ಭಾರತಿ ಅಶೋಕ್ ಕವಿತೆ-ಆತ್ಮದ ಹಸಿವಿದು…

ನಿನ್ನಿರುವಿಕೆ ಸಾರಬೇಕೆ,
ಒಲಿದ ಹೃದಯಕೆ ತೋಚದೇನು
ಅಂತರಂಗದ ಮಿಡಿತ
ಭಾವಗಳ ತುಡಿತ

ಅಂತರಾತ್ಮಕೆ ಅರಿವಿದೆ
ನಿನ್ನೊಳಗಿನ ಚೇತನವ ಕೇಳು
ಪೇಳುವುದು
ನಿನ್ನಿರುವಿಕೆಯೇ ಕಾರಣವೆಂದು.

ಆತ್ಮದ ಹಸಿವಿದು,
ಮಗು ಅತ್ತರೆ
ತಾಯಿ
ಹಾಲುಣಿಸುವಳು ಎಂದಾದರೆ
ಅದು ದೇಹದ ಹಸಿವು.
ಮಗು ಅಳುವುದು ಬರೀ
ಹಾಲಿಗಾಗಿ ಅಲ್ಲ
ಅಮ್ಮನ ಬೆಚ್ಚನೆಯ ಆತ್ಮ ಸ್ಪರ್ಶಕೆ

ಎದೆಯೋಳಗೆ ಭದ್ರವಾಗಿ
ಅವಿತುಬಿಡಲು
ಭರವಸೆಯ ಬೆಳಕಿಗೆ
ದೇಹದಡವಿ ಸಂತೈಸಬೇಕೆ?

ಆತ್ಮ ಸ್ಪರ್ಶಿಸು ಸಾಕು
ಅಂತರಂಗದ ಕೈಯಿಂದ,
ಚೇತನಕೆ…
ಆಗ..
ಜಗವ ಗೆದ್ದ ಅನುಭೂತಿ


Leave a Reply

Back To Top