ಶಿರಸಂಗಿ ಲಿಂಗರಾಜರು ಲೋಕೋಪಕಾರಿ ಮತ್ತು  ಶಿರಸಂಗಿ ಸಂಸ್ಥಾನದ ಸಂಸ್ಥಾನಾಧಿಪತಿಯಾಗಿದ್ದರು. ಅವರು ಲಿಂಗಾಯತ ವಿದ್ಯಾರ್ಥಿಗಳ ಶಿಕ್ಷಣದ ಸಲುವಾಗಿ ಅವರ ಎಲ್ಲಾ ಆಸ್ತಿಗಳನ್ನು ದಾನ ಮಾಡಿದರು. ಅವರು, ೧೯೦೪-೦೫ ರಲ್ಲಿ ನಡೆದ ಅಖಿಲ ಭಾರತ ವೀರಶೈವ ಮಹಾಸಭಾದ  ಮೊದಲನೇ ಸಮಾವೇಶದಲ್ಲಿ ಅಧ್ಯಕ್ಷರಾಗಿದ್ದರು.

ಶಿರಸಂಗಿ ಲಿಂಗರಾಜರು ಜನವರಿ ೧೦, ೧೮೬೧ ರಂದು  ಗೂಳಪ್ಪ ಮತ್ತು ಯಲ್ಲವ್ವ ಮಡ್ಲಿ ದಂಪತಿಗೆ ಗದಗ ಜಿಲ್ಲೆಯ ಶಿಗ್ಲಿಯಲ್ಲಿ ಜನಿಸಿದರು. ಅವರ ಹುಟ್ಟಿದ ಹೆಸರು ರಾಮಪ್ಪ. ಅವರನ್ನು ನವಲಗುಂದದ ಶಿರಸಂಗಿ ದೇಸಗತಿ ಮನೆತನದ ಜಾಯಪ್ಪಾ ದೇಸಾಯಿಯವರು ಮತ್ತು ಗಂಗಾಬಾಯಿಯವರು ದತ್ತು ಪಡೆದುಕೊಂಡರು. ಅನಂತರ ಅವರು  ಸಂಸ್ಥಾನಾಧಿಪತಿಗಳಾದರು. ಜೂನ್ ೨, ೧೮೭೨ ರಂದು ಅವರ ಹೆಸರು ಶಿರಸಂಗಿ ಲಿಂಗರಾಜ ದೇಸಾಯಿ ಎಂದು ಬದಲಾಯಿತು.

ದಾನವೀರ ಶರಣ ಶ್ರೀ ಶಿರಸಂಗಿ ಲಿಂಗರಾಜ ದೇಸಾಯಿ

ಈ ನಾಡು ಕಂಡ ಅಪ್ರತಿಮ ದಾನವೀರ ಶಿರಸಂಗಿ ಲಿಂಗರಾಜ ದೇಸಾಯಿಯವರ ತ್ಯಾಗ ಮತ್ತು ಉದಾರ ಮನೋಭಾವ ಸದಾ ಸ್ಮರಣೀಯವಾದದ್ದು.

ಕನ್ನಡ ನಾಡಿಗೆ ಮತ್ತು ಲಿಂಗಾಯತ ಸಮಾಜಕ್ಕೆ ಅಪಾರ ಸೇವೆ ಸಲ್ಲಿಸಿ, ತಮ್ಮ ಜೀವನವನ್ನೇ ತ್ಯಾಗ ಮಾಡಿದ ದೇಸಾಯಿಯವರ ಸಂಪೂರ್ಣ ಪರಿಚಯ ನಮ್ಮ ನಾಡಿಗೆ ಆಗಬೇಕಿದೆ.

ದೇಶದ ಬೆನ್ನೆಲುಬು ರೈತ ಎಂಬುದನ್ನು ಮನಗೊಂಡಿದ್ದ ಲಿಂಗರಾಜರು, ತಮ್ಮ ೧೫೦ ಎಕರೆ ಹೊಲದಲ್ಲಿ ಕೃಷಿ ತರಬೇತಿ ಶಾಲೆ ಯನ್ನು ಸ್ಥಾಪಿಸಿ, ಭವ್ಯವಾದ ಹಲವಾರು ಕರೆಗಳನ್ನು ಕಟ್ಟಿಸಿದರು‌ . ಭೂ ಅಭಿವೃದ್ಧಿ, ನೀರಾವರಿ ಯೋಜನೆಗಳು ಇವರ ದೂರದೃಷ್ಟಿಗೆ ಹಿಡಿದ ಕನ್ನಡಿ.

