದಾರೆ.ಅವರಲ್ಲಿ ಅಪರೂಪದ ಸಾಹಿತಿ ಎಂದರೆ ಡಾ.ಜಯದೇವಿ ಗಾಯಕವಾಡ ಒಬ್ಬರು.ನೆಚ್ಚಿನ  ಸಾಹಿತಿಗಳೆಂದ ಮಾತ್ರಕ್ಕೆ ಉಳಿದ ಸಾಹಿತಿಗಳು ಸಾಮಾನ್ಯರೆಂದು ಯಾರು ಕೂಡ ಭಾವಿಸಕೂಡದು.ಕನ್ನಡದ ಪ್ರತಿಭಾವಂತ ಸಾಹಿತಿಗಳಲ್ಲಿ ನನ್ನ ನೆಚ್ಚಿನ ಸಾಹಿತಿಗಳಲ್ಲೊಬ್ಬರು..ಒಬ್ಬೊಬ್ಬ ಸಾಹಿತಿ ಒಂದೊಂದು ಕ್ಷೇತ್ರದಲ್ಲಿ, ರಂಗದಲ್ಲಿ ಪ್ರಗತಿಯನ್ನು ಸಾಧಿಸಿ ಬೆಳಗಿದರೆ ಜಯದೇವಿ ಗಾಯಕವಾಡ ಸಾಮಾನ್ಯವಾಗಿ ಜೀವನದ ಎಲ್ಲ ರಂಗಗಳಲ್ಲೂ ತಮ್ಮ ಅಮೋಘವಾದ ಪ್ರತಿಭೆಯನ್ನು ತೋರಿಸಿದ್ದಾರೆ.
ಮೂಲತಃ ಕಲಬುರ್ಗಿ ಜಿಲ್ಲೆಯ ಶಹಪೂರ ಮೂಲದ ಇವರು,ಇವರ ತಂದೆ ವೃತ್ತಿಗಾಗಿ ಬೀದರ ಜಿಲ್ಲೆಯ ಘಾಟಬೋರಾಳ ಮತ್ತು ರಾಜೇಶ್ವರದಲ್ಲಿ ಕೆಲಸ ನಿರ್ವಹಿಸಿದ್ದರಿಂದ ಬೀದರ ಜಿಲ್ಲೆಯವರಾಗಿದ್ದಾರೆ.ರಾಜೇಶ್ವರದ 1975 ರಲ್ಲಿ ತಾಯಿ ಶ್ರೀಮತಿಬಸಮ್ಮಮತ್ತು ಶ್ರೀ ಮಲ್ಲಪ್ಪ ಗಾಯಕವಾಡ ಉಧರದಲ್ಲಿ ಜನಿಸಿದರು .
ಇವರಿಗಿದ್ದ ಹುಮ್ಮಸ್ಸು ಚಟುವಟಿಕೆಗಳು ಇಂದಿನ ಯುವ ‌ಸಮುದಾಯಕ್ಕೆ ನಾಚಿಸುವಂತಿವೆ.
