ಸುಬ್ರಹ್ಮಣ್ಯ ಡಿ.ಕೆ. ಲೇಖನ-ಕುವೆಂಪು ಕೃತಿ ಕುಸುಮ ಮಾಲೆ

ಧರೆಗವತರಿಸಿದ ಸ್ವರ್ಗದ ಸುಂದರ ತಾಯ್ನೆಲ ಹಿರೇಕೊಡಿಗೆ ನನ್ನದು ‘ಬಾಗಿಲೊಳು ಕೈ ಮುಗಿದು ಒಳಗೆ ಬಾ ಯಾತ್ರಿಕನೆ’ ಎಂದ ಕಿಶೋರ ಚಂದ್ರವಾಣಿ, ಸಹ್ಯಾದ್ರಿಯ ಹೆಬ್ಬಾಗಿಲಿನ ಮೇಘಪುರದಲ್ಲಿ ನನ್ನ ಮನೆಯನ್ನು ಕಟ್ಟಿ ‘ಮೋಡಣ್ಣನ ತಮ್ಮ’ ‘ನನ್ನ ಗೋಪಾಲ’ನನ್ನು ಮರಿ ವಿಜ್ಞಾನಿಯನ್ನಾಗಿಸಿ ‘ನರಿಗಳಿಗೇಕೆ ಕೋಡಿಲ್ಲ’ ಎಂದು ‘ಕೊಲಂಬೋದಿಂದ ಅಲ್ಮೋರ’ ದವರೆಗೆ ‘ವಿಚಾರ ಕ್ರಾಂತಿಗೆ ಆಹ್ವಾನ’ ನೀಡಿ ‘ಮನುಜ ಮತ ವಿಶ್ವಪಥ’ದ ಕೊಳಲಿನಿಂದ ‘ಆನಂದಮಯ ಈ ಜಗಹೃದಯ’ ಎಂದು ‘ಪಾಂಚಜನ್ಯ’ ಮೊಳಗಿಸಿ ‘ಪ್ರೇಮಕಾಶ್ಮೀರ’ದ ‘ಅಗ್ನಿಹಂಸ’ದೊಡನೆ ‘ದೌಪದಿಯ ಶ್ರೀಮುಡಿ’ ಕಟ್ಟಿ ‘ರಕ್ತಾಕ್ಷಿ’ಯಲ್ಲಿ ‘ಚಂದ್ರಹಾಸ’ನಿಂದ ‘ಬಿರುಗಾಳಿ’ ಎಬ್ಬಿಸಿ ದೇವರು ರುಜು ಮಾಡಿದ ‘ಪಕ್ಷಿಕಾಶಿ’ಯಲ್ಲಿ ನವಿಲು ನರ್ತಿಸಿ ‘ಜೇನಾಗುವ ಕದರಡಿಕೆಯ ಕೃತಿಕೆ ಕಿಂಕಣಿ ‘ಷೋಡಶಿ’ಯ ‘ಇಕ್ಷುಗಂಗೋತ್ರಿ’ಯಲ್ಲಿ ಚಂದ್ರಮಂಚದ ಚಕೋರಿಗೆ ‘ಆತ್ಮಶ್ರೀಗಾಗಿ ನಿರಂಕುಶಮತಿ’ಯಾಗೆಂದು ಸಾಹಿತ್ಯ ಪ್ರಚಾರ ಮಾಡಿ ‘ಮಹಾರಾತ್ರಿಯ’ ಪ್ರೇತಕ್ಕೂ ಕೊನೆಯ ತೆನೆಯ ಹೊನ್ನ ಹೊತ್ತರಿಸಿ ‘ಅಸತ್ತಿನಿಂದ ಸತ್ತಿನೆಡೆಗೆ’ ಸಾಗಲಿ ಎಂದು ಕುಟೀಚಕ ಕಲಾಸುಂದರಿ ‘ಕಾನೂರು ಹೆಗ್ಗಡಿತಿ’ಯ ಮಲೆಗಳಲ್ಲಿ ಮದುಮಗಳಿಗೆ ಷಷ್ಠಿನಮನದಂದು ವಾಲ್ಮೀಕಿ ಭಾಗ್ಯದಲ್ಲಿ ಮಂತ್ರಾಕ್ಷತೆಯನ್ನು ನೀಡಿ ‘ತಪೋವನ’ದಲ್ಲಿ ‘ವಿಭೂತಿ ಪೂಜೆ’ ಮಾಡಿದ ‘ಜಲಗಾರ’ನಿಂದ ಹಾಳೂರಿನ ‘ಸ್ಮಶಾನ ಕುರುಕ್ಷೇತ್ರ’ದಲ್ಲಿ ಯಮನಿಗೆ ಸೋಲಾದಾಗ ‘ತೆರೆದಿದೆ ಮನೆ ಓ ಬಾ ಅತಿಥಿ’ ಹೊಸ ಬೆಳಕಿನ ಹೊಸ ಗಾಳಿಯ ಬಾಳನು ತಾ ಎಂದು ಚಿತ್ರಾಂಗದೊಂದಿಗೆ ‘ಬೃಂದಾವನಕೆ ಹಾಲನು ಮಾರಲು ಹೋಗುವ ಬಾರೆ ಬೇಗ ಸಖಿ’ ಎಂದು ‘ನೆನಪಿನ ದೋಣಿಯಲ್ಲಿ ದೋಣಿ’ ಸಾಗಲಿ ಮುಂದೆ ಹೋಗಲಿ ಎನ್ನುತ್ತಾ ಪ್ರಾರ್ಥನಾ ಗೀತಾಂಜಲಿಯ ಸ್ವಾಮಿ ವಿವೇಕಾನಂದ ರಾಮಕೃಷ್ಣ ಪರಮಹಂಸರ ಗುರುವಿನೊಡನೆ ದೇವರಡಿಗೆ ಕಥನ ಕವನಗಳಲ್ಲಿ ‘ತನುವು ನಿನ್ನದು ಮನವು ನಿನ್ನದು’ ಎಂಬ ಮಲೆನಾಡಿನ ಚಿತ್ರಗಳಲ್ಲಿ ‘ತೇನವಿನ ತೃಣಮಪಿನ’ ರಚಿಸಿ ಕಾನೀನಿನ ‘ಕೋಗಿಲೆ ಮತ್ತು ಸೋವಿಯಟ್ ರಷ್ಯಾ’ದ ಸನ್ಯಾಸಿಯಲ್ಲಿ ನನ್ನ ದೇವರನ್ನು ಕಂಡ ‘ಮಂತ್ರ ಮಾಂಗಲ್ಯ’ದೊಂದಿಗೆ ಸರಳ ರಗಳೆಯ ‘ಶ್ರೀ ರಾಮಾಯಣ ದರ್ಶನಂ’ ರಚಿಸಿದ ‘ಬೊಮ್ಮನಹಳ್ಳಿ ಕಿಂದರಿಜೋಗಿ’ ಕಬ್ಬಿಗನ ಕೈಬುಟ್ಟಿಯಲ್ಲಿ ‘ನೇಗಿಲು ಹಿಡಿದು ಹೊಲದೊಳು ಹಾಡುತ’ ಕನ್ನಡ ಡಿಂಡಿಮ ಬಾರಿಸು ಕಾವ್ಯ ವಿಹಾರದಲ್ಲಿ ‘ನಿನ್ನಡೆಗೆ ಬರುವಾಗ ಸಿಂಗರದ ಹೊರೆಯಕೆ’ ಎಂದ ‘ಶೂದ್ರ ತಪಸ್ವಿ’ ನಿಮಗೆಲ್ಲ ‘ಓ ನನ್ನ ಚೇತನ ಹಾಗೂ ಅನಿಕೇತನ’ಎಂದು ವಿಶ್ವಕ್ಕೆ ಕೂಗಿ ಹೇಳಿದ ಭಾರತಾಂಬೆಯೇ ಜನಿಸಿ ನಿನ್ನೊಳು ಧನ್ಯನಾದೆನು ದೇವಿಯೇ ಎಂದು ಕನ್ನಡಕ್ಕೆ ಮೊದಲ ಪಂಪ ಪ್ರಶಸ್ತಿ ತಂದ ಜ್ಞಾನಪೀಠ ಅಲಂಕರಿಸಿದ ನಾಡೋಜ,ಜಗದ ಕವಿ, ಯುಗದ ಕವಿ,  ರಸಋಷಿ, ಋಷಿಕವಿ, ಕರ್ನಾಟಕ ರತ್ನ ಪದ್ಮಭೂಷಣ, ಪದ್ಮವಿಭೂಷಣ,ರಾಷ್ಟ್ರಕವಿ ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ.
ಆಧುನಿಕ ಭಾರತದ ಅತ್ಯಂತ ಶ್ರೇಷ್ಠ ಲೇಖಕರ ಸಾಲಿನಲ್ಲಿ ನಿಲ್ಲುವ ಕುವೆಂಪುರವರ ಸಾಹಿತ್ಯ ಕಳೆದ 40 50 ವರ್ಷಗಳಲ್ಲಿ ಕರ್ನಾಟಕದಲ್ಲಿ ನಡೆದ ಅನೇಕ ಚಳುವಳಿಗಳಿಗೆ ಸ್ಪೂರ್ತಿಯಾಗಿದೆ. ಈ ಬೆಳವಣಿಗೆ ಕುವೆಂಪು ಸಾಹಿತ್ಯ ಮಾತ್ರವಲ್ಲ ಒಂದು ವಿದ್ಯಮಾನ ಎಂಬುದನ್ನು ಖಚಿತವಾಗಿ ಸೂಚಿಸುತ್ತದೆ.
