ಲೇಖನ ಸಂಗಾತಿ
ಸಿನೆಮಾ ಹಾಗೂ ಮನೋರಂಜನಾ
ಮಾಧ್ಯಮಗಳು ಎತ್ತ ಸಾಗುತ್ತಲಿವೆ?
ಮಾಧುರಿ ದೇಶಪಾಂಡೆ
ಇತ್ತೀಚಿಗೆ ಮಾಧ್ಯಮಗಳು ಅದರಲ್ಲೂ ಸಿನೆಮಾ ಹಾಗೂ ಧಾರವಾಹಿಗಳಲ್ಲಿ ನೈತಿಕತೆ ಅಥವಾ ಸಕಾರಾತ್ಮಕ ವಿಷಯಗಳಿಗಿಂತ ಸಮಾಜದಲ್ಲಿ ಕಲಹ ದ್ವೇಷ ಹಾಗೂ ಸಮಸ್ಯೆಗಳನ್ನು ಸೃಷ್ಟಿ ಮಾಡುವ ಕೆಲಸವೇ ನಡೆಯುತ್ತಿದೆ. ಅದರಲ್ಲಿ ಹೆಚ್ಚಿಗೆ ಬ್ರಾಹ್ಮಣರು, ನೀತಿಯನ್ನು ಹೇಳುವವರು ಹಾಗೂ ಉಪದೇಶ ಮಾಡುವ ಸ್ಥಾನದಲ್ಲಿರುವ ಜನರನ್ನು ಅವಹೇಳನ ಮಾಡುವುದು ಸರ್ವೇ ಸಾಮಾನ್ಯವಾಗಿ ಬಿಟ್ಟಿದೆ.
ಅನ್ನಪೂರ್ಣಿ ಎಂಬ ತಮಿಳಿನ ಸಿನೆಮಾ ನೋಡಿದೆ ಅದರಲ್ಲಿ ಐಯ್ಯಂಗಾರ್ ಹೆಣ್ಣು ಮಗಳು ಮಾಂಸ ಸೇವನೆ ಹಾಗೂ ಅಡಿಗೆ ಮಾಡುವುದು ನಮಾಜ್ ಮಾಡುವುದನ್ನು ತೋರಿಸುತ್ತಾರೆ. ಜನರಿಗೆ ಸ್ವಧರ್ಮೇ ನಿಧನಂ ಶ್ರೇಯಃ ಎನ್ನುವ ಮಾತು ರುಚಿಸುವುದಿಲ್ಲ. ಏಕೆಂದರೆ ಇದನ್ನು ಜಾತಿವಾದ ಎಂಬ ತಲೆ ಪಟ್ಟಿ ಕಟ್ಟುತ್ತಾರೆ. ಸಾಮಾನ್ಯವಾಗಿ ಜೀವನದ ಅನುಭವಗಳನ್ನು ನೋಡಿದರೆ ಒಂದು ರೀತಿಯ ಸಂಪ್ರದಾಯ ಹಾಗೂ ಅಭ್ಯಾಸಗಳಲ್ಲಿ ಬೆಳೆದವರಿಗೆ ತಮ್ಮದೇ ಜಾತಿಯ ಇನ್ನೊಂದು ಮನೆಯಲ್ಲಿ ಹೊಂದಿಕೊಂಡು ಹೋಗುವಾಗ ಬಹಳ ತೊಂದರೆ ಆಗುತ್ತದೆ. ಅನ್ಯ ಜಾತಿಯ ಅಥವಾ ಧರ್ಮದವರೊಂದಿಗೆ ಸಂಬಂಧ ಬೆಳೆಸುವುದು ವೈಯಕ್ತಿಕ ಆದರೆ ನಮ್ಮ ಜೀವನದ ಆಗು ಹೋಗುಗಳಿಗೆ ನಾವು ಜವಾಬ್ದಾರರು ಸಿನೆಮಾ ಅಥವಾ ಧಾರವಾಹಿಗಳ ಕಥೆಯಂತೆ ಜೀವನ ನಡೆಯುವುದಿಲ್ಲ ಎಂಬ ವಾಸ್ತವಿಕ ಅಂಶ ಯುವ ಜನರಲ್ಲಿ ಇರುವುದಿಲ್ಲ.
