ಆಧುನಿಕ ಭಾರತದ ಸ್ತ್ರೀವಾದದ ತಾಯಿ ಮಾತೆ ಸಾವಿತ್ರಿಬಾಯಿ ಫುಲೆ ಸಿದ್ದಾರ್ಥ ಟಿ ಮಿತ್ರಾ

ಮಹಿಳಾಲೋಕದ ಸಾಧನೆಗಳ  ಚರಿತ್ರೆಯನ್ನು ಸರಿಯಾಗಿ ಗ್ರಹಿಸದೆ,ದಾಖಲು ಮಾಡದೇ ಇತಿಹಾಸದುದ್ದಕ್ಕೂ.ಅದರಲ್ಲೂ ಮುಖ್ಯವಾಗಿ ಕೆಳವರ್ಗದ ಮಹಿಳೆಯರ ಅಸಾಮಾನ್ಯ ಸಾಧನೆಗಳ ಬಗ್ಗೆ ಸೂಕ್ತ ರೀತಿಯಲ್ಲಿ ಪ್ರಚಾರ ಸಿಗದೆ ಪ್ರಕಟವಾಗದೇ ನೇಪಥ್ಯದಲ್ಲಿಯೇ ಉಳಿದಿವೆ.ಇದಕ್ಕೆ ಕೆಲವು ಚರಿತ್ರೆಕಾರರ ನಿರ್ಲಕ್ಷ್ಯ, ಅಸಡ್ಡೆ ಮನೋಭಾವ, ಪೂರ್ವಾಗ್ರಹ ಮತ್ತು ಜಾಣಮರೆವು ಕಾರಣವಾಗಿರಬಹುದು.  ಚರಿತ್ರೆ ನಿರ್ಮಿಸಿದ ಹೆಸರಾಂತ ವ್ಯಕ್ತಿಗಳ ಸಾಧನೆಯ ಹಿಂದೆ ಅನೇಕರು ಬಹುವಿಧದಲ್ಲಿ ಶ್ರಮಿಸಿದ್ದಾರೆ. ಕುಟುಂಬಗಳು ಹಲವು ರೀತಿಯಲ್ಲಿ ತ್ಯಾಗ,ಸಹನೆ ಸಹಕಾರವನ್ನು ನಿರ್ವಹಿಸಿವೆ.ಆದರೆ ಚಾರಿತ್ರಿಕ ವ್ಯಕ್ತಿಗಳ ಬೆನ್ನಿಗಿದ್ದ ಅನೇಕರು ನೇಪಥ್ಯದಲ್ಲಿಯೇ ಉಳಿದಿದ್ದಾರೆ. ಶತಮಾನಗಳಕಾಲ ವರ್ಣಭೇದ,ವರ್ಣವರ್ಗ ವಿಭಜನೆಯಿಂದ ತತ್ತರಿಸಿ ಹೋಗಿದ್ದ ಭಾರತದ ಸಮಾಜ, ಧರ್ಮವನ್ನು ಪ್ರಶ್ನಿಸಿ ಖಂಡಿಸಿ ಸಮಾನತೆಯ ಈ ವಿಷಯ ಪ್ರಸ್ತಾಪವಾದಗ ಮಾತ್ರ ಸಹಜವಾಗಿಯೇ ಭಾರತದಲ್ಲಿ ಜಾತಿ, ವ್ಯವಸ್ಥೆ ಪರಿಸ್ಥಿತಿ ಒಂದಷ್ಟು ಆಲೋಚನೆಗಳು,ಭಾವನೆಗಳು ಮನವನ್ನು ದಿಗ್ಭ್ರಾಂತಗೊಳಿಸುತ್ತವೆ.ಪರಸ್ಥಿತಿ ಕುರಿತು ಒಂದಷ್ಟು ಆಲೋಚನೆಗಳು, ವಿಚಾರಗಳು ಮನದಲ್ಲಿ ಹಾದುಹೋಗುತ್ತವೆ.ಭಾರತದಲ್ಲಿ  ಅದೇಷ್ಟೋ ಸ್ತ್ರೀಯರು ತಾವು ಖುದ್ದಾಗಿ ಕಷ್ಟಕಾರ್ಪಣ್ಯ ,ಕಂದಾಚಾರಗಳು,ಅನಿಷ್ಟ ಪರಂಪರೆಗಳನ್ನು ಎದುರಿಸಿದರು ಪರರಿಗಾಗಿ ಮಿಡಿದ ಪರಿಣಾಮ ಇಂದು ಎಲ್ಲ ರಂಗಗಳಲ್ಲೂ ನಮ್ಮ ಹೆಣ್ಣುಮಕ್ಕಳು ಎತ್ತರಕೇರಲು ಸಾದ್ಯವಾಗಿದೆ ಎನಿಸುತ್ತದೆ.