ಕಾವ್ಯ ಸಂಗಾತಿ
ಎ ಎಸ್.ಮಕಾನದಾರ
ಹನಿಗಳು
ತಂಪು ಚಂದ್ರಿಕೆ
ಇರುಳು ಕುರುಹಿಗೆ
ಚಂದ್ರನ ರುಜು
ನಸುಕಿನಲಿ
ಬೆಳಕಿಂಡಿ ಬೆಳಕು
ಸೂರ್ಯನ ರುಜು
ವಸುಂಧರೆಯ
ಆಡಂಬೋಲ ,ಹಸಿರು
ಕಪ್ಪತ್ತಗುಡ್ಡ
ಸಖಿ ಉಸಿರ
ಗಂಧ ಸೂಕಿ, ಬಿರಿದ
ಕೆಂಪು ಗುಲಾಬಿ
ತೊಗಲ ಬಣ್ಣ
ನಗಣ್ಯ, ಸಲ್ಲದೆಂದೂ
ಅಸಮಾನತೆ
ನಾನೆಂಬ ಸೊನ್ನೆ
ಅವಳೆಂಬ ಗಣಿತ
ಲೆಕ್ಕ ಸಮಾನ
ಬೀಗ ಜಡಿದ
ಮನದಲಿ, ಮೂಡಿತೆ
ಉಷಾ ಕಿರಣ
ಸುರಿದ ಮಳೆ
ಧರೆ ತಂಪು,ಮುಂಗಾರು
ಅಧಿವೇಶನ
ರಂಭೆಯಂತಹ
ಸೊಸೆ ಕೈಯಲಿ, ಮಗ
ಕೀಲು ಗೊಂಬೆಯೇ
ವಿಕಾರವನು
ಬಿಚ್ಚಿ ಎಸೆ , ಕಂಡಿತು
ವಾಸ್ತವತೆಯು
ಕಂಡ ಕನಸು
ನನಸೀಗ,ಕೂಡಲು
ಒಲವ ದಾರಿ
ಕಾದ ಹಂಚಿಗೆ
ಮಸಿ ಬಟ್ಟೆಯ, ಪ್ರೀತಿ
ಸಾಂತ್ವನ ನುಡಿ
ಬೂದಿ ಉಂಡಂತ
ಜೀವಕೆ,ಕೆಂಡ ಹೇಳ್ತು
ಬೆಳಕ ನುಡಿ
ಮೇಟಿ ಹಿಡಿದ
ಕೈ ಸೋತಿತು,ದಲ್ಲಾಳಿ
ಕೋಟಿ ವೀರಾದ
ಅಖಾಡದಲಿ
ಒಪ್ಪಿದೆ ಸೋಲು, ಬೇಡ
ಕೆಸರಿನಾಟ
ವಿಷ ಬೆರೆತ
ಹಾಲೂ ಕುಡಿದೆ, ಸಿಹಿ
ಜೇನ ಮಾತಲಿ
ಮೊನಚಾಗಿದೆ
ನಾಲಿಗೆ,ಕತ್ತಿಗಿಂತ
ಮಾತೇ ಹರಿತ
ಸದಾ ಕಾಲದಿ
ಹಾಯಾಗಿರು, ಒಲವ
ಪ್ರೀತಿ ಬನದಿ
ಮುನಿಸಿಕೊಂಡ
ವಧು,ಮಧುಚಂದ್ರಕೆ
ಖುಷಿಯ ನಗು
ಎ ಎಸ್.ಮಕಾನದಾರ
ತಮ್ಮ ಸಾಹಿತ್ಯ ಪ್ರೀತಿಗೆ ಅಭಾರಿ ಸರ್
ತಾವು ಕಟ್ಟಿದ ಪದಗಳ ಗೊಂಚಲು ತುಂಬಾ ಚೆನ್ನಾಗಿದೆ ಸರ್.