ಡಾ.ಡೋ.ನಾ.ವೆಂಕಟೇಶ ಕವಿತೆ-ನಾವೂ ಕಾರ್ಮಿಕರೇ

ಬರೆ ಮಣ್ಣು ಹೊತ್ತವನಲ್ಲ ಶ್ರಮಿಕ
ಹೊಗೆ ಕಪ್ಪಾದವನಷ್ಟೇ ಅಲ್ಲ ಕಾರ್ಮಿಕ!
ನಾವೂ ಸಹ ಕಾರ್ಮಿಕರೇ !!

ಬಿಳಿ ಬಟ್ಟೆ ಹೊದ್ದು ಜೀವನದುದ್ದಕ್ಕೂ
ರೋಗಿಯಷ್ಟೇ ಅಲ್ಲ,
ಅವನ ಇಷ್ಟ-ಅನಿಷ್ಟಗಳ ಮರ್ಜಿ ಹಿಡಿದವನು,
ತಲೆ ಮೇಲೆ ತನ್ನ ತಲೆ ಕಾಯುವವನ
ಮರ್ಜಿ ಹಿಡಿದು ತಲೆ ಕಳೆದು ಕೊಳ್ಳುವ ನಾನು ಬೇರೆಲ್ಲರ
ತಲೆ ಕಾಯುವವನು!

ಶ್ವೇತ ವಸ್ತ್ರ ಧಾರಿಗಳು ನಾವು
24×7 ದುಡಿವವರು ನಾವು
ವೈದ್ಯರು!

ವಸ್ತ್ರದ ಕಲೆ ಮರೆಮಾಚಿ ಸೀದಾ
ತಮ್ಮ ಹೃದಯದೊಳಗಣ ಕಲೆಯಲ್ಲಿ
ಮತ್ತಾರದೋ ಜೀವನದ ಸುಗ್ಗಿ
ಹಾಡುವವರು,
ಸಚಿತ್ರ ಬಿಡಿಸುವ ಕಲಾಕಾರರು

ಆದರೂ ಕಾರ್ಮಿಕರು ನಾವು
ನಿಮ್ಮ ದೇಹ ದೇಗುಲ ಕಟ್ಟುವವರು
ಸದಾ ನಿಮ್ಮುಪಚಾರಕ್ಕೆ ಸಿದ್ಧ ಹಸ್ತರು
ನಿಮ್ಮ ತೇಲುವ ಹಡಗಿನ
ಹಾಯಿ ಕಾರರು,
ಲಂಗರು ಹಾಕುವವರು!

ಎಂದೇ
ನಿಜ್ಜ ಕಾರ್ಮಿಕರು ನಾವು-
ನಾವ್ ವೈದ್ಯರು
ನಿಮ್ಮೆಲ್ಲರ ಡಾಕ್ಟರು!

ವೈದ್ಯೋ ನಾರಾಯಣೋ ಹರಿಃ


6 thoughts on “ಡಾ.ಡೋ.ನಾ.ವೆಂಕಟೇಶ ಕವಿತೆ-ನಾವೂ ಕಾರ್ಮಿಕರೇ

  1. ವಿಶ್ವ ಕಾರ್ಮಿಕರದಿನದಂದು
    ವೈದ್ಯರ ಬಗ್ಗೆ ನಿಮ್ಮ ಭಾವನೆಗಳನ್ನು ಕವಿತೆಯಲ್ಲಿ ಚೆನ್ನಾಗಿ ವ್ಯಕ್ತಪಡಿಸಿದ್ದೀರಿ.

  2. ನಿಜ. ನಾವೂ ಕಾರ್ಮಿಕರು… ಆದರೆ ಸಾಧಾರಣ ಜನರಿಗೆ ನಾವು ಬರೇ ಮಿಕಗಳು ಅಷ್ಟೇ.
    ಡಾಕ್ಟರ್ ಸೂರ್ಯ ಕುಮಾರ್ ಮಡಿಕೇರಿ.

    1. ನಿಜ ಸೂರ್ಯ. ಈ system ನಲ್ಲಿ ನಾವು ನಿಜಕ್ಕೂ ಮಿಕಗಳೇ. ಅಮೂಲ್ಯ ಖನಿಜ ಗಳ ಗಣಿ ಈಗ ಖಾಲಿ ಖಾಲಿ

Leave a Reply

Back To Top