ಮಧುಕುಮಾರ ಸಿ.ಎಚ್ ಅವರ ಕವಿತೆ-ಯೋಗ್ಯತೆಯ ನಿರ್ಧಾರ

ನಾನು ಪ್ರಯತ್ನಿಸಿದೆ.
ಅವರು ಷರಾ ಬರೆದರು:
‘ನೀನು ಯೋಗ್ಯನಲ್ಲವೆಂದು’
ನಾನಾಗ ಸುಮ್ಮನಾಗಿ ಬಿಟ್ಟೆ.

ಮತ್ತೊಮ್ಮೆ ಪ್ರಯತ್ನಿಸಿದೆ.
ಅವರು ತೀರ್ಮಾನಿಸಿದರು:
‘ನೀನಿನ್ನು ಸಮರ್ಥನಾಗಿಲ್ಲವೆಂದು’
ನಾನಾಗಲು ನಕ್ಕು ಮೌನವಾದೆ.

ಕೊನೆಯದೆಂದು ಪ್ರಯತ್ನಿಸಿದೆ.
ಅವರು ಸತ್ಯ ಹೇಳಿದರು:
‘ನಿನಗೆ ಯೋಗ್ಯತೆಯಿದೆ, ಯೋಗವಿಲ್ಲ’
ಸತ್ಯ ಒಪ್ಪಿಕೊಂಡು ಉಸಿರಾಡುತ್ತಾ
ಮತ್ತೂ ಸುಮ್ಮನಾದೆ!

ಈಗೆಲ್ಲವೂ ಅಭ್ಯಾಸವಾಗಿದೆ
‘ನನಗೆ ನಾನೇ ಷರಾ ಬರೆದುಕೊಂಡೆ’
ಯಾರೊಬ್ಬರ ಯೋಗ್ಯತೆಯನ್ನು
ಇನ್ಯಾರೋ ನಿರ್ಧರಿಸಲಾರರು!


4 thoughts on “ಮಧುಕುಮಾರ ಸಿ.ಎಚ್ ಅವರ ಕವಿತೆ-ಯೋಗ್ಯತೆಯ ನಿರ್ಧಾರ

  1. ನಮ್ಮ ನಿಜಜೀವನದಲ್ಲಿ ನಾವೇ ಒಂದು ಷರ ಬರೆದುಕೊಳ್ಳಬೇಕು ಆಗ ಮಾತ್ರ ನಾವು ಯಶಸ್ವಿ ಆಗೋದಕ್ಕೆ ಸಾಧ್ಯ.

    ನಿಮ್ಮ ಕವಿತೆ ಸಾವಿರಾರು ಜೀವಗಳಿಗೆ ಉಸಿರು ಕೊಡುತ್ತೆ ಅಣ್ಣ

    1. ಅಂತರವಲೋಕನಕ್ಕೆ ಸೂಕ್ತ ಸಾಲುಗಳು thank you ana

  2. ಸ್ಪೂರ್ತಿ ನೀಡುವ ಸಾಲುಗಳ ಕಲರವ ಅಣ್ಣ…..ಕವನಗಳ ಕೃಷಿ ಕಾರ್ಯ ಹೀಗೆ ಮುಂದುವರೆಯಲಿ….

Leave a Reply

Back To Top