ನಿಲ್ಲದ ಆಳಲು
ಕವಿತಾ ಮಳಗಿ
ಎನು ಮಾಡುವುದು..
ನಮ್ಮ್ದು ಬಾಳೆ ಹೀಗೇ
ಹೇಗೆ ಸಾಧ್ಯ ನಿಮ್ಮಂತೆ ಇರಲೂ…
ಬಿಸಿಲಿರಲಿ ಮಳೆಯಿರಲಿ
ಅನುದಿನವು ಹೋರಾಟ
ಬಾಳಿಗೆ ಅದುವೇ ಅಭ್ಯಾಸವು..
ಸುಖ ಇಲ್ಲ ಎನ್ನುವ ಮಾತು
ನೋವಿನ ಸಂಗತಿ ಇದು ಸತ್ಯ
ಎನು ಮಾಡಲು ಸಾಧ್ಯವಿಲ್ಲ….
ನೆಮ್ಮದಿ ಇಲ್ಲ ಕಟಿಬಿಟಿ ಜೀವನ
ಕೊನೆ ಇಲ್ಲದ ಭವಣೆಗಳು
ಹೇಳಲಿಲ್ಲ ಯಾರಿಗೂ…..
ಧನಿಕ ನೀವೆಲ್ಲರೂ ಬದುಕಲ್ಲಿ
ಶ್ರೀಮಂತ ನನ್ನ ರಾಜ್ಯದಲ್ಲಿ ನಾನು
ನಾವಿಲ್ಲದೆ ಏನೂ ಇಲ್ಲ…
ನಮ್ಮಿಂದ ಗುಡಿಗೋಪುರ
ನಮ್ಮಿಂದ ಮನೆಮಠ..
ಆದ್ರೂ ನಾವಲ್ಲ ಶ್ರೀಮಂತ….
ಕಷ್ಟದ ಕೆಲಸ ಮಾಡಲು ನಾವೆಲ್ಲರೂ
ನೆಮ್ಮದಿ ಬದುಕೂ ನಿಮ್ಮದು
ಬೇಸರ ಕಳೆಯಲು ಹಣ ಖರ್ಚು….
ಹೊಟ್ಟೆಗೆ ಹಿಟ್ಟು ಇಲ್ಲದ ಕಾರಣ
ಅನುದಿನವು ತೊಳಲಾಟ
ಅನುದಿನವು ಮರುಗು…
******