ಸಾಮಾಜಿಕ ಕ್ರಾಂತಿಕಾರಿಗಳಾದ ಇವರು ಬಾಲ್ಯ ವಿವಾಹವನ್ನು ವಿರೋಧಿಸಿದರು.

ಧರ್ಮ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸು ವಲ್ಲಿ ಲಿಂಗರಾಜರು ಕೈಗೊಂಡ ಯೋಜನೆಗಳು ಇಂದಿಗೂ ಪ್ರಚಲಿತವಿದ್ದು, ಕೃಷಿ ಮತ್ತು ನೀರಾವರಿ ಬಗೆಗಿನ ಕಾಳಜಿ, ರೈತಪರ ನಿಲುವು, ಶಿಕ್ಷಣ ಮತ್ತು ಸಮಾಜದ ಒಲವು ಗಳು ಅವರೊಳಗಿನ ಚುರುಕಿನ ಕ್ರಿಯಾಶೀಲತೆಯನ್ನು ಪ್ರದರ್ಶನಗೊಳಿಸುವಂತಹವಾಗಿದ್ದವು.ಪ್ರತಿ ಆರ್ಥಿಕ ವಲಯದ ಅಭಿವೃದ್ಧಿಗೆ ಕೊಟ್ಟಂತಹ ಬೆಂಬಲ ಬಹಳ ಮಹತ್ವಪೂರ್ಣವಾದದ್ದು.

ಸದಾ ಸಾಮಾಜಿಕ ಚಿಂತನೆಯಲ್ಲಿದ್ದ ಇವರು ಸಮಾಜದ ಸಂಘಟನೆಗೆ ಹಲವಾರು ಯೋಜಿತ ದಾನ ದತ್ತಿಗಳನ್ನು ನೀಡಿದ್ದಲ್ಲದೇ ತಮ್ಮ ಸರ್ವಸ್ವವನ್ನೂ ಸಮಾಜಕ್ಕೋಸ್ಕರ ಮುಡಿಪಾಗಿಟ್ಟ ಧೀರೋದಾತ್ತರು .

ಮಾತಿನ ನಿಲುವು, ಯೋಜಿತ ಲಹರಿ, ಗಟ್ಟಿ ನಿರ್ಧಾರಗಳು ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷ್ ಅಧಿಕಾರಿಗಳೂ ಸಹ ಬೆರಗುಗೊಳಿಸುವಂತೆ ಮಾಡಿದ್ದವು.

ಸಂಘಟನೆಯೇ ಅಭಿವೃದ್ಧಿಯ

ಹೆದ್ದಾರಿ ಎಂದರಿತ ಲಿಂಗರಾಜರು, ಲಿಂಗಾಯತ ಸಂಘಟನೆಯ ಪ್ರಥಮ ರೂವಾರಿ ಎನಿಸಿ, ಅಖಿಲ ಭಾರತ ವೀರಶೈವ ಮಹಾಸಭೆಯನ್ನು ಸ್ಥಾಪಿಸಿದರು. ಪ್ರಸಿದ್ಧ ಕರ್ಣಾಟಕ ಲಿಂಗಾಯತ ಶಿಕ್ಷಣ ಸಂಸ್ಥೆ (ಕೆಎಲ್ ಇ) ಗೆ ಇವರೆ ಬುನಾದಿಯನ್ನು ಹಾಕಿ ಕೊಟ್ಟವರು.

ಅವರು ಲಿಂಗಾಯತ ವಿದ್ಯಾರ್ಥಿಗಳ ಶಿಕ್ಷಣದ ಸಲುವಾಗಿ ಅವರ ಎಲ್ಲಾ ಆಸ್ತಿಗಳನ್ನು ದಾನ ಮಾಡಿ ಲೋಕೋಪಕಾರಿ ಎನಿಸಿಕೊಂಡರು. ಅವರನ್ನು ಲಿಂಗಾಯತ ಸಮುದಾಯದ ಶೈಕ್ಷಣಿಕ ಸಂಚಲನೆಯ ಒಂದು ಮಹಾನ್ ಮೂಲ ಸ್ಫೂರ್ತಿ ಯೆಂದೆ ಪರಿಗಣಿಸಲಾಗುತ್ತದೆ.