ಇತ್ತೀಚಿಗೆ ಯಾವ ಸಿನೆಮಾ ಧಾರವಾಹಿ ವೆಬ್ ಸಿರೀಸ್ ನೋಡಿ ಅನೈತಿಕತೆಯ ಅಡ್ಡಾ ಅಗಿದೆ. ಒಂದು ಹೆಣ್ಣು 4 ಮದುವೆ ಆಗುವುದು, ಗಂಡು ಬಹಳಷ್ಟು ಹೆಣ್ಣು ಮಕ್ಕಳೊಂದಿಗೆ ಸಂಬಂಧ ಬೆಳೆಸುವುದು, ಹಿಂಸೆ ಕ್ರೌರ್ಯ ಹೊಡೆತ ಬಡಿತಗಳ ಪರಿಣಾಮದಿಂದ ಜನರಲ್ಲಿ ಶಾಂತಿಯಿಂದ ಬದುಕುವ ಅಭ್ಯಾಸ ಉತ್ತಮ ಹವ್ಯಾಸಗಳು ಉಳಿಯುತ್ತಿಲ್ಲ. ಓದುವದು ಕೇವಲ ಶಾಲೆ ಕಾಲೇಜುಗಳಿಗೆ ಸೀಮಿತವಾಗಿವೆ. ಸದಭಿರುಚಿಯ ಮೌಲ್ಯಯುತ ಬರವಣಿಗೆ ಸ್ವಲ್ಪ ಮಟ್ಟಿಗೆ ಜೀವಂತವಾಗಿದೆ, ಆದರೆ ಪುಸ್ತಕ ಓದುವ ಹವ್ಯಾಸ ಜನರ ಮಧ್ಯ ಉಳಿದೇ ಇಲ್ಲ
ಪುರಾತನ ಮೌಲ್ಯಗಳನ್ನು ಉಳಿಸಿಕೊಂಡು ಆಧುನಿಕತೆಯ ಅನುಕೂಲತೆಗಳನ್ನು ಹೊಂದಿಸಿಕೊಂಡು ಹೋಗುವ ನಡೆಯ ಸಿರಿಯಲ್ ಹಾಗೂ ಸಿನೆಮಾ ಆರೋಗ್ಯಕರ ಸಮಾಜವನ್ನು ನಿರ್ಮಾಣ ಮಾಡುತ್ತವೆ. ಹಿಂಸೆ, ಮೋಸ, ಕೆಟ್ಟ ಬುದ್ಧಿಯನ್ನು ಬಿಂಬಿಸುವ ಮತ್ತು ಕೆಟ್ಟ ಜನರೇ ಏಳಿಗೆಯಾಗುವ , ಅನ್ಯ ಧರ್ಮೀಯರೊಂದಿಗೆ ಮಾತ್ರ ಪ್ರೀತಿಯಿಂದ ಇರಬೇಕೆಂಬ ಸಂದೇಶ ಹೇಳುವ ಮಾಧ್ಯಮಗಳಲ್ಲಿ ಸೂಟ್ ಕೇಸಿನಲ್ಲಿ ಸಿಗುವ ಹೆಣಗಳು, ಕ್ಷುಲ್ಲಕ ಕಾರಣಕ್ಕೆ ಕ್ರೌರ್ಯದ ನಿರ್ಣಯ ಮಾಡಿ ಕೊಲೆಗಡುಕರಾದವರು, ದುರಭ್ಯಾಸಗಳ ದಾಸರಾಗಿ ತಮ್ಮವರನ್ನು ಕಳೆದು ಕೊಳ್ಳುತ್ತಿವ, ಜೀವವನ್ನೇ ತೊರುತ್ತಿರುವ ಯುವ ಜನತೆಯ ಬಗೆಗೆ ಕಾಳಜಿಯೇ ಇಲ್ಲವೇನೋ ಅನಿಸುತ್ತದೆ. ಪ್ರೀತಿಗೆ ಜಾತಿ ಬೇಧ ಇಲ್ಲ ಆದರೆ ಮಾನವೀಯತೆ ಇಲ್ಲದೇ ಇರುವ ನಡುವಳಿಕೆ ಎಷ್ಟರ ಮಟ್ಟಿಗೆ ಸರಿ? 20-25 ವರ್ಷ ಬೆಳೇಸಿದ ತಂದೆ ತಾಯಿಯ ಮೇಲೆ ಬರದ ವಿಶ್ವಾಸ ಇಂದು ನಿನ್ನೆ ನೋಡಿದವರ ಮೇಲೆ ಹೇಗೆ ಬರುತ್ತದೆ. ಇನ್ನು ಅನೈತಿಕ ಸಂಬಂಧಗಳ ವಿಜೃಂಭಣೆ ಬಹಳಷ್ಟು ಸಿನೆಮಾ ಸಿರಿಯಲ್‌ಗಳಲ್ಲಿ ಮಾಡುತ್ತಾರೆ. ರಾಜಕೀಯ ಅಲ್ಲದ ಸಿರಿಯಲ್ ಸಿನೆಮಾಗಳಲ್ಲೂ ಹೊಡಿದಾಟ ಬಡಿದಾಟ ಸತತವಾಗಿ ತೋರಿಸುತ್ತಾರೆ. ಇಂದಿನ ಸಿನೆಮಾ ಹಾಗೂ ಧಾರವಾಹಿಗಳು ಕ್ರಿಮಿನಲ್‌ಗಳನ್ನು ಉತ್ಪತ್ತಿ ಮಾಡುವ ವಿಶ್ವವಿದ್ಯಾಲಯಗಳಾಗಿ ಬಿಟ್ಟಿವೆ.
