ಕಾವ್ಯ ಸಂಗಾತಿ
ನಾಗರಾಜ ಜಿ. ಎನ್. ಬಾಡ
ಬಾರೋ ವರುಣ
ಆರುತ್ತಿದೆ ಜೀವ ಜಲ
ಕುಗ್ಗುತ್ತಿದೆ ಹಸಿರಬಲ
ಬಾಯಿ ತೆರೆಯುತ್ತಿದೆ ನೆಲ
ಒಣಗುತ್ತಿದೆ ರೈತನ ಹೊಲ
ಗುಟುಕು ನೀರು ಸಿಗುತ್ತಿಲ್ಲ
ಬಾಯಾರಿಕೆ ನೀಗುತ್ತಿಲ್ಲ
ಪಶು ಪಕ್ಷಿಗಳ ಗೋಳು ಕೇಳುವವರಿಲ್ಲ
ಬಿಸಿಲ ಬೇಗೆಗೆ ನರಳುವಿಕೆ ನಿಲ್ಲುತ್ತಿಲ್ಲ
ಒಣಗುತ್ತಿವೆ ಹಸಿರ ಗಿಡಮರಗಳು
ಬರಿದಾಗುತ್ತಿವೆ ಬಾವಿಗಳು ಮಾಯವಾಗುತ್ತಿದೆ ನದಿ ತೊರೆಗಳು
ವಿಲವಿಲ ಒದ್ದಾಡುತ್ತಿವೆ ಮತ್ಸ್ಯ ಸಂಕುಲಗಳು
ಹಗಲು ಎಲ್ಲೆಡೆ ಸುಡುವ ಬಿಸಿಲು ಮನೆಯಿಂದ ಹೊರಬರಲು ದಿಗಿಲು
ಮನೆಯ ಒಳಗೆ ಕುದಿಯುವ ಒಡಲು ಆಗುತ್ತಿಲ್ಲ ಜೀವಿಗಳ ಸಂಕಟ ನೋಡಲು
ನಿದ್ದೆ ಬಾರದು ಎಂದಿನಂತೆ ರಾತ್ರಿ
ಜಾಗರಣೆ ಮಾತ್ರ ಖಾತ್ರಿ ಖಾತ್ರಿ
ಜೊತೆಗಿರಲಿ ಯಾವುದಕ್ಕೂ
ನಿಮ್ಮ ಜೊತೆಯಾಗಿ ಒಂದು ಛತ್ರಿ
ನಿಮ್ಮ ಬದುಕನ್ನ ತಂಪಾಗಿಸಿಕೊಳ್ಳಿ
ಏನಂತ್ರಿ..?
ಸುಡದಿರು ನೀ ಅರುಣ
ತಂಪಾಗಿಸು ನಿನ್ನ ಕಿರಣ
ಬಾರೋ ಬಾರೋ ವರುಣ
ತೋರು ನೀ ಸ್ವಲ್ಪ ಕರುಣ
ಸುರಿಸು ನೀ ಮಳೆಯ ಹನಿಯ
ತೊಡಿಸು ನೀ ಜೀವಕಳೆಯ
ಕಳೆದುಬಿಡು ನೀ ಈ ಜಗದ ಕೊಳೆಯ ತುಂಬಿಸು ಹೊಳೆ ಕೆರೆಯ
ತಂಪಾಗಿಸು ಈ ಧರೆಯ
ಕೇಳಲಾರೆಯ ಈ ನನ್ನ ಕರೆಯ
ನಾಗರಾಜ ಜಿ. ಎನ್. ಬಾಡ
ಚೆನ್ನಾಗಿ ಮೂಡಿ ಬಂದಿದೆ