ಅಂಕಣ ಸಂಗಾತಿ

ಸುತ್ತ-ಮುತ್ತ

ಸುಜಾತಾ ರವೀಶ್

ವಿಶ್ವ ಕಂಪ್ಯೂಟರ್ ಸಾಕ್ಷರತಾ ದಿನ

ಇಂದು ಜಗತ್ತು ಕಂಪ್ಯೂಟರ್ ಮತ್ತು ಡಿಜಿಟಲ್ ಉಪಕರಣಗಳಿಂದಲೇ ಕಾರ್ಯ ನಿರ್ವಹಿಸುತ್ತಿದೆ. ಎಲ್ಲ ರಂಗಗಳಲ್ಲೂ ಕಂಪ್ಯೂಟರ್ ಬಳಕೆ ಅನಿವಾರ್ಯ ಆಗಿದೆ. ಜಗತ್ತು ಏನೇ ಅಭಿವೃದ್ಧಿ ಸಾಧನೆಗಳನ್ನು ಮಾಡಿದರು ಅದರಲ್ಲಿ ಕಂಪ್ಯೂಟರ್ನ ಕೊಡುಗೆ ಮಹತ್ವದ್ದು. 21ನೇ ಶತಮಾನದಲ್ಲಿ ಮನುಜನ ಕೆಲಸವನ್ನು ಕಂಪ್ಯೂಟರ್ ಸರಳವಾಗಿಸಿದೆ .

ಹಿಂದುಳಿದ ರಾಷ್ಟ್ರಗಳಲ್ಲಿ ಕಂಪ್ಯೂಟರ್ ಬಳಕೆ ಬಹಳ ಕಡಿಮೆ. ಅಭಿವೃದ್ಧಿ ಹೊಂದುತ್ತಿರುವ ಈ ರಾಷ್ಟ್ರಗಳಲ್ಲಿ ಪ್ರತಿಯೊಬ್ಬರೂ ಕಂಪ್ಯೂಟರ್ ಶಿಕ್ಷಣ ಪಡೆಯಬೇಕು ಹಾಗೂ ಕಂಪ್ಯೂಟರ್ ಪ್ರೋಗ್ರಾಮ್ ಮತ್ತು ಅದಕ್ಕೆ ಸಂಬಂಧಿಸಿದ ಸಾಧನಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು ಎನ್ನುವ ಉದ್ದೇಶವನ್ನಿಟ್ಟುಕೊಂಡು ವಿಶ್ವ ಕಂಪ್ಯೂಟರ್ ಸಾಕ್ಷರತಾ ದಿನವನ್ನು ಆಚರಣೆಗೆ ತರಲಾಯಿತು. 2001 ರಿಂದ ಪ್ರತಿ ವರ್ಷ ಡಿಸೆಂಬರ್ ಎರಡರಂದು ವಿಶ್ವದಾದ್ಯಂತ ವಿಶ್ವ ಕಂಪ್ಯೂಟರ್ ಸಾಕ್ಷರತಾ ದಿನವನ್ನು ಆಚರಿಸಲಾಗುತ್ತದೆ. ಮೊದಲ ಬಾರಿಗೆ ಈ ದಿನವನ್ನು ಭಾರತೀಯ ಕಂಪನಿ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಇನ್ಫಾರ್ಮಶನ್ ಟೆಕ್ನಾಲಜಿ (ಎನ್ಐಐಟಿ) ತನ್ನ 20ನೇ ವಾರ್ಷಿಕೋತ್ಸವದ ಗುರುತಿಗಾಗಿ ಆರಂಭಿಸಿತು. ಅಂದಿನ ಭಾರತದ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಸಮ್ಮುಖದಲ್ಲಿ ಸಂಸತ್ತಿನ ಸದಸ್ಯರಿಗೆ ಕಂಪ್ಯೂಟರ್ನಲ್ಲಿ ತರಬೇತಿ ನೀಡಲಾಯಿತು. ದೇಶದಾದ್ಯಂತ ಕಂಪ್ಯೂಟರ್ ಸಾಕ್ಷರತೆಯ ಹರಡುವಿಕೆಯನ್ನು ಗುರುತಿಸಲು ಕಸ್ಟಮೈಸ್ ಮಾಡಿದ ಅಂಚೆ ಲಕೋಟೆಯನ್ನು ಸಹ ಅನಾವರಣ ಗೊಳಿಸಲಾಯಿತು. ಪ್ರತಿ ವರ್ಷ ಒಂದೊಂದು ಥೀಮ್ ಅಥವಾ ಧ್ಯೇಯ ವಾಕ್ಯವನ್ನು ಮುಂದಿಟ್ಟುಕೊಂಡು ಆ ವಿಷಯಕ್ಕೆ ಹೆಚ್ಚಿನ ಒತ್ತು ಕೊಡುವ ಸಂಪ್ರದಾಯ ನಡೆದು ಬಂದಿದೆ.