ಇವರು ಹಸನ್ಮುಖಿಯಾಗಿ ಕಾರ್ಯೋನ್ಮುಖರಾಗಿ ಗಾಯಕವಾಡ ಅವರು ಯಾಜ್ಞಸೇನಿಯ ಆತ್ಮಕಥನ  ಎಂಬ ಮೊದಲ ಕಾದಂಬರಿಯಿಂದ ಕನ್ನಡ ಸಾಹಿತ್ಯ ಕ್ಷೇತ್ರ ಪ್ರವೇಶಿಸಿದರು.ಅದರಿಂದ ಕನ್ನಡ ಸಾಹಿತ್ಯ ಮತ್ತಷ್ಟು ಉಜ್ವಲವಾಗುವತ್ತ ಹೊರಟಿತು.ಕನ್ನಡ ಸಾಹಿತ್ಯ ವಿಚಾರಧಾರೆಯ ಬಹುಮುಖ ಪ್ರತಿಭೆಯ ‌ ಸಾಹಿತ್ಯ ಬಹಳ ವಿರಳವೆನ್ನುವುದು ನನ್ನ ಭಾವನೆ. ಆಡು ಮುಟ್ಟದ ಸೊಪ್ಪಿಲ್ಲ ಗಾಯಕವಾಡ ಅವರು ತಿಳಿಯದ ವಿಷಯವಿಲ್ಲ”  ಕೇವಲ ಕಾದಂಬರಿಕಾರಷ್ಟೆ ಆಗಿರದೆ ಶ್ರೇಷ್ಠ ಹರಿತವಾದ ವಿಮರ್ಶಕರು, ಅದ್ವಿತೀಯ ವಾಗ್ಮಿಗಳು ಆಗಿದ್ದಾರೆ. ಇವರು ಒಬ್ಬ ವ್ಯಕ್ತಿ ಆಗಿರದೆ ಸಾಹಿತ್ಯ ಪ್ರಪಂಚದಲ್ಲಿ ದೊಡ್ಡ ಆಸ್ತಿಯಾಗಿ ಹೊರಹೊಮ್ಮುತ್ತಿದ್ದಾರೆ.ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರು ಹೇಳಿದಂತೆ ‌ಸತತ ಹೊರಾಟ ಶಿಕ್ಷಣ ಪ್ರಯತ್ನವೇ ಸಿದ್ಧಿಯ ಹಾದಿ ಎಂಬುದು ಇವರ ದೃಢ ಸಂಕಲ್ಪ.


ಯಾಜ್ಞಸೇನಿಯ ಆತ್ಮಕಥನ ಅವರ ಮೊದಲ ಕಾದಂಬರಿ. ಈ ಕಾದಂಬರಿ ಇಂಗ್ಲೀಷ್,ಹಿಂದಿ,ಮರಾಠಿ,ತೆಲಗು ಭಾಷೆಗೆ ಅನುವಾದಗೊಂಡು ಗುಲಬರ್ಗಾ ವಿಶ್ವವಿದ್ಯಾಲಯದ ಬಿ.ಎ. ವಿದ್ಯಾರ್ಥಿಗಳಿಗೆ ಪಠ್ಯವಾಗಿತ್ತು.ಇವರ ಕವನ,ಲೇಖನಗಳು ಗುಲಬರ್ಗಾ ಮತ್ತು ಮಹಿಳಾ ವಿಶ್ವವಿದ್ಯಾಲಯಕ್ಕೆ ಪಠ್ಯವಾಗಿವೆ.  ಅತ್ಯತ್ತಮ ಕೃತಿಗಳನ್ನು ಕನ್ನಡ ಸಾಹಿತ್ಯಕ್ಕೆ ಕೊಡುಗೆಯಾಗಿ ನೀಡಿದ್ದಾರೆ. ‘ಹೇಗೆ ಹೇಳಲಿ ನಾನು, ಮರುಭೂಮಿ ಮಾಡದಿರಿ,ಕಪ್ಪು ಹುಡುಗಿಯ ಹಾಡಯ, ಕಾವ್ಯ ಸಂಕಲನಗಳು.ಮೂವತ್ತೊಂದು ಗಜಲ್‌ಗಳು’ ಪ್ರಜ್ಞೆ,ಶೀಲ,ಕರುಣೆಯ ಗಜಲ್ ಗಳು,ವೈಶಾಖ ಪೂರ್ಣಿಮೆಯ ಗಜಲಗಳುಅವರ ಮೂರು ಗಜಲ ಸಂಕಲನ. ‘ಡಾ. ಅಬ್ದುಲ್‌ಕಲಾಂ, ರಾಣಿ ಚೆನ್ನಮ್ಮ,  ರಮಾಬಾಯಿ ಅಂಬೇಡ್ಕರ ಜೀವನ ಚರಿತ್ರೆ ಮುಂತಾದವರ ಸ್ಪೂರ್ತಿದಾಯಕ ಜೀವನ ಬರಹಗಳನ್ನು