ಮನ್ಸೂರ್ ಮೂಲ್ಕಿ ಕವಿತೆ-ವಿಜ್ಞಾನದ ಬದುಕು

ಚಂದಿರ ನೀನು ಏತಕೆ
ದುಂಡುನೆ ಕಾಣುವೆ ಬಾನಲ್ಲಿ
ನಿನ್ನಯ ನೆಲಕೆ ಬರುವ ಆಸೆಯು
ಇರುವುದು ನನಗೆ ಬಾಳಲ್ಲಿ

ಚೆಂಡಿನಂತೆ ತೆವಳುವ ನಿನ್ನ
ಹೊಳಪಿನ ಗುಟ್ಟು ಏನಂತೆ
ಸೂರ್ಯನ ಬೆಳಕಿಗೆ ತಡೆಯನು ಮಾಡುತ
ರಾತ್ರಿಗೆ ಕಾರಣ ನೀನಂತೆ

ಬರುವೆನು ನಾನು ನಿನ್ನಯ ನೆಲಕೆ
ವಿದ್ಯೆಯ ಕಲಿಯುತ ಸುಲಭದಲಿ
ನಿನ್ನ ಅಂಗಳದಲ್ಲಿ ಮನೆಯನು ಮಾಡುತ
ಬದುಕುವೆ ನಾನು ವಿಜ್ಞಾನದಲಿ

ಬ್ರಹ್ಮಾಂಡದ ಸಕಲ ವಿಸ್ಮಯವನ್ನು
ವಿದ್ಯೆಯು ಇರದಿರೆ ತಿಳಿಯುದು ಹೇಗೆ
ನೈಜ ಬದುಕಿಗೆ ವಿಜ್ಞಾನವೇ ಮೂಲವು
ಕಲಿಯುವೆನೆಂಬ ಛಲವು ನನಗೆ

Leave a Reply

Back To Top