ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

೧. ಬಿಸಿಲಿನ ಝಳಕ್ಕೆ
ಖಗಪ್ರಾಣಿ ತತ್ತರ
ಮನುಜನೀ ಇದಕ್ಕೆ
ಹೇಳಬೇಕು ಉತ್ತರ

೨.ಮುಚ್ಚಿವೆ ಶಾಲೆಗಳು
ಬಂಧಿ ಮನೆಯೊಳಗೆ
ರವಿಮಾಮ ನಮಗೆ
ಬಿಡುತ್ತಿಲ್ಲ ಹೊರಗೆ

೩.ಕೆಂಡದುಂಡೆಯಾಗಿದೆ
ಸೂರ್ಯನ ಈ ಒಡಲು
ಕಾರಣವಿದಕ್ಕೇನೆ…
ಖಾಲಿ ಕಾಡಮಡಿಲು

೪.ಅವನು ಬಿಸಿಕಿರಣ
ಇವಳು ಬೆಂದೊಡಲು
ಒಂದಾಗಲು ಬೇಕೇನು
ಘನಮೋಡ ಮುಗಿಲು

೫.ಮಾವು ಬೇವಿಗೆ ಇಷ್ಟ
ಬೇಸಿಗೆಯ ಈ ಕಾಲ
ಸೂಜಿ ದುಂಡುಮಲ್ಲಿಗೆ
ಘಮಕ್ಕಿದು ಸಕಾಲ

೬.ಮನೇಲಿದ್ದರೂ ದೂರು
ಎಂಥಾದ್ದಿದು ಬೇಸಿಗೆ
ಬಯಲ ಪ್ರಾಣಿಗಳ
ಕಷ್ಟ ಕಾಣದೆಮಗೆ


About The Author

Leave a Reply

You cannot copy content of this page

Scroll to Top