‌ಅನುರಾಧಾ ರಾಜೀವ್ ಸುರತ್ಕಲ್ ‌ಪರ್ಣಕುಟೀರ

ಹಳ್ಳಿಯ ಜೀವನ ಬದುಕಿಗೆ ಚೇತನ
ತಳ್ಳಿ ಹಾಕದಿರು ಭಾವಗಳ
ಬಳ್ಳಿಯ ಬಳಸಿ ಹುಲ್ಲಿನ ಮನೆಯನು
ಹಾಳು ಗೆಡವದೆ ಕಟ್ಟಿಹರು

ಹ‌ಸುರಿನ ನಡುವೆ ಪರ್ಣ ಕುಟೀರವು
ಋಷಿ ಮುನಿಗಳು ವಾಸಿಪರು
ಬಿಸಿಲಿನ ಬೇಗೆಯ ತಡೆಯಲು ಆಗದೆ
ಬಳಲಿ ಬೆಂಡಾದ ಮಾನವರು

ಒಣಗಿದ ಮರದಲಿ ಉದುರುತ ಎಲೆಗಳು
ನುಣ್ಣಗೆ ಬೋಳಾಗಿ ಕಾಣುತಿದೆ
ಹಣ್ಣನು ಕಾಣದೆ ನೊಂದಿಹ ಮನವು
ತಣ್ಣನೆ ನೆರಳನು ಬಯಸಿದೆ

ಬಿಳಿಯ ಬಣ್ಣವ ಎರೆದಂತೆ ಬಾನಿಗೆ
ಮಳೆಯ ಸಿಂಚನ ಇಲ್ಲದೆ
ಹೊಳೆವ ಚಂದ್ರನ ಬೆಳಕಲಿ ಮಿಂದು
ಕೊಳೆಯ ತೊಳೆಯಿರಿ ಎಂದಿದೆ

——————-

.

Leave a Reply

Back To Top