ಮಲ್ಲಿಕಾರ್ಜುನ ಪಾಟೀಲರವರ ಮಕ್ಕಳ ಕವಿತೆ

ಚಿಂವ್ ಚಿಂವ್ ಹಕ್ಕಿ 🐦 ಬಾರಲೆ ಗುಬ್ಬಿ
ತರು ಲತೆಗಳ ಹಸಿರನ್ನು ತಬ್ಬಿ
ಚಿಂವ್ ಚಿಂವ್ ಎನ್ನುವ ಹಾಡವ ಹಾಡುತ
ಸರ್ರನೇ ಫರ್ರನೇ ಮೇಲೆ ಕೆಳಗೆ ಹಾರುತ

ಹೆಕ್ಕಿ ಹೆಕ್ಕಿ ಕಾಳನು ತಿನ್ನುತ್ತಾ
ಕುಕ್ಕಿ ಕುಕ್ಕಿ ರೊಟ್ಟಿಯ ಕಚ್ಚುತ್ತಾ
ಗುಟುಕು ಗುಟುಕು ನೀರನು ಕುಡಿಯುತ
ಟುಮುಕು ಟುಮುಕು ಹೆಜ್ಜೆಯನೀಡುತ

ಕಪ್ಪುಬಿಳಿ ಮೈಬಣ್ಣ ಹೊಂದಿರುವೆ ನೀ
ಹುಳ ಹುಪ್ಪುಟೆಯಾ ಹೆಕ್ಕುತಿರುವೆ ನೀ
ಎಳೆ ಗುಂಜಿನಿಂದ ಗೂಡು ಕಟ್ಟುವೇ ನೀ
ಹಳೆ ಹಂಚಿನ ಮನೆಗೆ ರಾಜಾ ರಾಣಿ ನೀ

ಸರ್ಕಾರಿ ಕಚೇರಿ ಗೋಡೆಮೇಲೆ ವಾಸವಿರುವೆ
ವಿದ್ಯುತ್ ತಂತಿಯ ಮೇಲೆ ಉಯ್ಯಾಲೆ ಆಡುತಿರುವೆ
ಮೊಬೈಲ್ ಟವರ್ ಬಂದು ಗಗನದಿ ಕುಂತಿರುವೆ
ಅದಕ್ಕಾಗಿಯೇ ನೀನು ಅಳಿವಿನಂಚಿನಲ್ಲಿರುವೆ


Leave a Reply

Back To Top