೨೦೨೧ ರಲ್ಲಿ ವಿಶ್ವ ಕಂಪ್ಯೂಟರ್ ಸಾಕ್ಷರತಾ ದಿನದ ಥೀಮ್ “ಮಾನವ ಕೇಂದ್ರಿತ ಚೇತರಿಕೆಗಾಗಿ ಸಾಕ್ಷರತೆ ಡಿಜಿಟಲ್ ವಿಭಜನೆಯನ್ನು ಕಡಿಮೆಗೊಳಿಸುವುದು” ಎಂಬುದಾಗಿತ್ತು.

ಈ ಬಾರಿಯ ಥೀಮ್ ” ಬದಲಾಗುತ್ತಿರುವ ವಿಶ್ವದಲ್ಲಿ ಸಾಕ್ಷರತೆಯನ್ನು ಹೆಚ್ಚಿಸುವುದು ಹಾಗೂ ಶಾಂತ ಮತ್ತು ಸುಸ್ಥಿರ ಸಮಾಜದ ಅಡಿಪಾಯವನ್ನು ನಿರ್ಮಿಸುವುದು” ಎಂದು ಹೇಳಲಾಗುತ್ತಿದೆ.

ಕಂಪ್ಯೂಟರ್ ಸಾಕ್ಷರತೆ ಎನ್ನುವುದು ಕಂಪ್ಯೂಟರ್ ಮತ್ತು ಇತರ ಸಂಬಂಧಿತ ತಂತ್ರಜ್ಞಾನವನ್ನು ಬಳಸಲು ಜ್ಞಾನ ಮತ್ತು ಕೌಶಲ್ಯಗಳನ್ನು ವಿವರಿಸುವ ಪದವಾಗಿದೆ. ಆಪರೇಟಿಂಗ್ ಸಿಸ್ಟಮ್, ಸಾಫ್ಟ್ವೇರ್ ಅಪ್ಲಿಕೇಶನ್ ಅಥವಾ ಸ್ವಯಂ ಚಾಲಿತ ವೆಬ್ ವಿನ್ಯಾಸ ಸಾಧನದಂತ ಸಾಫ್ಟ್ವೇರ್ ಉತ್ಪನ್ನಗಳನ್ನು ನಿರ್ವಹಿಸಲು ಅಗತ್ಯವಿರುವ ಮೂಲಭೂತ ಜ್ಞಾನ ಮತ್ತು ಕೌಶಲ್ಯಗಳನ್ನು ವಿವರಿಸಲು ಈ ಪದ ಬಳಸಲಾಗುತ್ತದೆ. ಕಂಪ್ಯೂಟರ್ ಸಾಕ್ಷರತೆ ಮಾಹಿತಿ ಪ್ರವೇಶ ಹಾಗೂ ಕಂಪ್ಯೂಟರ್ನ ಮೂಲಭೂತ ಕಾರ್ಯಾಚರಣೆಗಳನ್ನು ನಿರ್ವಹಿಸುವ ಕಲಿಕೆಯನ್ನು ಒಳಗೊಂಡಿರುತ್ತದೆ. ಇದು ಮೈಕ್ರೋಸಾಫ್ಟ್ ಆಫೀಸ್ ವಂತಹ ಉತ್ಪನ್ನಗಳ ಬಳಕೆ ಆಪರೇಟಿಂಗ್ ಸಿಸ್ಟಮನ್ನು ಹೇಗೆ ಬಳಸುವುದು ಇಂಟರ್ನೆಟ್ ಬ್ರೌಸರ್ ಅನ್ನು ಹೇಗೆ ಬೆಳೆಸುವುದು ಮುಂತಾದ ವಿಷಯಗಳ ಬಗ್ಗೆ ಸೂಚನೆ ನೀಡಬಹುದು. ಆದರೆ ಕೋಡಿಂಗ್ ಹೆಚ್ ಟಿ ಎಮ್ ಎಲ್ ವೆಬ್‌ ಅಭಿವೃದ್ಧಿ ಮತ್ತು ನೆಟ್ವರ್ಕ್ ಆಡಳಿತ ದಂತಹ ಉನ್ನತ ಮಟ್ಟದ ಕೌಶಲ್ಯಗಳನ್ನು ಕಂಪ್ಯೂಟರ್ ಸಾಕ್ಷರತೆ ಅನ್ನಲಾಗುವುದಿಲ್ಲ. ಇಂತಹ ಕೌಶಲ್ಯಗಳನ್ನು ಹೊಂದಿರುವವರನ್ನು ಪವರ್ ಬಳಕೆದಾರರು ಎನ್ನಬಹುದು.