ಇವರ ಸಾಹಿತ್ಯ ಆಧುನಿಕ ಭಾರತದಲ್ಲಿ ಶೂದ್ರವರ್ಗದವರು ಭಾಗವಹಿಸಿದ ಮೇಲ್ಮುಖ ಚಲನೆಯ ಕಥಾನಕವಾಗಿದೆ ಎಂದು ಸಂಸ್ಕೃತಿ ಚಿಂತಕರು ಅಭಿಪ್ರಾಯಪಟ್ಟಿದ್ದಾರೆ. ಇನ್ನೊಂದು ರೀತಿಯಲ್ಲಿ ಅವರ ಸಾಹಿತ್ಯ ಸದಾ ಸಾಗುತ್ತಿರುವ ಪರಿವರ್ತನಾಶೀಲ ಸಾಹಿತ್ಯ. ಇದನ್ನು ಅವರ ಅನಿಕೇತನದ ಆಗು ಆಗು ನೀ ಅನಿಕೇತನ ಎಂಬ ಮಾತುಗಳಲ್ಲಿ ಧ್ವನಿಸುತ್ತದೆ ಆದ್ದರಿಂದಲೇ ಅವರ ಸಾಹಿತ್ಯ ಕೇವಲ ಸಂತೋಷ ನೀಡುವುದಲ್ಲ ಲೋಕವನ್ನು ಉದ್ದರಿಸುವುದು ಆಗಿದೆ.
 ಹೊಸ ಲೋಕ ದೃಷ್ಟಿಯನ್ನು ನೀಡುವ ಮತ್ತು ಹೃದಯ ಪರಿವರ್ತನೆ ಮಾಡುವ ಶಕ್ತಿ ಅವರ ಸಾಹಿತ್ಯಕ್ಕಿದೆ ಜಡಗೊಂಡ ಜಾತಿ ವ್ಯಾದಿಯಿಂದ ರೋಗಗ್ರಸ್ತವಾಗಿದ್ದ ಭಾರತೀಯ ಸಮಾಜವನ್ನು ಅದು ಹೇಗಿತ್ತೋ ಹಾಗೆ ಚಿತ್ರಿಸುವುದು ಕ್ರಾಂತಿಕಾರಿ ಮನೋಭಾವದ ಉದ್ದೇಶವಾಗಿರಲಿಲ್ಲ.
 ಹಿಂದೆ ಹೀಗಿತ್ತು ಈಗ ಹೀಗಿದೆ ಎಂದು ಎಷ್ಟೋ ಕವಿ ಪುಂಗವರ ನೂರಾರು ಕಾವ್ಯ ಕೃತಿಗಳು ನಮ್ಮಲ್ಲಿದ್ದವು. ಮತ್ತೆ ಅದನ್ನೇ ಬರೆಯುವುದು ಕ್ರಾಂತಿದರ್ಶಿಯಾಗಿದ್ದ ಲೇಖಕನಿಗೆ ರುಚಿಸಲಿಲ್ಲ ಯಾರಿಗೆ ಲೋಕ ಹೇಗಿದ್ದರೆ ಚೆನ್ನ ಎಂಬ ದಾರ್ಶನಿಕತೆ, ನೋಟವಿರುತ್ತದೆಯೋ ಅವರಿಗೆ ಹೊಸ ಸಮಾಜವು ನವಕಾಳಿಯ ಜ್ಞಾನದ ವಿಜ್ಞಾನದ ಮತ್ತೆ ಖಡ್ಗದಿ ಮೈದೋರುವಳು ಎಂಬ ಮುನ್ನೋಟವಿರುತ್ತದೆ ಹೀಗಾಗಿ ಇವರ ಸಾಹಿತ್ಯವು ಈ ಜಗತ್ತು ಚಲನಶೀಲವಾದುದೆಂದು ನಂಬುತ್ತದೆ ಜಡಸಮಾಜವನ್ನು ಚಲನಶೀಲಗೊಳಿಸುತ್ತದೆ.ಮನುಷ್ಯರನ್ನು ಆದ್ರರನ್ನಾಗಿಯೂ ಉದಾರರನ್ನಾಗಿಯೂ ಮಾಡುತ್ತದೆ. ಇದು ಕುವೆಂಪುರವರ ಹೆಗ್ಗಳಿಕೆ ಕನ್ನಡಿಗರಾದ ನಮ್ಮ ಹೆಮ್ಮೆ ಪುಟ್ಟಪ್ಪ ಎಂಬ ಬಾಲಕ ಮೇಲ್ಮುಖವಾಗಿ ಚಲಿಸಿ ಕುವೆಂಪು ಎಂಬ ದಾರ್ಶನಿಕರಾಗಿ ವಿಕಸನಗೊಂಡ ವಿದ್ಯಮಾನವೇ ಅತ್ಯಂತ ವಿಸ್ಮಯ ಕುತೂಹಲ. ಸರ್ವಕಾಲಕ್ಕೂ ಕುವೆಂಪುರವರ ಸಾಹಿತ್ಯ ಸಾಮಾಜಿಕ ಸಮಸ್ಯೆಗಳಿಗೆ ದಿವ್ಯ ಔಷಧಿಯಾಗುತ್ತದೆ.