ಶಿರಸಂಗಿ ಲಿಂಗರಾಜರು ೧೯೦೬ ನೇ ಇಸವಿಯ ಆಗಸ್ಟ್ ತಿಂಗಳಲ್ಲಿ ಲಿಂಗಾಯತ ವಿದ್ಯಾರ್ಥಿಗಳ ಉನ್ನತಿ ಮತ್ತು ಶಿಕ್ಷಣಾಭಿವೃದ್ಧಿಗಾಗಿ ನವಲಗುಂದ – ಶಿರಸಂಗಿ ಟ್ರಸ್ಟ್ ಸ್ಥಾಪಿಸಿದರು. ೧೯೩೦ ಮತ್ತು ೧೯೮೪ ರ ನಡುವೆ ಈ ಟ್ರಸ್ಟ್ ನಿಂದ ಸುಮಾರು ೬೯೨೫ ವಿದ್ಯಾರ್ಥಿಗಳು ಪಡೆದ ಹಣಕಾಸು ನೆರವಿನ ಮೌಲ್ಯ ಅಂದಾಜು ೨೨,೯೮,೩೨೧-೦೦ ಭಾರತೀಯ ರೂಪಾಯಿಗಳು . ಈ ಟ್ರಸ್ಟ್ ಈಗಲೂ ಸಹ ಲಿಂಗಾಯತ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯವನ್ನು ಮುಂದುವರೆಸಿದೆ. ಡಿ.ಸಿ.ಪಾವಟೆ, ಬಿ.ಡಿ.ಜತ್ತಿ, ಎಸ್.ಆರ್.ಕಂಠಿ, ರತ್ನಪ್ಪಾ ಕುಂಬಾರರು ಈ ಟ್ರಸ್ಟ್ ನಿಂದ ಆರ್ಥಿಕ ನೆರವು ಪಡೆದ ಕೆಲವು ಗಮನಾರ್ಹ ವ್ಯಕ್ತಿಗಳು..

“ಬಡಮಕ್ಕಳಿಗೆ ಉನ್ನತ ಶಿಕ್ಷಣ ಸಿಗಬೇಕು, ಸರ್ವರೂ ಸಹಬಾಳ್ವೆಯಿಂದ ಸುಖ ಜೀವನ ನಡೆಸಬೇಕೆಂಬ ಉದ್ದೇಶದಿಂದ ಸಿರಸಂಗಿ ಲಿಂಗರಾಜ ದೇಸಾಯಿ ಅವರು ತಮ್ಮ ಆಸ್ತಿಯನ್ನು ಸಮಾಜಕ್ಕೆ ದಾನ ಮಾಡಿ ನಾಡಿಗೆ ಮಾದರಿಯಾಗಿದ್ದಾರೆ”.

*ಆಧುನಿಕ ಕೃಷಿ ಪದ್ಧತಿ ಅಳವಡಿಕೆ*

ಕೃಷಿಗೆ ಆದ್ಯತೆ ನೀಡಿ ಬೀಜ ಗೊಬ್ಬರ ಬೆಳೆ ಸಮೃದ್ಧಿ ನೀರಾವರಿ ಕೆರೆ ಕಟ್ಟೆ ಕಟ್ಟಿಸಿ ನೆಲದ ನೀರಿನ ಅಂತರಗಂಗೆ ಹೆಚ್ಚುವಂತೆ ಮಾಡಿದ ಶ್ರೇಷ್ಠ ಕೃಷಿ ತಜ್ಞರು.

ನವಲಗುಂದದಲ್ಲಿ ನೀಲಮ್ಮನ ಕೆರೆ ಕಟ್ಟಿಸಿ ಇಂದಿನವರೆಗೂ ನೀಲಮ್ಮನ ಕೆರೆ ಅಲ್ಲಿನ ಜನರಿಗೆ

ವರಪ್ರಸಾದ.

ಆರು ಜನ ಮಡದಿ ಇದ್ದರೂ ಸಂತಾನದ ಕೊರತೆ. ಹೀಗಾಗಿ ತುಂಬಾ ಜಿಗುಪ್ಸೆಗೊಂಡು ಆಗಿನ ಜಿಲ್ಲಾಧಿಕಾರಿ ಶ್ರಿ ಅರಟಾಳ ರುದ್ರಗೌಡರನ್ನು ಕರೆದುಕೊಂಡು ಶ್ರಿ ಶಿರಸಂಗಿ ಲಿಂಗರಾಜ ದೇಸಾಯಿಯವರು ಅಂದಿನ ಅಥಣಿಯ ಶ್ರಿ ಮುರುಗೆಂದ್ರ  ಶಿವಯೋಗಿಗಳ ಹತ್ತಿರ ಹೋಗಿ