ರಚಿಸಿದ್ದಾರೆ. ‘ಸಾಹಿತ್ಯ ಸಂಕ್ರಮಣ, ಜಾಗತೀಕರಣ ಮಹಿಳೆ ಸವಾಲುಗಳು’ಸಾಹಿತ್ತ ಸಂಕ್ರಮಣ, ಬಿಸಿಲ ಬಯಲ ಬೆಡಗು, ಸಂಸ್ಕೃತಿ ಸೊಗಡು, ಸಾಹಿತ್ಯ ಸೃಷ್ಟಿ,ಅವರ ಪ್ರಮುಖ ವಿಮರ್ಶಾ ಕೃತಿಗಳು. ‘ಪ್ರಾಚೀನ ಬೌದ್ಧ ವಿದ್ಯಾಕೇಂದ್ರ ಸನ್ನತಿ, ಹೈದ್ರಾಬಾದ ಕರ್ನಾಟಕ ವಿಮೋಚನೆ ಮತ್ತು ಕನ್ನಡ ಸಾಹಿತ್ಯ’ ಅವರ ಸಂಶೋಧನಾ ಕೃತಿಗಳಾಗಿವೆ. ವಚನಕಾರ್ತಿಯರ ಪರಂಪರೆ,ವಚನಕಾರ್ತಿಯರ ಸಾಕ್ಷಿ ಪ್ರಜ್ಞೆ,ಬಸವಣ್ಣ ಅಂಬೇಡ್ಕರ,ಉರಿಲಿಂಗಪೆದ್ದಿ ಪುಣ್ಯಸ್ತ್ರೀ ಕಾಳವ್ಬೆ,ಅವರ ವಚನ ಸಾಹಿತ್ಯದ ಮೌಲಿಕ ಕೃತಿಗಳು.ಚಿಂತಕರು ಮತ್ತು ಮಹಿಳೆ,ಉರಿಲಿಂಗಪೆದ್ದಿ- ಕಾಳವ್ವೆ,ಕಲ್ಯಾಣ ಬೆಳಗು,ದಲಿತ ನಾಟಕಗಳು,ಬಯಲ ಬೆಳಕಿನ ವಚನಗಳು ಆಧುನಿಕ ವಚನ ಹೀಗೆ ಸಾಹಿತ್ಯದ ಹಲವು ಪ್ರಕಾರದಲ್ಲಿ ಸೇವೆ ಸಲ್ಲಿಸಿದ್ದಾರೆ.ಬೋದಿವೃಕ್ಷದ ಹಾಯಿಕುಗಳು,ರುಬಾಯಿ,ಗಜಲ, ಬರೆದ ಮೊದಲ ದಲಿತ ಲೇಖಕಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವರು. ಸಾಹಿತ್ಯ ಸೇವೆಗೆ ಅಂತರರಾಷ್ಟ್ರೀಯ ಮಹಿಳಾ ಪ್ರಶಸ್ತಿ – ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು, ರುಕ್ಕಿಣಿಬಾಯಿ ಸ್ಮಾರಕ ಸಾಹಿತ್ಯ ಪ್ರಶಸ್ತಿ, ಸುವರ್ಣ ಕರ್ನಾಟಕ ರತ್ನ ಪ್ರಶಸ್ತಿ, ಅವ್ವ ಪ್ರಶಸ್ತಿ,ಅಮ್ಮ ಗೌರವ ಪ್ರಶಸ್ತಿ, ಶರಣ ಉರಿಲಿಂಗಪೆದ್ದಿ ಸಾಹಿತ್ಯ ಪ್ರಶಸ್ತಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ  ಹಾಗೂ ಪ್ರತಿಷ್ಠಿತ ಕಸಾಪದ ಶ್ರೀ ವಿಜಯ ಸಾಹಿತ್ಯ ಪ್ರಶಸ್ತಿ’ಗಳು ದಲಿತ ಸಾಹಿತ್ಯ ಪರಿಷತ್ತಿನ ಗೌರವ ಪ್ರಶಸ್ತಿ ಹಾಗೂ ಇನ್ನೂ ಹಲವು ಪ್ರಶಸ್ತಿಗಳು ಲಭಿಸಿವೆ. ಅವರು ಅನೇಕ ಕನ್ನಡ ಪರ ಸಂಘಟನೆಯ ಅಧ್ಯಕ್ಷರಾಗಿ,ಉಪಾಧ್ಯಕ್ಷರಾಗಿ,ಕಾರ್ಯದರ್ಶಿಯಾಗಿ, ಸದಸ್ಯರಾಗಿ ದುಡಿದ ಸಂಘಟನಾ ಜೀವಿ.