ಇಂದಿನ ದಿನಗಳಲ್ಲಿ ಶಿಕ್ಷಣ ಹಾಗೂ ಉದ್ಯೋಗದಲ್ಲಿ ಉನ್ನತಿಯನ್ನು ಸಾಧಿಸಲು ಮಾತ್ರವಲ್ಲದೆ ದೈನಂದಿನ ಜನಜೀವನದ ನಿರ್ವಹಣೆಗೂ ಕಂಪ್ಯೂಟರ್ನ ಬಳಕೆ ಅನಿವಾರ್ಯವಾಗಿದೆ .ಹಾಗಾಗಿ ತಂತ್ರಜ್ಞಾನದ ಜಗತ್ತು ಬೆಳೆದಂತೆ ಕಂಪ್ಯೂಟರ್ ಸಾಕ್ಷರತೆಯ ಕೌಶಲ್ಯಗಳು ಹೆಚ್ಚು ಹೆಚ್ಚು ಪ್ರಾಮುಖ್ಯತೆ ಪಡೆಯುತ್ತಿದೆ. ಕಂಪ್ಯೂಟರ್ ಸಾಕ್ಷರತೆಯಿಂದಾಗಿ ವರ್ದಿತ ಕಲಿಕೆಯ ಅವಕಾಶಗಳು ಕ್ರಿಟಿಕಲ್ ಥಿಂಕಿಂಗ್ ಮತ್ತು ಸಮಸ್ಯೆ ಪರಿಹರಿಸುವ ಕೌಶಲ್ಯಗಳು ಜಾಗತಿಕ ಸಂಪರ್ಕ ಮತ್ತು ಸಂವಹನ ಹೆಚ್ಚುತ್ತಿದೆ. ಮಾಡುವ ವೃತ್ತಿಗಳಲ್ಲಿ ನಾವೀನ್ಯತೆ ಮತ್ತು ಸೃಜನಶೀಲತೆಯನ್ನು ಉತ್ತೇಜಿಸುತ್ತಿದೆ. ಕಾರ್ಯಕ್ಷಮತೆ ಸುಧಾರಿಸುತ್ತಿರುವುದಲ್ಲದೆ ಈ ಡಿಜಿಟಲ್ ಯುಗದಲ್ಲಿ ಡಿಜಿಟಲ್ ಪೌರತ್ವ ಮತ್ತು ಜವಾಬ್ದಾರಿಯನ್ನು ಅರಿಯಲು ಸಹಾಯಕವಾಗಿದೆ. ಹೆಚ್ಚಿದ ದಕ್ಷತೆ ಮತ್ತು ಸಮಯ ನಿರ್ವಹಣೆಗಳು ಕ್ಷಮತೆಯನ್ನು ಸುಧಾರಿಸುತ್ತಿದೆ. ಈ ತಂತ್ರಜ್ಞಾನ ವೇಗದ ವಿಕಸನಕ್ಕೆ ವ್ಯಕ್ತಿಗಳು ಇಡೀ ಜೀವಮಾನ ಕಲಿಕೆ ಮತ್ತು ಹೊಂದಾಣಿಕೆಯನ್ನು ರೂಡಿಸಿಕೊಳ್ಳಲು ಅನುಕೂಲವಾಗುತ್ತದೆ.

