ಮಾಲಾ ಚೆಲುವನಹಳ್ಳಿಯವರ ಕೃತಿ ‘ನೆನಪಾಗುವ ಮುನ್ನ’ಒಂದು ಅವಲೋಕನ ರಾಜು ನಾಯ್ಕ

ಕವನ ಸಂಕಲನ:- ನೆನಪಾಗುವ ಮುನ್ನ
ಮುನ್ನುಡಿ:- ಶ್ರೀ ಉಮೇಶ್ ಹೊಸಹಳ್ಳಿ( ಸಾಹಿತಿಗಳು)
ಆಶಯ ನುಡಿ:- ಹೇಮಗಂಗಾ ರಾಜ್ಯಾಧ್ಯಕ್ಷರು ಸಿರಿಗನ್ನಡ ಸಾಹಿತ್ಯ ವೇದಿಕೆ ಹಾಸನ..ಸಿ.ಎನ್ ಉಮೇಶ್,ರಜನಿ ಅಶೋಕ್ ಜೀರಗ್ಯಾಳ
ಪ್ರಕಾಶನ:- ಮಂಗಳ ಪ್ರಕಾಶನ ಬೆಂಗಳೂರು

ಶ್ರೀಮತಿ ಮಾಲ ಚೆಲುವಿನ ಹಳ್ಳಿ ನನಗೆ ಸಾಹಿತ್ಯದ ಒಡನಾಡಿಯಾಗಿದ್ದು ಒಂದೆರಡು ವರ್ಷಗಳ ಹಿಂದೆ, ಪ್ರತಿದಿನ ನಾನು ಅವರು ಖಿದ್ಮಾ ಪೌಂಡೇಶನ್ ನಲ್ಲಿ ಬರೆಯುತ್ತಿದ್ದ ಕಾಲ.. ಪ್ರತಿದಿನ ಅಲ್ಲಿ ವಿಭಿನ್ನ ಸಾಹಿತ್ಯದ ಸ್ಪರ್ಧೆ ಇರುತ್ತದೆ. ಕಲಿಯುವ ಆಸೆ ಇದ್ದವರಿಗೆ ಅತ್ಯುತ್ತಮ ವೇದಿಕೆ ಅದು, ಆದರೆ ಕಡ್ಡಾಯವಾಗಿ ವಾರದಲ್ಲಿ ಇಂತಿಷ್ಟು ಸ್ಪರ್ಧೆಯಲ್ಲಿ ಪಾಲ್ಗೊಳಲೇಬೇಕು ಎಂಬ ಅವರದ್ದೇ ನಿಯಮ ಇದೆ.. ನನ್ನ ಅನಾರೋಗ್ಯದ ಸಂದರ್ಭದಲ್ಲಿ ನಾನು ಎರಡು ತಿಂಗಳು ಅಲ್ಲಿ ಏನೂ ಬರೆಯಲಿಲ್ಲ,ಹಾಗಾಗಿ ಅಲ್ಲಿಂದ ಹೊರಬಂದು ಬಿಟ್ಟೆ… ಹೀಗೆ ಒಮ್ಮೆ ನಾ ಬರೆದ ಕವನ ಮೆಚ್ಚಿ ಸಂದೇಶ ಕಳುಹಿಸಿದ ಮಾಲಾ ಚೆಲುವಿನಹಳ್ಳಿಯವರು ಆ ಕವಿತೆಯನ್ನು ಮೆಚ್ಚಿ ನನ್ನ ಪ್ರಶಂಸಿಸಿದ್ದರು, ಅಲ್ಲಿಗೆ ಸ್ನೇಹ ಸೇತು ತುಂಡಾಗಿತ್ತು..ಮುಂದೆ ನಾವು ಸಿರಿಗನ್ನಡ ಸಾಹಿತ್ಯ ವೇದಿಕೆಯಲ್ಲಿ ಮತ್ತೆ ಅಕ್ಷರದ ಜೊತೆ ಮುಖಾಮುಖಿಯಾದೇವು.. ಅವರ ಪುಸ್ತಕ ಲೋಕಾರ್ಪಣೆ ಸಂದರ್ಭದಲ್ಲಿ ಫೋನ್ ಮಾಡಿ ನನ್ನನ್ನು ಅರಸಿಕೆರೆಗೆ ಆಮಂತ್ರಿಸಿದ್ದರು, ನಾ ಹೋಗಲಾಗಲಿಲ್ಲ..