ಕಾವ್ಯ ಸಂಗಾತಿ
ವಿಜಯ ಕುಮಾರ್ ಬಿ.ವಿ
ನಾನೇಕೆ ಅಳಬೇಕು.?
ಕೋಗಿಲೆಗಳ ಇಂಚರ
ದುಂಬಿಗಳ ಝೇಂಕಾರ
ಬಿರಿದ ವನಕುಸುಮಗಳ
ಚುಮುಕಿಸುವ ಪರಿಮಳ
ಜಗವೆಲ್ಲ ನಗುತಿರಲು
ನಾನೇಕೆ ಅಳಬೇಕು.?
ಜುಳು ಜುಳು ನದಿ ನೀರು
ಫಳಫಳಿಸುವ ಮಳೆಹನಿ
ಹೊಳಪಿರುವ ರವಿಕಿರಣ
ತಂಪೆರೆವ ಶಶಿಕಿರಣ
ಜಗವೆಲ್ಲ ನಗುತಿರಲು
ನಾನೇಕೆ ಅಳಬೇಕು.?
ಕರಿಯಾದ ಹೆಬ್ಬಂಡೆ
ಬಿಳಿಯಾದ ಬೆಳ್ಳಕ್ಕಿ
ಹಿರಿದಾದ ಆಗಸವು
ಕಿರಿದಾದ ತೃಣಕ್ರಿಮಿಯು
ಜಗವೆಲ್ಲ ನಗುತಿರಲು
ನಾನೇಕೆ ಅಳಬೇಕು.?
ಸಾಲಾದ ಇರುವೆಗಳೆ
ಹಿಮರಾಶಿ ಗಿರಿಮಾಲೆ
ಘರ್ಜಿಸುವ ಹುಲಿಗಳೆ
ಬಿಲದೊಳಗೆ ಇಲಿಗಳೆ
ಜಗವೆಲ್ಲ ನಗುತಿರಲು
ನಾನೇಕೆ ಅಳಬೇಕು.?
ಅಧ್ಬುತವು ಗೀಜಗವು
ಗೂಡಿನಾ ಸೋಜಿಗವು
ಬೆವರಿಳಿಸೊ ಎತ್ತುಗಳು
ತೆವಳುವ ಹಾವುಗಳು
ಜಗವೆಲ್ಲ ನಗುತಿರಲು
ನಾನೇಕೆ ಅಳಬೇಕು.?
ವಿಜಯ ಕುಮಾರ್ ಬಿ.ವಿ