ಈ ದಿನವನ್ನು ಕಾರ್ಯಾಗಾರಗಳನ್ನು ಆಯೋಜಿಸುವ ಮೂಲಕ ಆಚರಿಸಬಹುದು ಕೋಡಿಂಗ್ ಸ್ಪರ್ಧೆಗಳು ಡಿಜಿಟಲ್ ಸಾಕ್ಷರತಾ ಅಭಿಯಾನಗಳ ಹಾಗೂ ಸಮುದಾಯವನ್ನು ತಲುಪುವ ಕಾರ್ಯಕ್ರಮಗಳ ಮೂಲಕ ಅರ್ಥಪೂರ್ಣಗೊಳಿಸಬಹುದು ಟೆಕ್ ಟೀಮ್ ಸ್ಪರ್ಧೆಗಳು, ಕಂಪ್ಯೂಟರ್ ಕೊಡುಗೆ ಡ್ರೈವ್, ಅತಿಥಿಗಳ ಮಾರ್ಗದರ್ಶನ ನೀಡುವ ಸೆಮಿನಾರ್ಗಳು, ಸಾಕ್ಷ ಚಿತ್ರ ಪ್ರದರ್ಶನ ಇವುಗಳ ಆಯೋಜನೆಯ ಮೂಲಕವೂ ಸಾಕ್ಷರತಾ ದಿನದ ಪ್ರಾಮುಖ್ಯತೆಯನ್ನು ಹರಡಬಹುದು. ಸಾಮಾಜಿಕ ಮಾಧ್ಯಮದಲ್ಲಿ ಕಂಪ್ಯೂಟರ್ ಸಾಕ್ಷರತೆಗೆ ಸಂಬಂಧಿಸಿದ ಆಲೋಚನೆಗಳು ಅನುಭವಗಳು ಹಾಗೂ ಯೋಜನೆಗಳನ್ನು ಹಂಚಿಕೊಳ್ಳಬಹುದು.

ಇಂದು ಕಂಪ್ಯೂಟರ್ ಬಳಕೆ ಸಾಫ್ಟ್ವೇರ್ ಇಂಜಿನಿಯರ್ ಉದ್ಯೋಗಿಗಳ ಆಯ್ಕೆ ಮಾತ್ರವಾಗಿ ಉಳಿಯದೆ ಶಿಕ್ಷಣ ಆರೋಗ್ಯ ವಾಣಿಜ್ಯ ಪ್ರವಾಸ ಇತ್ಯಾದಿ ಕ್ಷೇತ್ರಗಳಲ್ಲಿ ಸಹ ತನ್ನ ಚಾಪನ್ನು ಮೂಡಿಸಿದೆ ಹಾಗಾಗಿ ಪ್ರತಿಯೊಬ್ಬ ವ್ಯಕ್ತಿಗೂ ಕಂಪ್ಯೂಟರ್ ಕಲಿಕೆ ಅವಶ್ಯಕತೆಯಾಗಿದೆ. ಇಂದಿನ ಅಂತರ್ ಸಂಪರ್ಕಿತ ಜಗತ್ತಿನಲ್ಲಿ ಕಂಪ್ಯೂಟರ್ ಸಾಕ್ಷರತೆಯ ಮಹತ್ವವನ್ನು ಒತ್ತಿ ಹೇಳುತ್ತದೆ.