ಕವನ ಸಂಕಲನ ಕಳುಹಿಸಿ ಎಂದಾಗ ರಜಿಸ್ಟರ್ ಪೋಸ್ಟ್ ಮುಖಾಂತರ ನನಗೆ ನೆನಪಾಗುವ ಮುನ್ನ ವೆ ನೆನಪಾಗವ ಮುನ್ನ ಪುಸ್ತಕ ಕೈ ಸೇರಿತ್ತು ಓದಿದ್ದೇನೆ.. ಮಾಲಾ ಚೆಲುವನಹಳ್ಳಿಯವರಲ್ಲಿ ಕವಿತ್ವ ಗಟ್ಟಿಯಾಗಿ ಬೇರು ಬಿಟ್ಟಿದೆ.. ಇಲ್ಲಿ ಒಂದೆರಡು ಚಿಗುರನ್ನಷ್ಟೆ ಅವರು ಬರೆದಿದ್ದಾರೆ.. ಗ್ರಹಿಣಿಯಾಗಿ ಸಂಸಾರದ ನೊಗಕ್ಕೆ ಅರ್ಧ ಹೆಗಲು ಕೊಡುವುದು ಹೆಣ್ತನದ ಸಾರ್ಥಕ್ಯವೇ ಆದರೂ,ಅದರಾಚೆ ಏನು ಎಂಬ ಪ್ರಶ್ನೆ ಒಡಲಲ್ಲಿ ಕೊರೆದಾಗ ಪತಿ ಚಂದ್ರಶೇಖರ್ ಇವರಿಗೆ ಪ್ರೇರಣೆಯಾಗಿದ್ದು ಬಹುಷ್ಯ ಅನುಪಮ ಗುಣವೆಂದೇ ಹೇಳಬೇಕು.. ಯಶಸ್ವಿ ಪುರುಷನ ಹಿಂದೆ ಮಹಿಳೆ ಇರುತ್ತಾಳೆ ಎಂಬ ಮಾತಿದೆ. ಆದರೆ ಯಶಸ್ವಿ ಮಹಿಳೆಯ ಹಿಂದೆ ಪುರುಷ ಇದ್ದ ಉದಾಹರಣೆ ಸಿಗುವುದು ಅಪರೂಪ.. ಸ್ನೇಹಿತೆಯಾಗಿ ಮಾಲಾರವರು ಹಸನ್ಮುಖಿ ವ್ಯಕ್ತಿತ್ವ ರೂಪಿಸಿಕೊಂಡವರು. ಅವರು ಮಾತಾಡುವ ಪ್ರತಿ ಶಬ್ದವೂ ನ್ಯಾಯ ತಕ್ಕಡಿಯಲ್ಲಿ ತೂಗಿದಂತಿರುತ್ತವೆ..ಅವರ ಸೃಜನಾತ್ಮಕ ಬರಹ ಮತ್ತು ಕ್ರಿಯಾಶೀಲತೆಗೆ ಲಲಿತಾ ಪುರಸ್ಕಾರ, ಜ್ಞಾನ ಸಿರಿ ಗಂಗೋತ್ರಿ * ಕೆ.ಎಸ್ ನರಸಿಂಹ ಸ್ವಾಮಿ ಕಾವ್ಯ ಪುರಸ್ಕಾರ ಭಾವೈಕ್ಯತಾ ಕಾವ್ಯಸಿರಿ ಪ್ರಶಸ್ತಿಗಳು ಒಲಿದಿವೆ..ಪ್ರಶಸ್ತಿಗಳಿಂದ ನಾವು ದೊಡ್ಡವರಾಗುವುದಿಲ್ಲ..