ಲೇಖನಿ ಖಡ್ಗಕ್ಕಿಂತ ಹರಿತ’ ಎಂಬ ಮಾತಿನ ಹಿನ್ನೆಲೆಯಲ್ಲಿ ಇವರು ಕಾವ್ಯವನ್ನೇ ಖಡ್ಗವನ್ನಾಗಿಸಿಕೊಂಡು ಸಮಸ್ಯೆಗಳ ಅನಾವರಣ ಮತ್ತು ಸಮಸ್ಯೆಗಳ ನಿರ್ಮೂಲನೆಗೆ ದಲಿತ ಸಾಹಿತ್ಯ ಮುಂದಾದವರು.
ಈ ಜನ್ಮದಿನದ ಹೊಸ್ತಿಲಲ್ಲಿ ಜೀವನದ ಅನೇಕ ಏರಿಳಿತಗಳ ಮಧ್ಯೆ ಹಲವು ವಸಂತಗಳನ್ನು ಪೂರೈಸಿ ಮತ್ತೊಂದು ನವ ವಸಂತಕ್ಕೆ ಕಾಲಿಡುತ್ತಿರುವ ಹೊತ್ತಲ್ಲಿ ತುಂಬು ಹೃದಯದ ಹಾರ್ಧಿಕ ಶುಭಾಶಯಗಳು.ಇನ್ನು ಅನೇಕ ರೀತಿಯ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿಗಳು ನಿಮ್ಮನ್ನು ಆರಿಸಿ ಬರಲಿ ಎಂದು ಹಾರೈಸುವೆ.
ಕೆಲಸವೆ ಆನಂದ ನನ್ನ ಬಾಳಿಗೆ ಬೆಳಕು ನಿಡಿದವರೆಲ್ಲರೂ ನನಗೆ ಗುರುಗಳು ಎಂಬಂತೆ.ಅತ್ತುತಮ ಕಾದಾಂಬರಿಕಾರರಾಗಿ ಗಜಲಗಾರ್ತಿಯಾಗಿ , ವಿಮರ್ಶಕಿ ಕ್ರಾಂತಿಕಾರಿ,ಪ್ರಗತಿಪರ,ದಿನ ದಲಿತರ ವಿಮೋಚನೆಗಾಗಿ ಟೊಂಕ ಕಟ್ಟಿ ನಿಂತು ಕನ್ನಡ ನಾಡಿನ ಸಾಹಿತಿಗಳಾಗಿ ನಾಡಿನ ಬದುಕನ್ನು ಹಸನಗೊಳಿಸುತ್ತಿರುವುದು ನಾಡಿಗೆ ಹೆಮ್ಮೆಯ ವಿಷಯ ಇಂತಹ ಪ್ರತಿಭಾವಂತ ಗಾಯಕವಾಡ ಕನ್ನಡಿಗರ ಹೆಮ್ಮೆಯ ಸಾಹಿತಿ ನನ್ನ ನೆಚ್ಚಿನ ಸಾಹಿತಿಗಳು ಡಾ.ಜಯದೇವಿ ಗಾಯಕವಾಡ.


Leave a Reply

Back To Top