18 thoughts on “ಸುಬ್ರಹ್ಮಣ್ಯ ಡಿ.ಕೆ. ಲೇಖನ-ಕುವೆಂಪು ಕೃತಿ ಕುಸುಮ ಮಾಲೆ

  1. ಸರ್
    ಕುವೆಂಪು ರವರಿಗೆ ಕಿರು ಕಾಣಿಕೆ ಯಂತಿವೆ ನಿಮ್ಮ ಸಾಲುಗಳು.

  2. ಸುಂದರ ಕಾವ್ಯ ಸಾಲುಗಳನ್ನು ಮುತ್ತುಗಳಂತೆ ಪೊಣಿಸಿದ್ದೀರಿ ಸರ್….ಈಗೆ ಸಾಹಿತ್ಯ ಕೃಷಿ ಸಾಗಲಿ .ಅಭಿನಂದನೆಗಳು ಸರ್

  3. ಎಲ್ಲರನ್ನೂ ಒಳಗೊಳ್ಳುವ ಹಾಗೂ ಸರ್ವಕಾಲಕ್ಕೂ ಸದಾ ರುಚಿಸುವಂತಹ ಸಾಹಿತ್ಯ ಕುವೆಂಪು ರವರದು.
    ಅಂತಹ ಕವಿ ಕೃತಿಯ ಲೋಕವನ್ನು ಉಣಬಡಿಸಿದ ನಿಮಗೆ ಧನ್ಯವಾದಗಳು ಸರ್..

  4. ಜಗದ ಕವಿಗೆ
    ಯುಗದ ಕವಿಗೆ
    ಶ್ರೀ ರಾಮಾಯಣ ದರ್ಶನಂನಿಂದಲೇ
    ಕೈಮುಗಿದ ಕವಿಗೆ ಮಣಿಯದವರು ಯಾರು?
    ಎಂಬ ಬೇಂದ್ರೆ ಅವರ ಮಾತಿನಂತೆ ರಸ ಋಷಿಗೆ ಕೃತಿ ಮಾಲೆಯ ನಮನ ಸಲ್ಲಿಕೆ ಸುಂದರವಾಗಿದೆ.
    ‘ಸಿರಿಗನ್ನಡ’ ಎಂಬ ನಿಮ್ಮ ಮನೆಯ ಹೆಸರು ನಿಮ್ಮ ಅಪ್ಪಟ ಕನ್ನಡಾಭಿಮಾನದ ದ್ಯೋತಕ. ನಿಮ್ಮ ಕನ್ನಡಾಭಿಮಾನ, ಸಾಹಿತ್ಯಯಾನ ಹೀಗೆ ಸಾಗಲಿ.
    ಸದಾ ಒಳಿತಾಗಲಿ ಸಾರ್…..

  5. ರಸ ಋಷಿಯ ಕುಂಚದಲ್ಲಿ ಅರಳಿದ ಆ ಅದ್ಬುತಗಳನ್ನು ನೀವು ಜೋಡಿಸಿರುವ ಈ ಪರಿ ಕವಿಪುಂಗವನಿಗಿತ್ತ ತಿಲಕದಂತಿದೆ.

  6. ಪ್ರಿಯ ಮಣಿ,
    ವಿಶ್ವ ಮಾನವ, ರಸಋಷಿ, ಋಷಿಕವಿ, ಯುಗದ ಕವಿ, ರಾಷ್ಟ್ರ ಕವಿ ಯಂದರೇ ಸಾಕು ಮೈ ನವಿರೇಳಿಸುತ್ತದೆ, ರೋಮಾಂಚನವಾಗುತ್ತದೆ. ಇನ್ನು ಅ ಮಾಯೆಯನ್ನು ಬಣ್ಣಿಸಲು ನೀವು ಬಳಸಿರುವ 229 ಪದಗಳನ್ನು ಸವಿಯುತಿದ್ದರೆ, ನನ್ನ ಪರಮನಂದಕ್ಕೆ ಮಿತಿಯೇ ಇಲ್ಲದಂತೆ ಆಗುತ್ತಿದೆ.
    ಅತ್ಯಂತ ಸುಂದರವಾದ ಲೇಖನ ಪ್ರಸ್ತುತಗೊಳಿಸಿದಕ್ಕೆ ನಿಮಗೆ ಅನಂತ ನಮನಗಳು. ಇನ್ನು ಈಗೆ ಮುಂದುವರೆಯಲಿ.
    ಹರಿನಾಥ್.

  7. ರಸ ಋಷಿಯವರ ಪದ ಪುಂಜಗಳು ಹೆಕ್ಕಿ ಅದ್ಬುತ ಸಂಕಲನ ಜೋಡಿಸಿದ ನಿಮ್ಮ ಕಲಾ ಕಾವ್ಯ ಚೈತನ್ಯಕ್ಕೆ ಅನಂತ ಅನಂತ ವಂದನೆಗಳು.

  8. ಹೆತ್ತಮ್ಮನಿಗೆ, ಜನ್ಮಭೂಮಿಗೆ ಕಿರೀಟಪ್ರಾಯರಾಗಿರುವ ರಸ ಋಷಿಗಳ ಬಗ್ಗೆ ಅವರದೇ ಕೈಯಲ್ಲಿ ಜನ್ಮವೆತ್ತಿರುವ ಸಾಹಿತ್ಯ ಕೃತಿಗಳನ್ನೇ ದಾರವನ್ನಾಗಿ ಬಳಸಿಕೊಂಡು ಸುಮಧುರ ಮಾಲೆಯನ್ನಾಗಿ ಹೆಣೆದಿರುವ ಆದರಾಭಿಮಾನಕ್ಕೆ ಮನದುಂಬಿ ಬಂದಿದೆ ಸಹೋದರ… ಅವರದೇ ಮಾತಿನಂತೆ ದೋಣಿ ಸಾಗಲಿ ಮುಂದೆ ಹೋಗಲಿ…. ಅವರ ಬಗೆಗಿನ ಅಭಿಮಾನ ಚಿರಾಯುವಾಗಿ ಸಾಗಲಿ.. ಸಹೋದರಿಯ ಹಾರೈಕೆಗಳು

  9. Principal Sri Subramanya has exhibited his skills of weaving words while creating an artistic garland to honour and respectfully acknowledge the literary Gentleman of Kannada –
    Kuvempu.
    My appreciation and Salutations to Sri Subramanya for creative writing in Kannada even though he is a Physicist.

Leave a Reply

Back To Top