ಪೂಜ್ಯರ ಮುಂದೆ ನನಗೆ ಸಂತಾನ ಭಾಗ್ಯ ಇಲ್ಲ ಹೀಗಾಗಿ ಇಡೀ ಆಸ್ತಿಯನ್ನು ತಮ್ಮ ಶ್ರಿ ಮಠಕ್ಕೆ ಬರೆದುಕೊಡುವುದಾಗಿ ಹೇಳಿದಾಗ.ಅಥಣಿಯ ಶ್ರಿ ಮುರುಗೆಂದ್ರ  ಶಿವಯೋಗಿಗಳು ಶ್ರೀಮಂತ ಲಿಂಗರಾಜ ದೇಸಾಯಿಯವರು ನಿಮ್ಮ ಆಸ್ತಿ ಸಂರಕ್ಷಣೆ ಮಾಡಲು ನನಗೆ ಅಸಾಧ್ಯವಾದ ಮಾತು ಎಂದರಂತೆ 

ನಿಮಗೆ ಮಕ್ಕಳಿಲ್ಲ ನೀವು ಶಿಕ್ಷಣ ಸಂಸ್ಥೆಗೆ ಸಹಾಯ ಮಾಡುವುದು ಯೋಗ್ಯ ಮತ್ತು ಸ್ತುತ್ಯಾರ್ಹ. ಒಂದು ವೇಳೆ ಹೀಗೆ ಮಾಡಿದಲ್ಲಿ ಅಲ್ಲಿ ಕಲಿಯುವ ಎಲ್ಲಾ ಮಕ್ಕಳು ನಿಮ್ಮ ಮಕ್ಕಳಾಗುತ್ತ ನಿಮ್ಮ ಕನಸಿನ ಪರಿವರ್ತನೆಗೆ ದಾರಿ ದೀಪ ಎಂದಿದ್ದರಂತೆ.

ತಮ್ಮ 45 ನೆಯ ವಯಸ್ಸಿನಲ್ಲಿ ಬಯಲಲ್ಲಿ ಬಯಲಾದರು


5 thoughts on “

  1. ಹೊಸ ತಲೆಮಾರಿನವರಿಗೆ ಉತ್ತಮ ನಿದರ್ಶನ
    ಸ್ವಾರ್ಥ ತ್ಯಾಗ ನಿರಂತರ ಸೇವೆಯೇ ಈಶ ಸೇವೆ ಎಂದ ಲಿಂಗರಾಜರ ಜೀವನ ಅರ್ಥ ಪೂರ್ಣ ಮಾಹಿತಿ ಸಂಗ್ರಹಿಸಿ ನೀಡಿದ್ದೀರಿ

  2. ನಮ್ಮ ಭಾಗದವರೇ ಆದ ದಾನಶೂರ.. ತ್ಯಾಗವೀರ ಶ್ರೀ ಶಿರಸಂಗಿ ಲಿಂಗರಾಜ ದೇಸಾಯಿ ಅವರ ಜೀವನಗಾಥೆ….
    ಪರಿಪೂರ್ಣವಾಗಿ ಎಲ್ಲವೂ ಒಳಗೊಂಡಂತೆ
    ಮೂಡಿಬಂದಿರುವುದು ನಮ್ಮ0ಥವರಿಗೆಲ್ಲ
    ತಿಳಿದುಕೊಳ್ಳಲು ಅನುಕೂಲವಾಯಿತು
    ಸಾವಿಲ್ಲದ ಶರಣರು… ಇದೊಂದು ಅದ್ಭುತವಾದ ಮತ್ತು ನಾವೆಲ್ಲರೂ ಹೆಮ್ಮೆ ಪಡುವಂಥ ಸರಣಿ ಮಾಲಿಕೆಯ ಅಂಕಣ ಬರಹ

    ಸುಶಿ

  3. ನಿಜಕ್ಕೂ ಓದಿ ಕಣ್ಣೀರು ಹರಿಯಿತು
    ಏಷ್ಟು ಕಷ್ಟ ಪಟ್ಟು ಸಮಾಜದ ಸಂಘಟನೆಯ ವ್ಯಾಜ್ಯ ಪರಿಹಾರ ನೀಡುವಲ್ಲಿ ಯಶಸ್ವಿಯಾಗಿದ್ದಾರೆ

Leave a Reply

Back To Top