ಅಂಕಣ ಬರಹ
ಸಾಧಕಿಯರ ಯಶೋಗಾಥೆ
ಡಾ.ಸುರೇಖಾ ರಾಠೋಡ್
ವಿಶ್ವದ ಮೊದಲ ನೌಕಾನೆಲೆಯ ಮುಖ್ಯಸ್ಥೆ
ಸುಮತಿ ಮೊರಾರ್ಜಿ(1909-1998)
ಭಾರತದ ನೌಕಾನೆಲೆಯಲ್ಲಿ ಸೇವೆಸಲ್ಲಿಸಿದ ಮೊದಲ ಮಹಿಳೆ ಎಂಬ ಹೆಗ್ಗಳಿಕೆ ಸುಮತಿ ಮೊರಾರ್ಜಿ ಅವರಿಗೆ ಸಲ್ಲುತ್ತದೆ. ಹಾಗೇಯೆ ವಿಶ್ವದ ನೌಕೆಗಳ ಮೊದಲ ಮಹಿಳಾ ಓನರ್(ಒಡತಿ) ಆಗಿದ್ದರು. ಇವರು ಪುರುಷ ಆಕ್ರಮಿತವಾದ ನೌಕಾನೆಲೆ ವಲಯವನ್ನು ಪ್ರವೇಶಿಸಿದ ಮೊದಲ ಮಹಿಳೆ ಕೂಡ ಆಗಿರುವರು.
ಸುಮತಿಯವರು 13 ಮಾರ್ಚ್ 1909ರಲ್ಲಿ ಬಾಂಬೆಯಲ್ಲಿ ಜನಿಸಿದರು. ಇವರ ತಂದೆ ಮಧರದಾಸ ಗೊಕೋಲದಾಸ. ತಾಯಿ ಪ್ರೇಮಾಬಾಯಿ. ಸುಮತಿಯವರ ಮೊದಲ ಹೆಸರು ಜಮುನಾ ಆಗಿತ್ತು. ಇವರು ಚಿಕ್ಕವರಿರುವಾಗಲೇ ಶಾಂತಿಕುಮಾರ್ ನರೋತ್ತಮ್ ಮೊರಾರ್ಜಿಯವರೊಂದಿಗೆ ವಿವಾಹವಾಯಿತು. ಈ ದಂಪತಿಗಳಿಗೆ ನರೋತ್ತಮ್ ಮೊರಾರ್ಜಿ ಎಂಬ ಮಗ ಜನಿಸಿದನು.
ಸುಮತಿಯವರು ಕೇವಲ 20 ವರ್ಷ ವಯಸ್ಸಿದ್ದಾಗ ಸ್ಕಿಂಡಿಯಾ ಸ್ಟೀಮ್ ನ್ಯಾವಿಗೇಷನ್ ಕಂಪನಿಯನ್ನು 1923ರಲ್ಲಿ ಪ್ರಾರಂಭಿಸಿದರು. ಮೊದಲು ಈ ಕಂಪನಿಯು ಸಣ್ಣ ಪ್ರಮಾಣದಲ್ಲಿ ತನ್ನ ಕಾರ್ಯಾರಂಭ ಮಾಡಿತು. ನಂತರದ ದಿನಗಳಲ್ಲಿ ಹಂತ ಹಂತವಾಗಿ ಅಭಿವೃದ್ಧಿಯಾಯಿತು. 1946ರ ಹೊತ್ತಿಗೆ ಈ ಕಂಪನಿಯಲ್ಲಿ ಕೆಲಸ ಮಾಡುವವರು ಸುಮಾರು ಆರು ಸಾವಿರಕ್ಕೂ ಹೆಚ್ಚು ಜನರಿದ್ದರು. 1956 ರಲ್ಲಿ ಭಾರತೀಯ ರಾಷ್ಟ್ರೀಯ ಸ್ಕೀಮ್ ಆಫ್ ಓನರ್ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದರು. ಇವರ ಮೇಲ್ವಿಚಾರಣೆಯಲ್ಲಿ ಕಂಪನಿಯ 43 ಹಡಗುಗಳು ಕಾರ್ಯನಿರ್ವಹಿಸುತ್ತಿದ್ದವು. ಸುಮತಿಯವರು 1979 ರಿಂದ 1987 ರವರೆಗೆ ಕಂಪನಿಯ ಅಧ್ಯಕ್ಷರಾಗಿದ್ದರು.
ಸುಮತಿಯವರು ಮಹಾತ್ಮ ಗಾಂಧೀಜಿಯವರ ಪ್ರಭಾವಕ್ಕೆ ಒಳಗಾಗಿದ್ದರು. ಇವರು ನಿಯಮಿತವಾಗಿ ಗಾಂಧೀಜಿಯವರ ಸಂಪರ್ಕದಲ್ಲದ್ದು ಹಲವಾರು ಬಾರಿ ಭೇಟಿಯಾಗಿದ್ದರು. ಗಾಂಧೀಜಿಯವರನ್ನು ಬೇಟಿಯಾಗಿದ್ದ ಕ್ಷಣಗಳನ್ನು ಪತ್ರಿಕೆಗಳು ವರದಿ ಮಾಡಿದ್ದವು. ಗಾಂಧೀಜಿಯವರು ತಮ್ಮ ಹತ್ತಿರದ ಸ್ನೇಹಿತರಲ್ಲಿ ಸುಮತಿಯೂ ಕೂಡ ಒಬ್ಬರೆಂದು ಹೇಳಿಕೊಂಡಿದ್ದರು. ಇವರು 1942 ರಿಂದ 1946ರ ವರೆಗೆ ಗಾಂಧೀಜಿಯವರೊಂದಿಗೆ ಸ್ವಾತಂತ್ರ್ಯಕ್ಕಾಗಿ ಭೂಗತ ಚಳುವಳಿಯಲ್ಲಿ ಭಾಗವಹಿಸಿದ್ದರು.
ಸುಮತಿಯವರು ಅನೇಕ ಸಾಧನೆಗಳನ್ನು ಮಾಡಿರುವರು. ಮುಂಬೈನ ಜೂಹುವಿನಲ್ಲಿರುವ ಸುಮತಿ ವಿದ್ಯಾಕೇಂದ್ರ ಶಾಲೆಯ ಸಂಸ್ಥಾಪಕರಾಗಿದ್ದರು. 1965 ರಲ್ಲಿ ಇಂಟರ್ ನ್ಯಾಷನಲ್ ಸೊಸೈಟಿ ಫಾರ್ ಕೃಷ್ಣಾ ಕಾನ್ಸಿಯಸ್‍ನ್ಸ್ (ಇಸ್ಕಾನ)ನ ಸಂಸ್ಥಾಪನೆಗೆ ಇವರು ಮಾರ್ಗದರ್ಶನ ಮಾಡಿದ್ದರು.
1970ರಲ್ಲಿ ಲಂಡನ್ನಿನ ವಲ್ರ್ಡ್ ಶಿಪ್ಪಿಂಗ್ ಒಕ್ಕೂಟಕ್ಕೆ ಉಪಾಧ್ಯಕ್ಷರಾಗಿ ಆಯ್ಕೆಯಾದರು. ನರೋತ್ತಮ್ ಮುರಾರ್ಜಿ ಇನ್ಸಿಟಿಟ್ಯೂಟ್ ಆಫ್ ಶಿಪ್ಟಿಂಗ್‍ನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ಆಧುನಿಕ ಭಾರತೀಯ ಶಿಪ್ಟಿಂಗ್ ಕಂಪನಿಗಳಿಗೆ ಒಂದು ಮಾದರಿಯನ್ನು ಸ್ಥಾಪಿಸಲು ಸಹಾಯ ಮಾಡಿದರು. ವ್ಯಾಪಾರ ಮೌಲ್ಯಗಳನ್ನು ಮಾತ್ರವಲ್ಲದೇ ಭಾರತೀಯ ಸಂಸ್ಕøತಿ ಮತ್ತು ಪರಂಪರೆಯ ವಿಚಾರಗಳನ್ನು ಪ್ರಚಾರ ಮಾಡಲು ಸಹಕರಿಸಿದರು. ಇವರು 89ನೇ ವಯಸ್ಸಿನಲ್ಲಿ 1998 ಜೂನ್ 27ರಂದು ಹೃದಯಾಘಾತವಾಗಿ ನಿಧನರಾದರು.