ಮನುಷ್ಯ ಮನೋರಂಜನೆಗಾಗಿ ಆನಂದಕ್ಕಾಗಿ ಸಿನೆಮಾ, ನಾಟಕ, ಧಾರವಾಹಿಗಳನ್ನು ನೋಡಬಯಸುತ್ತಾನೆ ಆದ್ದರಿಂದ ಸದಭಿರುಚಿಯ ಧಾರವಾಹಿಗಳು ಹಾಸ್ಯ ಮತ್ತು ಉತ್ತಮ ಸಂದೇಶಗಳನ್ನು ನೀಡುವ ಧಾರವಾಹಿಗಳ, ಸಿನೆಮಾ ನಿರ್ಮಾಣದ ಅವಯಕತೆ ಇದೆ. ಇನ್ನು ಧಾರ್ಮಿಕವಾದ ಧಾರವಾಹಿಗಳು ಸಿನೆಮಾಗಳಲ್ಲೂ ಕೂಡ ವಾಶ್ತವ ವಿಷಯದಿಂದ ಹೊರಹೋಗಿ ತಮ್ಮ ಮನಸ್ಸಿಗೆ ಬಂದದ್ದು ತೋರಿಸುವ ಮೂಲಕ ಸಮಾಜದ ಸ್ವಾಸ್ಥ್ಯ ಹಾಗೂ ನೈತಿಕತೆಗೆ ಸಂಚ ಕಾರ ತರುತ್ತಿರುವ ಸಮಯದಲ್ಲಿ ಕೆಲವೇ ಕೆಲವರು ಉತ್ತಮ ಸಿನೆಮಾ ಧಾರವಾಹಿಗಳ ನಿರ್ಮಾಣ ಮಾಡಿದರೂ ಅವರ ಕೆಲಸ ಬೆಳಕಿಗೆ ಬರದೇ ಹಿನ್ನಡೆ ಪಡೆಯುವುದು ಮತ್ತು ವಿವಾದಿತ ವಿಷಯಗಳ ಮತ್ತು ಸಮಾಜದ ನೆಮ್ಮದಿ ಕೆಡಿಸುವ ಚಿತ್ರಗಳು ಧಾರವಾಹಿಗಳು ಪ್ರಸಿದ್ಧವಾಗುತ್ತಿರುವುದು ವಿಷಾದ ನೀಯ.
ಶಾಲಾ ಕಾಲೇಜು ಸಮಯದಿಂದಲೇ ಓದುವ ಅಭ್ಯಾಸ ಹವ್ಯಾಸಗಳಿಗೆ ಪ್ರೋತ್ಸಾಹ ನೀಡಿ, ಉತ್ತಮ ನೀತಿಯನ್ನು ಸಾರುವ ಸಿನೆಮಾ ಧಾರವಾಹಿಗಳನ್ನು ತಯಾರಿಸಿದರೆ ಉತ್ತಮ ಸಮಾಜದ ನಿರ್ಮಾಣಮಾಡಿದಂತೆ.
ಮಾಧುರಿ ದೇಶಪಾಂಡೆ