ಅಂತಹದೊಂದು ಸಾಮಾಜಿಕ ಕ್ರಾಂತಿಕಾರಿ ಕಾಳಜಿ ಇಲ್ಲದಿದ್ದರೆ ಮಾತೆ ಸಾವಿತ್ರಿಬಾಯಿ ಫುಲೆ ಅವರು ಭಾರತ ದೇಶದ ಪ್ರಥಮ ಮಹಿಳಾ ಶಿಕ್ಷಕಿ ಎಂಬ ಹೆಗ್ಗಳಿಕೆ ಪಡೀಯುವ ಜೊತೆಗೆ ಸಾಮಾಜಿಕ ಕೆಲಸಗಳನ್ನು ಅಷ್ಟು ಆಗಾಧ ಪ್ರಮಾಣದಲ್ಲಿ ಮಾಡಲು ಸಾಧ್ಯವಿತ್ತೆ ?ಪತಿ ಜ್ಯೋತಿಬಾ ಫುಲೆ ಅವರ ಜೊತೆಗೂಡಿ ಹೆಗಲಿಗೆ ಹೆಗಲು ಕೊಟ್ಟು ತಾಯಿ ಸಾವಿತ್ರಿಬಾಯಿ ಅವರು ಮಾಡಿದ ಕೆಲಸ ಕಾರ್ಯಗಳು ಕಡಿಮೆಯೇ! 19ನೇ ಶತಮಾನದ ಹೊತ್ತಿಗೆ ನಮ್ಮ ಭಾರತ ದೇಶದಲ್ಲಿ ಅನೇಕ ಅನಿಷ್ಟ ಪದ್ಧತಿಗಳು ಇದ್ದ ಸಂದರ್ಭದಲ್ಲಿ ಅಂಥಹ ಕೆಟ್ಟ ಅಸಹ್ಯ ಹುಟ್ಟಿಸುವ ವಾತಾವರಣದಲ್ಲಿ ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಮಹಿಳೆಯರ ಏಳಿಗೆಗಾಗಿ ಕಂಕಣಭದ್ದರಾಗಿ ನಿಂತರು ಮಾತೆ ಸಾವಿತ್ರಿಬಾಯಿ ಫುಲೆ.ಅದಕ್ಕೆಂದೆ ಇಂದು ಅವರನ್ನು ಆಧುನಿಕ ಭಾರತದ ಭಾರತದ ಸ್ತ್ರೀವಾದದ ತಾಯಿ ಎಂದು ಗೌರವಿಸಲಾಗುತ್ತದೆ.ಪತಿ ಮಹಾತ್ಮಾ ಜ್ಯೋತಿಬಾ ಫುಲೆ ಅವರ ಜೊತೆಗೂಡಿ ಭಾರತದ ಪ್ರಥಮ ಮಹಿಳಾ ಶಾಲೆ ಸ್ಥಾಪಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ.ಕಷ್ಟ ನಷ್ಟಗಳನ್ನು ಅಡೆತಡೆಗಳನ್ನು ಎದುರಿಸಿ ನಾವು ಮುಂದೆ ಬರಬೇಕು.ಭವಿಷ್ಯ” ನಮ್ಮದು” ಎಂದು ಸಾವಿತ್ರಿಬಾಯಿ ಫುಲೆ ಹೇಳಿದ್ದರು.ಆ ಮಾತು ಇಂದು ಸತ್ಯವಾಗಿದೆಯಲ್ಲವೇ? ಕಷ್ಟಗಳು ಕಠಿಣ ಪರಿಸ್ಥಿತಿಗಳು ಸಂದಿಗ್ದಗಳು ಎದುರಾದಾಗ ದಾರಿತೋರಲೆಂದು ಯಾರಾದರೊಬ್ಬರು ಬರುತ್ತಾರೆ ಎಂದು ಊಹಿಸುವುದು ಈ ನೆಲದ ಮಣ್ಣಿನ ಗುಣವೇ ಇರಬೇಕು.
ಮಹಾಪುರುಷರನ್ನು ಮಹಾತ್ಮರನ್ನಾಗಿ ರೂಪಿಸುವುದರಲ್ಲಿ ಅವರ ಪತ್ನಿಯರ ಪಾತ್ರ ಅಪಾರವಾಗಿರುತ್ತದೆ.
ಆದರೆ ಪತ್ನಿಯನ್ನು ಮಹಾನ ಸ್ತ್ರೀವಾದಿ,ದೇಶದ ಮೊದಲ ಶಿಕ್ಷಕಿಯಾಗಿ
ಅವರು ಮಾಡಿದ್ದು ಇತಿಹಾಸ ಕೇವಲ ಜೀವನ ಸಂಗಾತಿಗಳಾಗಿ , ಒಡನಾಡಿಗಳಾಗಿ,ಜೀವನದ ಸಂಕಷ್ಟಗಳಲ್ಲಿ ಜೋತೆಯಾಗಿರುವುದಲ್ಲದೇ ಅವರಿಗೆ ಮಾನಸಿಕವಾದ ಬಲವನ್ನು , ಉತ್ಸಾಹವನ್ನು ಹೆಚ್ಚಿಸುವ ಶಕ್ತಿಯಾಗಿಯೂ ಇದ್ದು.ಅವರು ಕಠಿಣವಾದ, ಕಷ್ಟಸಾಧ್ಯವಾದ ಸಮಯದಲ್ಲಿ ಬಲವನ್ನು, ಪ್ರೇರಣೆಯನ್ನು ಒದಗಿಸುತ್ತಾರೆ.ಧೈರ್ಯ,ಸಾಹಸ ಕಳೆದುಕೊಂಡ ವೇಳೆಯಲ್ಲಿ ನೈತಿಕ ಮಾನಸಿಕವಾದ ಬಲವನ್ನು ನೀಡುತ್ತಾ ಜೀವನದಲ್ಲಿ ವಿಚಲಿತವಾಗದ ಸ್ಥಿರವಾದ ಚೈತನ್ಯವನ್ನು ನೀಡುತ್ತಾರೆ.ಅದರಂತೆಯೇ
 ತಾಯಿ ಸಾವಿತ್ರಿಬಾಯಿ ಫುಲೆ ಅವರ ಜೀವನವನ್ನು ಬೆಳಗಿಸಿ ಕಷ್ಟಕಾಲದಲ್ಲಿ ಅವರಿಗೆ ಆಸರೆಯಾಗಿ ನಿಂತು ಹೆಜ್ಜೆ ಹೆಜ್ಜೆಗೂ ಪ್ರೋತ್ಸಾಹವನ್ನು ನೀಡಿ ಅವರ ಬದುಕಿನ ಸುಖ ದುಃಖಗಳಲ್ಲಿ ಭಾಗಿಯಾಗಿ ನಿರಂತರವಾಗಿ ಬೆನ್ನೆಲುಬಾಗಿ ನಿಂತಿದ್ದರು ಮಹಾತ್ಮ ಜ್ಯೋತಿಬಾ ಫುಲೆ.  ಮಾತೆ ಸಾವಿತ್ರಿಬಾಯಿ ಫುಲೆ  ಅವರು ತನ್ನ ಬದುಕಿನ ಪ್ರತಿ ಕ್ಷಣವನ್ನು ಕೂಡ ಶೋಷಿತ,ದಲಿತ, ಕೆಳವರ್ಗದ,ನಿರ್ಗತಿಕ ಹೆಣ್ಣು ಮಕ್ಕಳ  ವೀಮೋಚನದಾತೆ  ಮಾತೆ ಸಾವಿತ್ರಿಬಾಯಿ ಅವರ ಬದುಕಿನಲ್ಲಿ ಎದುರಾದ ಆತಂಕಗಳನ್ನು, ಕಲ್ಲು ಮುಳ್ಳನ್ನು ದೂರ ಮಾಡಲು ಶ್ರಮಿಸಿದರು ಸಿದರು.