ನಮ್ಮ ದೊಡ್ಡತನ ಪ್ರಕಟವಾದಾಗ ಆ ಗುಣಕ್ಕೆ ಸಿಗುವ ಪ್ರಶಸ್ತಿ ಮನಸಿಗೆ ನೆಮ್ಮದಿ ಕೊಡುತ್ತದೆ.. ಮಾಲಾರವರು ಸಾಂಸಾರಿಕ ತಾಪತ್ರಯಗಳ ನಡುವೆ ಅರಳಿದ ಮಲ್ಲಿಕಾ ಎಂಬುದು ಸ್ಪಷ್ಟ.. ಅವರ ಬರಹಗಳನ್ನು ಓದುತ್ತಿದ್ದಂತೆ ನನ್ನಲ್ಲಿ ಭಾವತಲ್ಲಣ ಉಂಟಾಗಿದೆ.. ನೆನಪಾಗುವ ಮುನ್ನ ಕವನ ಸಂಕಲನದಲ್ಲಿ ಒಟ್ಟು ೮೬ ಕವನಗಳಿವೆ..ಒಂದಿಷ್ಟು ಹನಿಗವನದ ಸಾಲುಗಳಿವೆ ತುಂಬಾ ಸುಂದರವಾದ ಭಾವ ಹೂರಣವನ್ನು ಕವನದ ಪದಗಳಲ್ಲಿ ತೋರಣ ಕಟ್ಟಿದ ಈ ಕೃತಿ ಓದುವುದೇ ಒಂದು ಚೆಂದ…


ಆರಂಭದಲ್ಲಿ ಅವರ ಅಕ್ಷರಕ್ಕೆ ಪ್ರೋತ್ಸಾಹ ನೀಡಿದ ತಾಯಿಯನ್ನು ಅಮ್ಮನೆಂಬುವಳು ಅದ್ಭುತ ಎಂದು ನೆನಪಿಸಿಕೊಂಡಿದ್ದಾರೆ. ತಾಯಿ ಹಸಿವೆ ನೀಗಿಸುವ ಅನ್ನಪೂರ್ಣೆ ಮಾತ್ರವಲ್ಲ ಸಂಸ್ಕಾರ,ಸಚ್ಚಾರಿತ್ರ್ಯ ಸದ್ಗುಣಗಳಿಂದ ನಿತ್ಯ ಮಜ್ಜನ ಮಾಡಿಸಿ ಮೆದುಳಿನ ಕಸ ಕೊಳೆಯನ್ನು ತೊಳೆಯುವವಳು.. ಹಾಗಾಗಿ ಅಮ್ಮ ಭಾವನಾತೀತ ಧನ್ಯವಾದ ನಮಸ್ಕಾರಗಳ ಚೌಕಟ್ಟಿಗೂ ನಿಲುಕದ ಅಮ್ಮನೆಂಬವಳು ಮಹಾ ತಪಸ್ವಿ ನನ್ನಪ್ಪ ನ ಜೊತೆಗೂಡಿ ಸಂಸಾರದಲ್ಲಿ ಮಾಡಿದ ಮೋಡಿ ಇಂದು ನಾವು ನಾವಾಗಿ ನಿಲ್ಲಲು ಸಾಧ್ಯವಾಗಿರುವುದಲ್ಲವೆ? ಅಪ್ಪ ಅಮ್ಮನ ನೆನಪಾದರೆ ಗಗನದ ಚುಕ್ಕೆಗಳು ಎದೆಯಲ್ಲಿ ನಕ್ಕ ಅನುಭವವಾಗುತ್ತದೆ.. ಹೀಗೆ ಹೆಣ್ಣು ಗೃಹಿಣಿಯಾಗಿದ್ದು, ಬಾಳಿಗೆ ಕಂದ ಬಂದು ಮುನ್ನುಡಿ ಬರೆಯುವವರೆಗೆ ಅವಳ ಒಳಗಿನ ನವಿಲು ಗರಿಬಿಚ್ಚುವುದೇ ಇಲ್ಲ ಸ್ವಚ್ಛಂದವಾಗಿ ಕುಣಿಯಲು, ಹಾಡಲು ಒಲವಿನ ಕಲವರದಲ್ಲಿ ಮನದೊಳಗೆ ಗೂಡು ಕಟ್ಟಿರುವ ಒಲವಿನ ಒಪ್ಪಿಗೆ ಕೇಳಿದ್ದು ಸಂಸ್ಕಾರದ ಅಮೂಲ್ಯ ಕ್ಷಣವೆಂದೇ ಭಾವಿಸುವೆ. ತಮ್ಮೆಲ್ಲಾ ಜೀವನದ ಸಾಕ್ಷಾತ್ಕಾರಕ್ಕು ಕೈ ಹಿಡಿದ ಪತಿಯನ್ನು ವೈಭವಿಕರಿಸಿದ್ದು ಈ ಒಲವಿನ ಒಪ್ಪಿಗೆ ಕವನದಲ್ಲಿ ಕಾಣುತ್ತೇವೆ.. ಒಳಗಿನ ಮಯೂರ ಕುಣಿಯಲು ಅನುವು ಮಾಡಿದ ಪತಿ ಜೀಪುಣನಲ್ಲ ಗುಣ ಸಾಂದ್ರ ನನ್ನ ನಲ್ಲ..ಎದೆಷ್ಟು ಪತಿ ಭಕ್ತಿ ಕೇಂದ್ರಿತವೋ ನಾ ಕಾಣೆ, ಒಡಲ ತುಂಬಿದ ಪ್ರೀತಿಗೆ ನೀನೇ ಒಡತಿ ಎಂದಾಗ ಯಾವ ಸ್ತ್ರೀ ಉಬ್ಬುವುದಿಲ್ಲ ಹೇಳಿ ?..ಹೆಣ್ಣು ಸಹಜವಾಗಿಯೆ ಹೊಗಳಿಕೆಯನ್ನು ಇಷ್ಟಪಡುತ್ತಾಳೆ, ಯಾರು ತಮ್ಮನ್ನು ಹೊಗಳಿದರೋ ಅಲ್ಲೊಂದು ಕೌತುಕದ ಭಾವನೋಟ ಇದ್ದೇ ಇರುತ್ತದೆ.. ಈ ಕವಿತ್ರಿಯ ಕವನ ಓದಿದಾಗ ನನಗೆ ಅಕ್ಷರಲೋಕದ ಕಲ್ಪವೃಕ್ಷ ವಾದ ಕುವೆಂಪು ನೆನಪಾಗುತ್ತಾರೆ.. ಈಕೆ ಕಲ್ಪವೃಕ್ಷದಂತೆ ಯಾವ ಕವನದ ಪ್ರಕಾರ ಬೇಕೋ ಅದನ್ನು ನಿಷ್ಠೆಯಿಂದ ಬರೆಯಬಲ್ಲ ನಿಲುವು ಹೊಂದಿದಾಕೆ.. ವಾರೆಗಿತ್ತಿ ಯರ ನೋಟದಲ್ಲಿ ಅಭಿಮಾನದ ದೀಪವಾದ ಈ ಬರಹಗಾರ್ತಿ ನನಗೆ ಸದಾ ಕೌತುಕ ಮತ್ತು ಮುತುವರ್ಜಿಗಳನ್ನು ಏಕಕಾಲಕ್ಕೆ ಸಮ್ಮಿಳಿತಗೊಳಿಸಿದಾಕೆ… ಅದ್ಯಾರೇ ಹಂಗಿಸಿ ಭಂಗಿಸಲಿ ಬಂಗಾರದ ಬದುಕನ್ನು ಕಟ್ಟಿಕೊಳ್ಳುವವಳು ಮಾತ್ರ ಹೆಣ್ಣೇ..ಪುರುಷನಿಂದ ಹಿಯ್ಯಾಳಿಕೆ ಸಹಿಸಲು ಸಾಧ್ಯವಿಲ್ಲ, ಆಸ್ಪೋಟಿಸಿ ಬಿಡುತ್ತಾನೆ.. ಆದರೆ ಹೆಣ್ಣು ಹಿಯ್ಯಾಳಿಕೆಯನ್ನು ಛಲವಾಗಿ ಸ್ವೀಕರಿಸಿ ಗೆದ್ದು ಮುಖ ತೋರಿಸಿದಾಗ ಆಕೆಯನ್ನು ತ್ಯಾಗದ ಪ್ರತಿರೂಪ ಹೆಣ್ಣು ಎಂದು ಹಾಡುವವರ ಹಿಂಡು ಸುತ್ತುವರಿದು ಬಿಡುತ್ತದೆ…ವಿಶ್ವ ಚೇತನವೇ ಹೆಣ್ಣು,ಮತ್ತೆ ಹೆಣ್ಣಿನ ಸ್ನೇಹ ಸಾಂಗತ್ಯ ಸಿಕ್ಕಿದ ಗಂಡಸು ತಲೆ ತಗ್ಗಿಸಲಾರ,ಯಾಕೆಂದರೆ ಅವನ ಆಗು ಹೋಗುಗಳ ನಿರ್ದೇಶನ ಅವಳ ಕೈಯಲ್ಲಿ ಇರುತ್ತದೆ.. ಅವಳೆಂದು ಗುಣದಲ್ಲಿ ರಾಜಿ ಮಾಡಿಕೊಳ್ಳಲಾರಳು, ಅದಕ್ಕಾಗಿ ಪ್ರಾಣ ಬಿಟ್ಟೇವು,ನೀತಿ ಬಿಡಲಾರೆ ಎಂಬ ದೃಢತ್ವ ಅದು ಸ್ತ್ರೀ ಕುಲಕ್ಕೆ ಒಲಿದ ಮಾಣಿಕ್ಯ… ಜಗದ ಜನರೆಲ್ಲ ಇದನ್ನೆ ಕೊಂಡಾಡಿದ್ದಾರೆ.. ಇನ್ನು ಶುದ್ಧೋಧನನ ಮಗ ಸಿದ್ಧಾರ್ಥ ಉಸಿರು ಏರಿಳಿತದ ಹಾವಭಾವಗಳಲ್ಲಿ ಕರಗಿ ಹೋದ ಕಥೆ ಅರಿಯುವ ಮುನ್ನ, ಯಶೋಧಾರಯ ತೊರೆದು ಹೋದ ಗೊಲ್ಲನಿಗೆ ಎಂಥಾ ಚೆಲುವು ದಕ್ಕಿದೆ ಅಲ್ವಾ? ನಿರ್ಭಾವುಕ ಕೃಷ್ಣನ ಚೆಲುವಿಗೆ ಕಾಮನಬಿಲ್ಲು ನಾಚಿದ ಕ್ಷಣವಿದು.. ಸಸ್ಯಕಾಶಿ ಬೃಂದಾವನ ಇಳೆಸಂಜೆಯ ಸೊಬಗಿ ನಲ್ಲಿ ಹಣತೆ ಹಚ್ಚಿದ ಮಬ್ಬು ಬೆಳಕಿನ್ನಲ್ಲಿ ಪ್ರಕೃತಿ ಪುರುಷ ಸಂಗಮದಂತೆ ಪ್ರತಿಪಾದಿಸಿದೆ ದರ್ಪಣ ದಾಂಪತ್ಯದ ಬಂಡಿ ಗೆ ಬೆಳಕಾಗುವುದಿಲ್ಲ.. ಒಲಿದ ನಲ್ಲನ ತೊರೆದು ತೌರಿಗೆ ಹೋಗುವ ಹೆಣ್ಣಿನ ಧರ್ಮ ಸಂಕಟದ ಚಿತ್ರಣ ಕಣ್ಣ ಮುಂದೆ ಬರುತ್ತದೆ..ತೀರ ಯಾವುದು? ಎದೆಯೊಳಗಿನ ದುಗುಡಕ್ಕೆ, ಅಂದದ ತೌರಿನ ತೇರನೇರಲೇ? ಒಡಲ ಒಳಗೆ ಕಡಲ ಒಲವ ತುಂಬಿ ನಿಂತ ನಲ್ಲನನ್ನು ಕ್ಷಣ ಎರಡು ಬಿಟ್ಟು ಪೋಗಲೆ? ಹೆಣ್ಣಿನ ಅಂತರಂಗದ ಜಿಜ್ಞಾಸೆಗೆ ನನ್ನಲ್ಲಿ ಉತ್ತರವಿಲ್ಲ… ದಿಗಂತ ದಿಟ್ಟಿಸಿದ ಕಣ್ಣಿನಲ್ಲಿ ಶೃಂಗಾರ ಕಾವ್ಯ ಹರಿದು ಪ್ರಣಯ ರಾಗ ಹಾಡುವ ಹಂಬಲಕ್ಕೆ ಹಂಬಲಿಸಿದ ಮನದ ಭಾವಗಳೆಲ್ಲ ಕವನದ ಎಳೆಯಾಗಿ, ಮಳೆಯಾಗಿ ಹೋಯ್ದಿದೆ ಇಲ್ಲಿ.. ಅವನೆಂದರೆ ಚಿಗುರು ಮಿಸೆಯ ಟಗರು, ಸಾಧನೆಯ ಹಿಂದಿರುವ ಪೊಗರು, ಈ ಸೊಂಪಾದ ಜೀವನ ದಲ್ಲಿ ಕಾವ್ಯ ಕನ್ನಿಕೆ ಭಾವ ಚೇತನ ನೀನು ಎಂದವನು ಚೋರಿ ನೀನು ಮುದ್ದು ಮಳೆ ಹನಿ ಪರಾರಿಯಾಗಲು ನಾ ಮಾಧವನಲ್ಲ, ಹೆಂಡತಿಗೆ ಅರ್ಧ ಶರೀರವನ್ನೇ ಅರ್ಪಿಸಿ ಅರ್ಧನಾರೀಶ್ವರನಾದ ಚಂದ್ರಶೇಖರ.. ಬದುಕು ಸುಳಿ ಗಾಳಿಗೆ ಸಿಲುಕಿ ಮಾಗಿಯ ಸೊಡರು ಆರಿದರೂ, ದುರಂತ ಅಂತ್ಯ ವಾಗದೆ ಬಾ ಮಳೆಯೆ ನನ್ನ ಸಖಿ ಗೆ ತಂಪು ನೀಡು ಸಾಲುಮರದ ಹಸಿರಲ್ಲಿ ಹೆಸರೇ ಬೇಡವೆಂದು ದುಡಿದು ಸಾಗಿದ ನಾಡಿಗೆ ಉಸಿರಿನ ಬೆಳಕು ನೀಡಿ ಅಂದದ ಬದುಕು ಮುಂಗಾರಿನಲ್ಲಿ ನೆನಪಾಗಲಿ ಎಂಬ ಭಾವ ಪ್ರಕಟಿಸುವುದು ಸಾಮಾನ್ಯ ಸಂಗತಿಯಲ್ಲ, ಮುಂದೆ ವಿದ್ಯಾ ಬುದ್ಧಿ ಓದಿದ ವಿದ್ಯಾವಂತ ಸಮೂಹ ಈ ಅನಾಗಾರಿಕಳ ನಾಳೆಯ ಉಸುರಿಗಾಗಿ, ಉಸಿರು ನಿಲ್ಲಿಸಿದವಳ ನೆನೆಯಬಹುದೇ? ಯಾಕೋ ಸಾಲು ಮರದ ತಿಮ್ಮಕ್ಕನ ಬದುಕಿನ ವೃತ್ತಾಂತ ಕಣ್ಣು ಮುಂದೆ ತೇಲುತ್ತಿದೆ…ನಾವು ಅನುಕರಣೆ ಮಾಡಬೇಕಾಗಿದ್ದು ಸಾಲು ಮರದ ತಿಮ್ಮಕ್ಕ, ತುಳಸಿ ಗೌಡ,ಸುಕ್ರಜ್ಜಿಯಂತ ಸ್ಥಳೀಯ ವಿಜ್ಞಾನಿಗಳನ್ನು ಅಲ್ಲವೇ? ಈಗಂತೂ ಸುರಪಾನದ ತೈಲಿ ಯಲ್ಲಿ ನಿತ್ಯ ಕದನ ಕಣವಾಗುತ್ತಿರುವ ಭೂ-ಮಾತೆ ಯ ಜೀವನ ಕ್ರಮವು ಒಂದು ತರ ಮುಖವಾಡ ಎಂಬ ಭಾವ ಭ್ರಮೆಯನ್ನು ನಮಗೆ ತಂದಿದೆ… ಅಂತರಂಗದ ಮೌನ ಬೇಲಿ ದಾಟುವುದು ಕರುಳು ನಾಚಿಕೆ ಬಿಟ್ಟಾಗ ಮಾತ್ರ.. ಹೇಗಾದರೂ ಸಾಯುವವ ನೀನು ನಿನ್ನ ಬದುಕಿನ ಧೋರಣೆ ಏನು? ಪರರ ಹಂಗಿಸಿ ಜರಿದು ತರಿದು ನಿನ್ನ ಹಿರಿತನ ಮೆರೆದೆ ಎಂಬ ಭ್ರಮೆಯೇ? ಸಾಯುವ ಮುನ್ನ ದಿಕ್ಸೂಚಿ ಯಾಗು.. ಇಲ್ಲ ಪ್ರೀತಿಸುವುದಾದರೆ ಮೀರಾ ಮಾಧವ ರ ಪ್ರೇಮ ನಿವೇದನೆ ಚಿಟ್ಟೆ ಯಂತೆ ಹಾರಿ ಜಗದ ತೊಟ್ಟಿಲೊಳು ಒಲವಾಮೃತ ಸುರಿದ ಗೀತೆಯನ್ನು ಕೇಳು.. ಅಲ್ಲಿ ನೆನಪಾಗುವ ಮುನ್ನ ಮರೆಯಾಗುವೆ ನಾನು.. ನಾನು ರಾಧೆಯಲ್ಲ.. ಮಾಧವ..ಕೇವಲ ಹೆಣ್ಣು,ತೆರೆ ನೀನು ನಿನ್ನಂತರಂಗದ ಕಣ್ಣು… ಇದು ನೆನಪಾಗುವ ಮುನ್ನ ಕವನ ಸಂಕಲನದಲ್ಲಿ,ಅಲ್ಲಲ್ಲಿ ಭಾವ ವಕ್ರತೆಯನ್ನು ಸರಿದೂಗಿಸಿ, ಹೊಸತನ ತಂದು ಕೊಟ್ಟ ಮಾಲಾರವ ಭಾವದೋಕುಳಿ ಚೆಲ್ಲಿದ ಬಗೆ… ಕವನ ಸಂಕಲನ ಹೃದಯ ಮತ್ತು ಮೆದುಳಿಗೆ ಏಕ ಕಾಲದಲ್ಲಿ ಬೇಲಿ ಹಾಕಲು ಭ್ರಮಿಸಿದಂತಿದೆ..ಸಾರಸ್ವತ ಕುಲಕುವರಿ ಆಗಬಹುದು ನನ್ನ ಸ್ನೇಹಿತೆ ಎಂಬ ನಂಬಿಕೆ ದೃಢಿಕರಿಸಿದ್ದು ಈ ಕವನ ಸಂಕಲನ
ನೆನಪಾಗುವ ಮುನ್ನ ಯಾರದ್ದೇ ಬದುಕೇ ಆದ್ರು ಅದು ದುರಂತ ಅಂತ್ಯ ಕಾಣಬಾರದು ಮಳೆಯಾಗು ವ ಇಚ್ಛೆ ಇಲ್ಲದೆ ಮನುಷತ್ವದ ಸುಮ ಅರಳಲಾರದು..ನಾನು ನೀವೇದನೆ ಮಾಡಿಕೊಳ್ಳುವೆ, ನೆರಳಾಗೋಣ ನೆನಪಾಗುವ ಮುನ್ನ ಎಂಬುದು ನನ್ನ ಬಿನ್ನಪ

