ಲಲಿತಾ ಕ್ಯಾಸನ್ನವರ.
ಹೊಸತನ
ಹೊಸ ವರುಷಕೆ ಭಾವ
ಮುನ್ನುಡಿ ಬರೆದ ಹಬ್ಬ
ಬೇವು ಬೆಲ್ಲ ಮೆಲ್ಲುವ
ಸಿಹಿ ಕಹಿಯ ಸೂಸುವ
ಈ ಯುಗಾದಿ ಹಬ್ಬ
ಎರಡು ತಿಥಿ ನಕ್ಷತ್ರ
ವಾರ ಪಕ್ಷ ಮಾಸ ಸಂಧಿಸುವ
ಚಾಂದ್ರಮಾನ ಯುಗಾದಿ
ಹೊಸಚಿತ್ತದಿ ಪಂಚಾಂಗ ಬದಲಿಸಿ
ಹೊಸ ಸಂವತ್ಸರ
ತುಸು ಹರುಷದಿ ಸ್ವಾಗತಿಸಲು
ಸಜ್ಜಾಗೋಣ ನಾವು ನೀವೆಲ್ಲ
ಬೇವು ಬೆಲ್ಲದ ಹಬ್ಬವು
ಈ ಯುಗಾದಿಯು
ನೋವು ನಲಿವು ಜೊತೆಯಾಗಿ
ತಂದಿಹುದು ಹೂಸತನವು
ಕೋಗಿಲೆ ಕುಹೂ ಕಲರವ
ನಿನಾದ ಮನಕಿಂಪುಕೊಡುವಂತೆ
ಜೀವನದ ತೇರಿಗೆ ಹೊಸ
ಹುರುಪು ಹೊಸ ಉತ್ಸಾಹವು ಬಂದಿದೆ
ಹೊಸ ಹುಮ್ಮಸ್ಸು ತುಂಬೆಂದು
ಭಗವಂತನಲ್ಲಿ ಪ್ರಾರ್ಥಿಸುತ್ತ
ಆಚರಿಸೋಣ ಯುಗಾದಿಯ
ಸ್ವಾಗತಿಸೋಣ ಹೊಸವರ್ಷವ.
ಲಲಿತಾ ಕ್ಯಾಸನ್ನವರ.
ಉತ್ತಮ ಪ್ರಕಾಶನ. ನನ್ನ ಕವನ ಸುಂದರವಾಗಿ ಪ್ರಕಟಿಸಿ ಪ್ರೇರಣೆ ಮತ್ತು ಪ್ರೋತ್ಸಾಹಕ್ಕೆ ಅನಂತ ಧನ್ಯವಾದಗಳು.