ಸಾವಿತ್ರಿಬಾಯಿ ಅವರನ್ನು ಕೇವಲ ತಮಗೆ ಮಾತ್ರವಲ್ಲದೆ ಇಡೀ ರಾಷ್ಟ್ರದ ಅತ್ಯಂತ ಗೌರವದ ಹೆಣ್ಣು ಮಗಳೆಂದು ಭಾವಿಸುತಿದ್ದರು.ಈ ಶ್ರೇಷ್ಠ ಮಹಿಳೆ ಉನ್ನತವಾದ ಬಲವನ್ನು, ಸಂಕಲ್ಪವನ್ನು ನೀಡಿದ ವೀರ ಮಹಿಳೆ.ಅಂತಹ ಶ್ರೇಷ್ಠ ಮಹಿಳೆಯ ಬಗ್ಗೆ ನಾವು ಇಂದು ಅತ್ಯಂತ ಗೌರವವನ್ನು ತೋರಿಸುತ್ತಾ ಅವರನ್ನು ಅಕ್ಷದರವ್ವ ಹೆಣ್ಣು ಮಕ್ಕಳ ಪಾಲಿನ ಶಾಶ್ವತ ಬೆಳಕು ತ್ಯಾಗಮೂರ್ತಿ,ಎಂಬ ನಾಮಾಂಕಿತದಿಂದ ಕರೆಯುತ್ತಿದ್ದೆವೆ .ಅಂತಹ ಶ್ರೇಷ್ಠ ಮಹಿಳೆ ಯಾವ ವೀರ ಮಹಿಳೆಗೂ ಕಡಿಮೆಯೇನಲ್ಲ. ಮಹಾಭಾರತದ ಬಾಲಕಿ ಕುಂತಿ ತನ್ನ ಹದಿನೈದು ವರ್ಷ ವಯಸ್ಸಿನಲ್ಲಿಯೇ ಕರ್ಣನನ್ನು ಹೆತ್ತು ಲೋಕನಿಂದನೆಯ ಭಯದಿಂದ ಗಂಗಾ ನದಿಯಲ್ಲಿ ಬಿಡುವ ಸನ್ನಿವೇಶವನ್ನು ಕಣ್ಣಿರು ಉಕ್ಕಿ ಬರುವಂತೆ ಕವಿಗಳು ಬಣ್ಣಿಸುತ್ತಾರೆ. ಅಂತರಂಗವನ್ನು ಕವಿಗಳು ಅಪೂರ್ವವಾಗಿ ಚಿತ್ರಿಸಿದ್ದಾರೆ.
ಅದಕ್ಕಿಂತಲೂ ದುರ್ಬಲವಾದ ವೇದನೆಯನ್ನು ಅನುಭವಿಸಿದ ಹಿಂದುಳಿದ ಮಹಿಳೆಯರನ್ನು ನಾವು ಗುರುತಿಸಿದ್ದೇವೆಯೇ? ಚರಿತ್ರೆಕಾರರನ್ನು ಬಿಡಿ, ಕವಿಗಳು ಕೂಡಾ ತಳವರ್ಗದ ಕೆಳವರ್ಗಗಳ ಭಾವನೆಗಳನ್ನು ಗಮನಿಸದ ಪ್ರಪಂಚದವಿದು.ಈ ಕೊರತೆಯನ್ನು ನೀಗಿಸಬೇಕಾಗಿದೆ.ಕೆಳವರ್ಗಗಳ ಸಂಕಟ, ಕಣ್ಣಿರು,ತ್ರಿಕರಣಶುದ್ದಿಯಾಗಿ ಅವರು ಸಮಾಜಕ್ಕೆ ನೀಡಿದ ಸೇವೆ ಮುಖ್ಯವಾಹಿನಿಯ ಮೂಲಕ ಬೆಳಕಿಗೆ ಬರಬೇಕಾಗಿದೆ.ಆ ಹೊಣೆ ನಮ್ಮೆಲ್ಲರದಾಗಿದೆ
ಹಾಗೂ ರಾಜ್ಯದಲ್ಲಿ ನೂತನವಾಗಿ ಮಾತೆಯ ಅವರ ಹೆಸರಿನಲ್ಲಿ ಹುಟ್ಟಿಕೊಂಡ ಸಂಘ.