ಉಪಸಂಹಾರ:- ಶ್ರೀಮತಿ ಮಾಲಾ ಚಂದ್ರಶೇಖರ್ ಕಲಾ ಕುಂಚ ಹಿಡಿದ ಅಕ್ಷರ ಮಾಂತ್ರಿಕೆ.. ಎಂಬುದು ಮೇಲುನೋಟಕ್ಕೆ. ನನಗೆ ಭಾಸವಾಗಿದೆ..ಪ್ರತಿ ಕವನವನ್ನು ವಿಶ್ಲೇಸಿಸುವುದು ಸಾಧ್ಯವಾಗಿಲ್ಲ ಆದರೂ ಓದಿ ಭಾವಾರ್ಥ ಗ್ರಹಿಸಿ ಆದಷ್ಟು ಸಾಧ್ಯಾಂತವಾಗಿ ಬರೆದಿದ್ದೇನೆ.. ಮುನ್ನುಡಿ ಹಿನ್ನುಡಿ ಬರೆಯುವ ಹೊಗಳು ಭಟ ನಾನಲ್ಲ, ನನಗೆ ವಿಷಯದ ವಿಸ್ತಾರ ಹೇಗಿದೆಯೋ ಹಾಗೆ ವಾಕ್ಯಗಳನ್ನು ಜೋಡಿಸುವುದು ಗೊತ್ತೇ ವಿನಃ ವಿಮರ್ಶಿಸಲು ಬರುವುದಿಲ್ಲ.. ನಾನು ಓದಿ ಗ್ರಹಿಸಿದ ವಿಷಯವನ್ನು ನಿಷ್ಠುರವಾದಿಯಾಗಿ, ಸ್ಪಷ್ಟಿಕರಿಸಿದ್ದೇನೆ.. ನಾನು ಯಾರನ್ನು ಹೊಗಳುವವನಲ್ಲ ತೆಗಳುವವನೂ ಅಲ್ಲ..ವಿಷಯಕ್ಕೆ ಸಂಬಂಧಿಸಿದಂತೆ ನಾನು ಕಠೋರವಾಗುವೆ,..ಭಾವಕ್ಕೆ ಸಂಬಂಧಿಸಿದಾಗ ನಾನು ಕುಸುಮವಾಗುವೆ… *ಈ ಕವನದಲ್ಲಿ ಮಾಲಾರವರು ಮೌಲ್ಯದ ಮಾಲೆಯನ್ನು ಅಕ್ಷರಲೋಕಕ್ಕೆ ತೊಡಿಸಿದ್ದಾರೆ.. ಒಂದೊಂದು ಕಾವ್ಯವು ಗಂಧದ ಘಮದಲ್ಲಿ ಮಿಂದೆದ್ದಿದೆ‌.. ಭಾವದಲೆಗಳು ಹೃದಯದಲ್ಲಿ ಕಾವ್ಯದ ಉಬ್ಬರಕ್ಕೆ ಸಾಕ್ಷಿಯಾದ ಕ್ಷಣವಿದು…ಓದುವ ಅಭ್ಯಾಸ ಇದ್ದರೆ ಖಂಡಿತಾ ಓದಿ ನೋಡಿ. ನಿರಾಸೆಯ ಬದಲು ಒಡಲಲ್ಲಿ ನೂರಾಸೆ ಚಿಗುರಲು ಈ ಕವನ ಸಂಕಲನ ಓದಬೇಕು ಎಂಬುದು ನನ್ನ ಅಭಿಪ್ರಾಯ.. *ನೆನಪಾಗುವ ಮುನ್ನ ನಿಮ್ಮ ನೆರಳಾಗಿ ಪೊದೆಯಲ್ಲಿ ಚಿಗುರಾಗುವ ಶಕ್ತಿ ತುಂಬುವ ಭಾವ ಈ ಕವನ ಸಂಕಲನಕ್ಕಿದೆ..ಗುಣಗ್ರಾಹಿ ನಾನು ಕಠೋರವಾಗಿ ಬರೆದಾಗ ಬೇಸರಿಸಬೇಡಿ ನಾನು ಬರೆವ ಪ್ರತಿ ಅಕ್ಷರವು ನಿಮ್ಮಲ್ಲಿ ಛಲ ಮೂಡಿಸಿ ನಿಮ್ಮ ಅಸ್ಮಿತೆ ಬೆಳಗಲಿ ಎಂಬ ಉದ್ಧೇಶದ ದೀಪದಂತಿರುತ್ತವೆ.


Leave a Reply

Back To Top