ಕಾವ್ಯ ಸಂಗಾತಿ
ಡಾ.ದಾನಮ್ಮ ಚ ಝಳಕಿ
ಇರುಳು ಕಳೆದು ಹಗಲು ಮೂಡಲಿ
ಅಜ್ಞಾನ ಕಳೆಯಲಿ
ಸುಜ್ಞಾನ ಮೂಡಲಿ
ಹೊಂಬೆಳಕು ಸೂಸಲಿ
ಇರುಳು ಕಳೆದು ಹಗಲು ಮೂಡಲಿ
ಮೌಢ್ಯತೆ ಅಳಿಯಲಿ
ವೈಚಾರಿಕತೆ ಬೆಳೆಯಲಿ
ಹೊಸ ಕಿರಣ ಮೂಡಲಿ
ಇರುಳು ಕಳೆದು ಹಗಲು ಮೂಡಲಿ
ಅಸಮಾನತೆ ಕಳೆಯಲಿ
ಸಮಸಮಾಜ ಬೆಳೆಯಲಿ
ಕಾಯಕದಾಸೋಹ ತತ್ವದಲಿ
ಇರುಳು ಕಳೆದು ಹಗಲು ಮೂಡಲಿ
ಸೋಮಾರಿತನ ಅಳಿಯಲಿ
ಚೈತನ್ಯ ಹೊರಹೊಮ್ಮಲಿ
ನವದೀವಿಗೆ ಬೆಳಗಲಿ
ಇರುಳು ಕಳೆದು ಹಗಲು ಮೂಡಲಿ
ವೈಜ್ಞಾನಿಕತೆ ಮೊಳಗಲಿ
ಅಂಧಕಾರ ತೊಲಗಲಿ
ನವ ಚೈತನ್ಯ ಹೊರಹೊಮ್ಮಲಿ
ಇರುಳು ಕಳೆದು ಹಗಲು ಮೂಡಲಿ
ಮೇಲು ಕೀಳೆಂಬ ಅಂತರ ಅಳಿಯಲಿ
ಶರಣ ನಾಡಿದು ಸಂತೋಷ ತರಲಿ
ಹೊಸ ಆಶಾ ಕಿರಣ ಪ್ರಜ್ವಲಿಸಲಿ
ಇರುಳು ಕಳೆದು ಹಗಲು ಮೂಡಲಿ
ಡಾ.ದಾನಮ್ಮ ಚ ಝಳಕಿ
ಇರುಳು ಕಳೆದು ಹಗಲು ಮೂಡುವ ಪರಿ
ಅದ್ಭುತ
ಸುಶಿ
ವೈಚಾರಿಕತೆಯ ಹೊಸ ಬೆಳಕಿನ ನಿರೀಕ್ಷೆಯಲ್ಲಿ ಇರುವ ಕವಿತೆ ಧನ್ಯವಾದಗಳು ಮೇಡಂ