ಕಾವ್ಯ ಸಂಗಾತಿ
ಪ್ರಮೋದ ಜೋಶಿ
ಬನ್ನಿ ಗೆಳೆಯರೆ ಮತ್ತೆ ಜ್ಯೋತಿ ಹಚ್ಚೋಣ
ಬನ್ನಿ ಗೆಳೆಯರೆ ಮತ್ತೆ ಜ್ಯೋತಿ ಹಚ್ಚೋಣ
ಕಡು ಬಿಸಿಲಿನೊಳು ಕತ್ತಲಾಗುತಿದೆ
ಸೂರ್ಯನು ಕೂಡಾ ಹೆದರುತಿಹನು
ಓಡಾಡುವ ಕುಹಕ ನೆರಳಿಗೆ
ಆತ್ಮದ ಆತ್ಮವೂ ನೊಂದು ಮಂಕಾಗಿದೆ
ದೊರಕದ ಮಾತಿನ ಸಾಫಲ್ಯಕೆ
ನಿತ್ಯದ ಬೆಳಕಿಗೆ ನಿತ್ಯವೂ ಗ್ರಹಣ
ಸಾಕಾಗಿದೆ ವಿಧಿ ವಿಧಾನದ ರೀತಿಗೆ
ತೃಣ ಮಾತ್ರದ ಸಫಲತೆ ಗುರಿಸಾಧನೆ ಎಂದೆವು
ಕಣ್ಣುಗಳಲ್ಲಿ ಮಾತ್ರ ಕಾಣುತ್ತಿಲ್ಲಾ
ವರ್ತಮಾನದ ಮೋಹಕೆ ಬಿದ್ದು
ಬರುವ ದಿನಗಳನೇ ಮರೆತಿಹೆವು
ಪೂರ್ಣಾಹುತಿಯಾಗದ ಯಜ್ಞಕ್ಕೆ
ನಮ್ಮವರಿಂದಲೇ ವಿಘ್ನದ ಬಳುವಳಿ
ತುಂಬಿದ ಶಕುನಿಗಳ ಕೈಯಲ್ಲಿ
ನಮ್ಮದೇ ಎಲುಬಿನ ದಾಳದ ದಾಳಿ
ನಲುಗುತಿದೆ ಹಲಬುತಿದೆ ಜೀವ
ಬೆಳಕಲ್ಲೇ ಕತ್ತಲು ಕಾಣುತಿರಲು
ಎಗ್ಗಿಲ್ಲದೆ ಮಬ್ಬಾದ ಜೀವಕೆ ಬೆಳಕಾಗಲು
ಬನ್ನಿ ಗೆಳೆಯರೆ ಮತ್ತೆ ಜ್ಯೊತಿ ಹಚ್ಚೋಣ
ಹಿಂದಿನ ದಿನ ಮರೆಯೋಣ
ಇಂದಿನ ದಿನ ಅರಿಯೋಣ
ನಾಳಿನ ದಿನದ ಬೆಳಕಿಗಾಗಿ
ಬನ್ನಿ ಗೆಳೆಯರೆ ಹಚ್ಚೋಣ ಜ್ಯೋತಿ
ಪ್ರಮೋದ ಜೋಶಿ
ಹಚ್ಚೋಣ ದೀಪದಿಂದ ಇನ್ನೊಂದು, ಇನ್ನೆಂದೂ ಆರದ ದೀಪವ ಹಚ್ಚೋಣ …..
Super