ನಾಗರಾಜ ಬಿ.ನಾಯ್ಕ ಕವಿತೆ-ಜೀವಜಲ

ಇಳೆಯ ಹಸಿರು
ಜೀವದುಸಿರು
ಕಣ ಕಣದಿ
ಮಣ್ಣ ಹೆಸರು

ಹನಿಹನಿಯಲೂ
ಒಲವ ಭಾವ
ಝರಿ ಸಿರಿಯಲೂ
ಕುಣಿವ ಜೀವ

ಎಳೆಎಳೆಯೂ
ಬುವಿಗೆ ಪರಿಚಿತ
ಬದುಕ ಭರವಸೆ
ನಗುವ ಕುಣಿತ

ಬಿರು ಬಿಸಿಲಿನ ಝಳ
ತುಂಬಿ ಬಂದಂತೆ
ಕಾಯುತಿಹುದು ನೆಲ
ಬಿಸಿಯಾದಂತೆ

ಸೋತು ಹೋಗಿದೆ
ಪಕ್ಷಿ ಬಳಗ
ಕಾದು ನಿಂತಿದೆ
ಮಾತಿನೊಳಗ

ಜಗವ ತುಂಬುವ
ನಗುವ ಹುಡುಕಿದೆ
ಹನಿ ನೀರ ಒಡಲೊಳಗೆ
ಜೀವಜಾಲ ಬದುಕಿದೆ

6 thoughts on “ನಾಗರಾಜ ಬಿ.ನಾಯ್ಕ ಕವಿತೆ-ಜೀವಜಲ

  1. ಮಾನವೀಯ ಸೆಲೆ ಹರಿದಿದೆ ಕವನವಾಗಿ.
    ರಾಮಮೂರ್ತಿ.

  2. ಹಸಿರು ನಮ್ಮೆಲ್ಲರ ಉಸಿರು.. ಹಸಿರ ಉಸಿರು ಕಾಯಲು ಬೇಕು ಜೀವ ಜಲ..
    ಜೀವಜಾಲವ ಕಾಯುವುದು ಹನಿ ಹನಿ ನೀರು.. ಈ ಹನಿ ನೀರನ್ನು ಉಳಿಸುವ ಕಾಯಕ ನಮ್ಮದಾಗ ಬೇಕು… ಕವಿತೆ ಚೆನ್ನಾಗಿದೆ…

    ನಾನಾ

  3. ಸರ್ ಕವಿತೆ ಓದಿ ತುಂಬಾ ಖುಷಿ ಆಯಿತು

    ವಾಹಿನಿ

Leave a Reply

Back To Top