ಅಂತರಾಷ್ಟ್ರೀಯ ದಿನಗಳು ಮತ್ತು ವಾರಗಳ ಆಚರಣೆ ಸಾರ್ವಜನಿಕರಿಗೆ ವಿಷಯಗಳ ಬಗ್ಗೆ ಶಿಕ್ಷಣ ನೀಡಲು, ಜಾಗತಿಕ ಸಮಸ್ಯೆಗಳನ್ನು ಪರಿಹರಿಸಲು ಸಂಪನ್ಮೂಲಗಳನ್ನು ಸಜ್ಜುಗೊಳಿಸಲು ಮತ್ತು ಮಾನವೀಯ ಸಾಧನೆಗಳನ್ನು ಬಲಪಡಿಸಲು ಅತ್ಯಮೂಲ್ಯ . ಈ ದಿನವನ್ನು ಆಚರಿಸುವಾಗ ವ್ಯಕ್ತಿಗಳನ್ನು ಸಬಲೀಕರಣ ಗೊಳಿಸುವಲ್ಲಿ ಮತ್ತು ಜಾಗತಿಕ ಮಟ್ಟದಲ್ಲಿ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಯನ್ನು ಉತ್ತೇಜಿಸುವಲ್ಲಿ ಕಂಪ್ಯೂಟರ್ ಸಾಕ್ಷರತೆಯ ಅನಿವಾರ್ಯತೆ ಹಾಗೂ ಪ್ರಾಮುಖ್ಯತೆಯನ್ನು ಒಪ್ಪಿ ಆ ನಿಟ್ಟಿನಲ್ಲಿ ನಡೆಯೋಣ ಬನ್ನಿ.


ಸುಜಾತಾ ರವೀಶ್

ಭಾರತೀಯ ಜೀವ ವಿಮಾ ನಿಗಮದಲ್ಲಿ ಸೇವೆ ಸಲ್ಲಿಸುತ್ತಿರುವ ಎನ್ ಸುಜಾತ ಅವರ ಕಾವ್ಯನಾಮ ಸುಜಾತಾ ರವೀಶ್ . 1 ಕವನ ಸಂಕಲನ “ಅಂತರಂಗದ ಆಲಾಪ” ಪ್ರಕಟವಾಗಿದೆ. “ಮುಖವಾಡಗಳು” ಕವನ ಕುವೆಂಪು ವಿಶ್ವವಿದ್ಯಾನಿಲಯದ ಎರಡನೇ ಬಿ ಎಸ್ ಸಿ ಯ ಪಠ್ಯದಲ್ಲಿ ಸ್ಥಾನ ಪಡೆದುಕೊಂaಡಿವೆ. ಕವನದ ವಿವಿಧ ಪ್ರಕಾರಗಳು, ಕಥೆ ,ಲಲಿತ ಪ್ರಬಂಧ, ಪುಸ್ತಕ ವಿಮರ್ಶೆ ಹೀಗೆ ವಿವಿಧ ಪ್ರಕಾರಗಳಲ್ಲಿ ಕೃಷಿ ಸಾಧಿಸುತ್ತಿರುವ ಇವರ ರಚನೆಗಳು ವಿವಿಧ ಬ್ಲಾಗ್ ಗಳು, ಬ್ಲಾಗ್ ಪತ್ರಿಕೆ, ನಿಯತಕಾಲಿಕೆ ಹಾಗೂ ವೃತ್ತ ಪತ್ರಿಕೆ ಹಾಗೂ ಪರಿಷತ್ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ವೃತ್ತಿ ಹಾಗೂ ಪ್ರವೃತ್ತಿಯ ಮಧ್ಯೆ ಸಮತೋಲನ ಸಾಧಿಸಿಕೊಂಡು ಬರವಣಿಗೆಯಲ್ಲಿ ತೊಡಗುವ
ಬಯಕೆ ಲೇಖಕಿಯವರದು

One thought on “

  1. ಪ್ರಕಟಿಸಿ ಪ್ರೋತ್ಸಾಹಿಸುತ್ತಿರುವ ಸಂಪಾದಕರಿಗೆ ಅನಂತ ಧನ್ಯವಾದಗಳು

    ಸುಜಾತಾ ರವೀಶ್

Leave a Reply

Back To Top