‘ಕಾರ್ಮಿಕರ ದಿನ ಇಂದಿಗೂ ಪ್ರಸ್ತುತ’ ಲೇಖನ-ಮಾಧುರಿ ದೇಶಪಾಂಡೆ

ಕಾರ್ಮಿಕರು ದಿನ ನಿತ್ಯದ ಜೀವನದಲ್ಲಿ ಬಹಳ ಮಹತ್ವವನ್ನು ಹೊಂದಿರುತ್ತಾರೆ. ರೈತರು ಮತ್ತು ಸೈನಿಕರು ದೇಶದ ಬೆನ್ನೆಲುಬಾದರೆ.  ಕಾರ್ಮಿಕರು ಹೊಟ್ಟೆಯ ಭಾಗವಾಗಿದ್ದಾರೆ.  ಏಕೆಂದರೆ ಇಂತಹ ಕಾರ್ಮಿಕರಿಲ್ಲದೆ ಸಂಘ ಸಂಸ್ಥೆ ಕಾರ್ಖಾನೆಗಳ ಕೆಲಸವೇ ನಡೆಯುವುದಿಲ್ಲ.  ಇಂತಹ ಕಾರ್ಮಿಕರ ಸಮಸ್ಯೆಯು ಇಂದು ದೇಶಕ್ಕೆ ಸೀಮಿತವಲ್ಲದೇ ಜಾಗತಿಕ ಸಮಸ್ಯೆಯಾಗಿದ್ದಿತು. ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಕೂಡ ಈ ಸಮಸ್ಯೆ ಶತಮಾನದ ಹಿಂದಿನಿಂದಲೂ ಇತ್ತು.  ಕಾರ್ಮಿಕರ ಯೋಗಕ್ಷೇಮ ಮತ್ತು ಅವರ  ಕೊಡುಗೆಯನ್ನು ನೆನಪಿಸಿಕೊಳ್ಳಲು ಮೇ 1ನೇ ತಾರೀಖನನ್ನು ಅಂತಾರಾಷ್ಟ್ರೀಯ ಕಾರ್ಮಿಕ ದಿನವನ್ನಾಗಿ 1886ರಿಂದಲೇ ಆರಂಭಿಸಿದ್ದರು.  ಭಾರತದಲ್ಲಿ ಕಾರ್ಮಿಕ ದಿನವನ್ನು 1923ರಲ್ಲಿ ಆರಂಭಿಸಲಾಯಿತು. ಜಾಗತಿಕವಾಗಿ ಕಾರ್ಮಿಕರ ಸಮಸ್ಯೆಗಳು ಇಂದಿಗೂ ಪ್ರಸ್ತುತವೇ ಆಗಿದೆ.  ಮೊದಲು ಎಲ್ಲ ರೀತಿ ಕಾರ್ಮಿಕರದ್ದೂ ಸಮಸ್ಯೆಯೇ ಇತ್ತು ಆದರೆ ಇಂದಿನ ಸಮಯದಲ್ಲಿ ಸಂಘಟಿತ ಕಾರ್ಮಿಕರ ಸಮಸ್ಯೆಗಳನ್ನು ಪರಿಹಾರ ಮಾಡಲು ಸಂಘಳು ಹೋರಾಡುತ್ತವೆ. ಆದರೆ ಇಂದಿನ ಪರಿಸ್ಥಿತಿಯಲ್ಲಿ ಲಕ್ಷಾಂತರ ಅಸಂಘಟಿತ ಕಾರ್ಮಿಕರ ಸಮಸ್ಯೆ ದೊಡ್ಡ ಪ್ರಮಾಣದಲ್ಲಿದೆ. 137 ವರ್ಷಗಳ ಹೋರಾಟದಿಂದಲೂ ಎಲ್ಲ ವಲಯದ ಕಾರಮಿಕರಿಗೆ ನ್ಯಾಯ ದೊರಕದಿರುವುದು ವಿಷಾದನೀಯ.  ಕೂಲಿ ಕಾರ್ಮಿಕರು ಅಸಂಘಟಿತ ಕಾರಮಿಕರಿಗೆ ಇನ್ನೂ ಹೆಚ್ಚಿನ ತಿಳುವಳಿಕೆಯನ್ನು ನೀಡುವುದು ಈ ದಿನಾಚರಣೆಯ ಮಹತ್ವ ಮತ್ತು ಅವಶ್ಯಕತೆಗಳನ್ನು ಮನದಟ್ಟು ಮಾಡಬೇಕು.

ಅಸಂಘಟಿತ ಕಾರ್ಮಿಕರು ಎಂದರೆ ಮನೆ ಕೆಲಸದವರು , ಕೂಲಿ ಕಾರ್ಮಿಕರು, ಆಟೋ ಅಥವಾ ಖಾಸಗಿ ವಾಹನ ಚಾಲಕರು ಇಂತಹ ಅನೇಕ ಜನರು ಬರುತ್ತಾರೆ. ಯಾವುದೇ ಒಂದು ಸಂಸ್ಥೆ ಅಥವಾ ಕಾರ್ಖಾನೆಯಲ್ಲಿ ಕಾರ್ಮಿಕ ಹಿತರಕ್ಷಣಾ ಸಂಘ ಅಥವಾ ಯೂನಿಯನ್‌ ಇದ್ದೇ ಇರುತ್ತದೆ.  ಆದರೆ ಈ ರೀತಿಯಾಗಿ ಯಾವುದೇ ಸಂಘ ಸಂಸ್ಥೆಗೆ ಒಳಪಡದ ಜನರಿಗೆ ಮಾತ್ರ ಈ ಕಾರ್ಮಿಕ ಸವಲತ್ತುಗಳ ಬಗೆಗೆ ಸರಿಯಾದ  ಜ್ಞಾನವಿರುವುದಿಲ್ಲ.  ಅಸಂಘಟಿತ ಕಾರ್ಮಿಕರಿಗೆ ನಿವೃತ್ತಿ ವೇತನ ವೈದ್ಯಕೀಯ ಸವಲತ್ತುಗಳು ಹೀಗೆ ಅನೇಕ ಕಾರ್ಯಕ್ರಮಗಳ್ನು ಸರಕಾರವು ಹಮ್ಮಿಕೊಂಡಿರುತ್ತದೆ.  ಅದರ ಲಾಭವನನ್ನು ಪಡೆಯಲು ಪ್ರೇರಪಿಸುವ ಕೆಲಸದಲ್ಲಿ ನಮ್ಮಿಂದ ಅಳಿಲು ಸೇವೆ ಮಾಡಬೇಕು.

