ಕಾವ್ಯ ಸಂಗಾತಿ
ಇಂದಿರಾ.ಕೆ
ಸೂರ್ಯನ ಬಿಸಿಲಿನ ಬೇಗೆ
ರಣ ರಣ ಬಿಸಿಲಿನ ಕಾವೇರಿದೆ
ಧರೆಗೆ
ಝಳ ಝಳ ಬಿಸಿನೀರಿನ
ಸ್ನಾನವ ಮಾಡಿಸುತಿದೆ
ದೇಹಕೆ…
ಮೈಯೆಲ್ಲ ಬೆವರು, ಬೆವರು
ಗುಳ್ಳೆಗಳು ಸೂರ್ಯನ
ಬಿಸಿಲಿನ ಬೇಗೆಗೆ
ನೀರಿಲ್ಲದೆ ಬರಡು -
ಬರಡಾಗಿಸಿದೆ ಈ ಭುವಿಗೆ...
ಬೆಳೆಯಿಲ್ಲದೆ, ಫಸಲಿಲ್ಲದೆ
ಬಸವಳಿದಿದೆ ರೈತನ ಮೊಗದ
ಕಳೆ
ಪ್ರಾಣಿ, ಪಕ್ಷಿಗಳೆಲ್ಲ
ತಂಪರಸಿ ಹಾರುತಿವೆ
ನಾನಾ ಕಡೆ...
ಧಗೆಯ ಲೆಕ್ಕಿಸದೆ ದುಡಿದು
ತಿನ್ನುವವರಿಗಿಲ್ಲ ವಿಶ್ರಾಂತಿ
ಸೂರ್ಯದೇವ, ನೀ ಎಂದು
ಆಗುವೆ ಶೀತಲದ ಶಾಂತಿ...
ಈಗಲಾದರೂ ಕೊಂಚ
ಅಪ್ರದರ್ಶಿತನಾಗು ನೇಸರ
ಜೀವಸಂಕುಲಕೆ ನೆಮ್ಮದಿಯ
ನಿಟ್ಟುಸಿರು ಬಿಡು ಭಾಸ್ಕರ...
ಮಾನವನ ದುರಾಸೆಯ
ಪ್ರತಿಫಲ ಈ ದುಸ್ಥಿತಿ
ಮುಂದಾದರೂ ಎಚ್ಚೆತ್ತು
ಗಿಡಮರಗಳ ಬೆಳೆಸೋಣ
ಪರಿಸರವ ಉಳಿಸೋಣ...
--------------------------------
ಇಂದಿರಾ.ಕೆ
Hat’s off madam.