ಇವರಿಗೆ ಭಾರತ ಸರ್ಕಾರವು 1971ರಲ್ಲಿ ಪದ್ಮವಿಭೂಷ ಪ್ರಶಸ್ತಿ ನೀಡಿ ಗೌರವಿಸಿತು.
ಡಾ.ಸುರೇಖಾ ರಾಠೋಡ್
ಸುರೇಖಾ ರಾಠೋಡ್ ಎಂ.ಎ , ಎಂ.ಫಿಲ್,ಪಿಎಚ್ ಡಿ, ಪಿಡಿಎಫ್. ಪದವಿ ಪಡೆದು ವಿಜಾಪುರ ಮಹಿಳಾ ವಿವಿಯಲ್ಲಿ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. “ಸಿದ್ದಿ ಸಮುದಾಯದ ಲಿಂಗ ಸಂಬಂಧಿ ಅದ್ಯಯನ ” ಎಂಬ ವಿಷಯದಲ್ಲಿ ಕನ್ನಡ ವಿಶ್ವವಿದ್ಯಾಲಯ ಹಂಪಿಯಿಂದ ಎಂಫಿಲ್ ಪದವಿ ಪಡೆದಿದ್ದಾರೆ. “ವಿಜಯಪುರ ನಗರದ ಕೊಳಚೆ ನಿವಾಸಿ ಮಹಿಳೆಯರ ಬದುಕು ಬವಣೆ ಭರವಸೆ” ಎಂಬ ವಿಷಯದಲ್ಲಿ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ವಿಜಯಪುರಯಿಂದ ಪಿಎಚ್ ಡಿ ಪದವಿ ಪಡೆದಿದ್ದಾರೆ. ಇದು ಅವರ ಮಹಿಳೆಯರ ಮೇಲೆ ಬೀರಿದ ಬೆಳಕಿಗೆ ಸಾಕ್ಷಿಯಾಗಿದೆ. “ಹರಣಶಿಕಾರಿ ಮಹಿಳೆಯರ ಸ್ಥಾನಮಾನ” ಎಂಬ ವಿಷಯದ ಕುರಿತು ಪಿಡಿಎಫ್ (ಸಂಶೋಧನೆ ) ಮುಂದುವರಿದಿದೆ. ಹೊರ ತಂದ ಪುಸ್ತಕಗಳು: ವಿಜಯಪುರ ನಗರದ ಕೊಳಚೆ ನಿವಾಸಿ ಮಹಿಳೆಯರ ಬದುಕು ಬವಣೆ ಭರವಸೆ, ದಲಿತ ಸಾಹಿತ್ಯ ಪರಿಷತ್ತಿ ಗದಗ ಪ್ರಕಟಿಸಿದೆ.೨. ದಲಿತ ಮಹಿಳಾ ಕಾರ್ಮಿಕರ ಸಮಸ್ಯೆಗಳು, ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು ಪ್ರಕಟಿಸಿದೆ ೩. ಮಹಿಳಾ ಅದ್ಯಯನ, ಯುಜಿಸಿ ನೆಟ್ -ಜೆಆರ್ ಎಫ್,ಕೆಸೆಟ್ ಪಠ್ಯ ಮತ್ತು ಪ್ರಶ್ನೆ ಪತ್ರಿಕೆಗಳು’ ಡಿವಿಕೆ ಪ್ರಕಾಶನ ಮೈಸೂರು ಪ್ರಕಟಿಸಿವೆ