ಕಾರ್ಮಿಕ ದಿನಾಚರಣೆಯ  ಉದ್ದೇಶವು ಕಾರ್ಮಿಕರ ಹಿತರಕ್ಷಣೆ ಬಗೆಗೆ ತಿಳುವಳಿಕೆ ನೀಡುವುದಾಗಿದೆ. ವ್ಯಾಪಾಕವಾಗಿ ಶತಮಾನಗಳಿಂದ ಹೋರಾಡಿದ ಪರಿಣಾಮವಾಗಿ ಅನೇಕ ಕಾರ್ಮಿಕರ ಸಂಘ ಸಂಸ್ಥೆಗಳು ಹುಟ್ಟಿಕೊಂಡಿವೆ ಅವುಗಳು ಕಾರ್ಮಿಕರ ಸಮಸ್ಯೆಗಳಿಗೆ ಸ್ಪಂದಿಸಿ ತಮ್ಮ ಸದಸ್ಯರ ಹಿತಾಸಕ್ತಿ ಕಾಪಾಡುವಲ್ಲಿ ಸಕ್ರಿಯವಾಗಿವೆ.  ಇತ್ತೀಚಿಗೆ ಹೆಚ್ಚಿನ ಗಮನವನ್ನು ಅಸಂಘಟಿತ ಕಾರ್ಮಿಕರ ಕಡೆಗೆ ಗಮನ ಕೊಡುವುದು ಅವಶ್ಯಕವಾಗಿದೆ. ಅಸಂಘಟಿತ ಕಾರ್ಮಿಕರಲ್ಲಿ ಕೂಲಿ ಕೆಲಸದವರು ಊರೂರಿನಲ್ಲಿ ಕೆಲಸದ ನಿಮಿತ್ತ ಅಲೆಯುವವರ ಪ್ರಮಾಣ ಹೆಚ್ಚಾಗಿದೆ.  ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಅನೇಕ ಯೋಜನೆಗಳನ್ನು ರೂಪಿಸಿ ಪ್ರಚಾರ ಮಾಡುತ್ತಲಿದೆ.  ಜಾಗರೂಕ ನಾಗರೀಕರಾಗಿ ಅಸಹಾಯಕರಾಗಿರುವ ಇಂತಹ ಅಸಂಘಟಿತ ಕಾರ್ಮಿಕರಿಗೆ ಸರಕಾರವು ನೀಡುತ್ತಿರುವ ಸೌಲಭ್ಯಗಳ ಬಗೆಗೆ ತಿಳುವಳಿಕೆ ನೀಡುವುದು ಅತೀ ಅವಶ್ಯಕ  ಏಕೆಂದರೆ ಒಂದೇ ಕಡೆ ನೆಲೆ ನಿಲ್ಲದ ಈ ಕಾರ್ಮಿಕರು ವಿದ್ಯಾಭ್ಯಾಸವನ್ನು ಮಾಡಿರುವುದಿಲ್ಲ ಮಾಡಿದ್ದರೂ ಕೂಡ ಓದು ಬರಹಗಳ ಬಗಗೆ ಆಸಕ್ತಿಯನ್ನು ಹೊಂದಿರುವುದಿಲ್ಲ.  ಆದ್ದರಿಂದ ಅವರಿಗೆ ದೊರಕುವ ಸವಲತ್ತುಗಳ ಬಗಗೆ ತಿಳುವಳಿಕೆಯನನ್ನು ನೀಡುವುದು ಮಹತ್ವವೆನಿಸುತ್ತದೆ. ಸರ್ಕಾರದ ವತಿಯಿಂದ ಕೆಲವರು ಅರೆ ಸರಕಾರಿ ಸೇವಾ ಸಂಸ್ಥೆಗಳು ಕೂಡ ಅನೇಕ ರೀತಿಯಲ್ಲಿ ಪ್ರಚಾರ ಮಾಡಿದರೂ ಎಲ್ಲರಿಗೂ ತಲುಪಿಸುವುದಿಲ್ಲ.  ಆದ್ದರಿಂದ ನಮ್ಮ ಸುತ್ತಮುತ್ತಲಿನವರಿಗೆ ಕಾರ್ಮಿಕ ಸಂಘಟನೆಗೆ ಸೇರಿಸುವ ಅಥವಾ ಅಸಂಘಟಿತ ಕಾರ್ಮಿಕರ ಯೋಜನೆಗಳನ್ನು ತಿಳಿಸುವ ಮೂಲಕ  ಕಾರ್ಮಿಕ  ದಿನವನ್ನು ಆಚರಣೆ ಮಾಡಬೇಕು.


Leave a Reply

Back To Top