ವರಲಕ್ಷ್ಮಿ ಅವರ ಕವಿತೆ-ಆತ್ಮ ಪರಮಾತ್ಮ ಜೀವಾತ್ಮ

ಮೋಹ ಮಾಯೆಯ ಬಂಧನಕ್ಕೆ
ನಿಲುಕದು ಆತ್ಮ
ನೆಲೆಸಿರೆ ಪರಮಾತ್ಮ ಹೃದಯದಲಿ
ಬ್ರಹ್ಮ ಸ್ವರೂಪಿ ಜೀವಾತ್ಮ
ಚೈತನ್ಯಪುಂಜವ

ಮಂಥನವದು ಮನದೊಳಗೆ
ಅಸೂಯೆಯ ಕುಂಭವದು
ಹೊರ ಬರಲು , ನುಂಗಬೇಕು
ಉಸಿರ ಬಿಗಿ ಹಿಡಿದು
ನಂತರ ಹರಿಯುವುದು
ಆಮೃತ ಧಾರೆ

ಸಿರಿ ಸಂಪತ್ತದು ಹರಿದು ಪೋಗುವ.
ನದಿಯ ನೀರಂತೆ
ಲೋಭ ಬೇಡ ನಶ್ವರವಾದ
ವಸ್ತುಗಳ ಮೇಲೆ
ತುಂಬೇಕು ಮನವ ಸುವಿಚಾರಗಳ
ಜಲದಿ

ಸ್ನೇಹ ವಿಶ್ವಾಸಗಳ ಅಮೃತ ಜಲದಿ
ತುಂಬಬೇಕು ಹೃದಯವ
ಜೀವಾತ್ಮನ ಚೈತನ್ಯ ಸ್ವರೂಪಿ
ಅಂತರಾತ್ಮವದು ಪರಮಾತ್ಮನ
ನೆಲೆಯಾಗುವುದು.

——————————————-

One thought on “ವರಲಕ್ಷ್ಮಿ ಅವರ ಕವಿತೆ-ಆತ್ಮ ಪರಮಾತ್ಮ ಜೀವಾತ್ಮ

Leave a Reply

Back To Top