ಕಾವ್ಯ ಸಂಗಾತಿ
ಸವಿತಾ ದೇಶಮುಖ
ಕಾಯುತ್ತಿರುವೆ
ಕಾಯುತ್ತಲಿದ್ದೆ
ನಿರಾಕಾರ
ನಿರ್ವಿಕಾರ ಆಣತಿಗಾಗಿ
ನಿಸ್ವಾರ್ಥ ಸ್ವ-ಪರ
ಕಾಯಕಯೋಗಿಗಾಗಿ
ಹಾತೊರೆಯುತ್ತಿದ್ದೆ
ನಿಜದ ಅರವಿಗಾಗಿ
ಅಬಲೆಯ ಅನಿವಾರ್ಯತೆಯ
ಸದುಪಕಾರಿಗಾಗಿ
ದೀನದುಖಿಗಳ ಕಣ್ಣು ಒರೆಸುವ
ಉಪಕಾರಿಗಾಗಿ
ಹಿಂಸೆ ಅತ್ಯಾಚಾರಕ್ಕೆ
ಒಳಗಾದವರ ಕೈಯೆತ್ತಿ ಹಿಡಿದು
ನಡೆಸುವ ಯೋಗಿಗಾಗಿ
ಕರುಣೆ ಶಾಂತಿಯ
ಮಾನಸ ಸರೋವರದಲ್ಲಿ
ಮಿಂದು ನೆಂದು ನಲಿಯುವುದಕ್ಕಾಗಿ
ಸಾರಸಜ್ಜನಿಕೆಯ
ಕಾಯಕ ಗುರುವಿಗಾಗಿ
ಲಿಂಗವಳಿದ
ಮೇರು ಆತ್ಮಕ್ಕಾಗಿ
ನಿಯತಿ ಗತಿಯಲ್ಲಿ
ಋತು ಋತುಗಳು
ಉರುಳಿದವು
ವರ್ಷಗಳು ಕಳೆದವು
ಕಾಣದೆ ಹೋದೆ
ಎನ್ನ ಆತ್ಮೋದ್ದಾರಕನ
ಜಗದ ಜಾಡ್ಯವ
ಮರೆಸುವ ಜೀವಕ್ಕಾಗಿ
ಬೆಳದಿಂಗಳಲ್ಲಿ ಕಾಯುತ್ತಿರುವೆ
ಆತ್ಮ ಬೆಳಕಿನ ಬೆಳಗಿಗಾಗಿ
ಸವಿತಾ ದೇಶಮುಖ
ಒಂದು ಸುಂದರವಾದ ಆತ್ಮದೊಳಗಣ ಕಾಯುವಿಕೆಗೆ ಶಬ್ದಗಳ ಚಾತುರ್ಯತೆಯಿಂದ ನೈಜತೆಯ ಹೊಳಹು ತುಂಬಿಕೊಟ್ಟಿದ್ದೀರಿ…
ಸುಶಿ
ತುಂಬು ಹೃದಯದ ಧನ್ಯವಾದಗಳು
Thanku
ತುಂಬಾ ಸುಂದರವಾದ ಕವಿತೆ