ಕರ್ನಾಟಕದ ಮೂಲೆ ಮೂಲೆಗಳಲ್ಲಿ ದಲಿತ, ಶೋಷಿತ, ಹಿಂದುಳಿದ, ಕೆಳವರ್ಗದ ಸಮುದಾಯಗಳ , ಮಹಿಳೆಯರು ಹೆಣ್ಣು ಮಕ್ಕಳು ಎದುರಿಸುತ್ತಿರುವ ಹತ್ತಾರು ಸಮಸ್ಯೆಗಳನ್ನು ಆಡಳಿತಶಾಹಿಗಳ ಗಮನಕ್ಕೆ ತಂದು ಪರಿಹರಿಸುವಲ್ಲಿ ಪ್ರಮುಖ ಪಾತ್ರ ವಹಿಸಬೇಕು ಸುಮ್ಮನೆ ಸಂಘ ಕಟ್ಟಿಕೊಂಡು ವೇದಿಕೆಗಳ ಮೇಲೆ ಕುಳಿತು ಸನ್ಮಾನ ಮಾಡಿಕೊಳ್ಳುವುದಲ್ಲ.
 ಪುರುಷ ಪ್ರಧಾನವಾದ  ರಾಷ್ಟ್ರದಲ್ಲಿ ನೂರಾರು ವರ್ಷಗಳ ಹಿಂದೆ ಮಾತೆ ಸಾವಿತ್ರಿಬಾಯಿ ಫುಲೆ ಅವರು ಮಾಡಿದ ಕ್ರಾಂತಿಕಾರಿ ಚಳುವಳಿಯ ಪರಿಣಾಮವೇ  ಅನೇಕ ಮಹಿಳಾ ವಿಶ್ವವಿದ್ಯಾಲಯಗಳು  ವಸತಿ ಶಾಲೆ, ಮಹಿಳಾ ಕಾಲೇಜು, ಪ್ರೌಢಶಾಲೆ, ಮಹಿಳಾ ಅಧ್ಯಯನ ಕೇಂದ್ರ ಆರಂಭಿಸಲು ಕಾರಣ. ಇದು ಅವರಿಗಿದ್ದ ದೂರದೃಷ್ಟಿಯನ್ನು ಬಿಂಬಿಸುತ್ತದೆ. ಆದರೆ ಇಂದು ಮಾತೆ  ಅವರ ಹೆಸರಿನಲ್ಲಿ ಹುಟ್ಟಿದ ಸಂಘಗಳು ಅಂದಿನಿದಿಂದ ಇಂದಿನವರೆಗೂ ಸಂಘ ಯಾವ ಕ್ರಾಂತಿಕಾರಿ ಬದಲಾವಣೆ ತಂದಿದೆ ಎಂಬುದೆ ತಿಳಿಯದಾಗಿದೆ. ಅವರು ಮಾಡಿದ ಹೋರಾಟ ಏನು ಎಷ್ಟು ಜನ ಶಾಲೆ ಬಿಟ್ಟ ಹೆಣ್ಣು ಮಕ್ಕಳಿಗೆ ಮರಳಿ ಶಾಲೆಗೆ ಸೆರಿಸಿದೆ, ಎಷ್ಟು ಅನಿಷ್ಟ ಪದ್ಧತಿಗಳ ವಿರುದ್ಧ ಹೊರಾಟ ಮಾಡಿದೆ?
ಅವರ ವಿಚಾರಗಳನ್ನು ಇಂದಿನ ಮುಂದಿನ ಪೀಳಿಗೆಯವರಿಗೂ ತಲುಪುವಂತೆ ಮಾಡಬೇಕಿದೆ.
ಆದರೂ ಕೂಡ ಕೆಲವರು ಕೆಲವು ತಮ್ಮದೇ ಆದ ರೀತಿಯಲ್ಲಿ ಸಂಘಟನೆಯನ್ನು ಬೆರೆ ದಿಕ್ಕಿಗೆ ತೆಗೆದುಕೊಂಡು ಹೋಗುತ್ತಿದ್ದಾರೆ ಇದು ತುಂಬಾ ಕಳವಳಕಾರಿ ಸಂಗತಿಯಾಗಿದೆ.


Leave a Reply

Back To Top