ಕಾವ್ಯ ಸಂಗಾತಿ
ಡಾ.ರೇಣುಕಾತಾಯಿ.ಸಂತಬಾ.
ಗಜಲ್
ಅವಳ ಸಾವಿನ ಜೊತೆ ಅವನ ಹೆಸರು ಕೆಸರಾಯಿತು
ಪುಟ ಪುಟದಲಿ ಅವರದೇ ಕಥೆ ಸುದ್ದಿಯಾಯಿತು//
ಬರೆದ ಪ್ರೇಮ ಪತ್ರಗಳೆಲ್ಲ ಗಾಳಿಯ ಮಾತಾದವು
ಇಬ್ಬರ ಗುಟ್ಟು ರಟ್ಟಾಗಿ ಬೀದಿ ಬೀದಿಲಿ ಹಾರಾಡಿತು//
ರಂಗಮಂಚವನೇರಿ ನಾಟಕವು ನೂರು ಆಟ ಕಂಡಿತು
ರಿಂಗಣದ ದನಿಗಳೆಲ್ಲ ಅವರದ್ದೇ ಹಾಡಾಗಿ ಹರಿಯಿತು//
ಅವಳ ಒಡಲ ಬಗೆದ ರಕುತ ಹಲವು ಬೀಜಗಳಾದವು
ಬೀಜ ಬಿತ್ತಿದವರೆಲ್ಲರ ಫಸಲು ಬೆಳೆದು ನಿಂತುಬಿಟ್ಟಿತು//
ಚಪಲ ಛಲಗಾರರು ಚಪ್ಪರಿಸಿ ಚಟವ ತೀರಿಸಿಕೊಂಡರು
ತಾಯಿ ನುಡಿದಳು ನಾಲಿಗೆ ಕಚ್ಚುವ ಹಲ್ಲನು ಮರೆಯಿತು//
ಡಾ.ರೇಣುಕಾತಾಯಿ.ಸಂತಬಾ.