ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ವಿಶ್ವಗುರು ಬಸವಣ್ಣ

Basavanna – A Man Who Rebelled Against Sanatana Tradition | NewsClick

ತೇಜಾವತಿ ಹೆಚ್. ಡಿ

ನೀನೇ ಅಲ್ಲವೇ ಮಹಾಮಾನವತಾವಾದಿ
ಹನ್ನೆರಡನೆಯ ಶತಮಾನದ ಕ್ರಾಂತಿಯೋಗಿ
ಅದೆಷ್ಟೋ ಅಂಧಕಾರದ ಧೂಳುಹಿಡಿದ ಮನಗಳಲಿ
ಅರಿವಿನ ಪ್ರಣತಿಯ ಬೆಳಗಿದೆ !

ಹುಟ್ಟುಬ್ರಾಹ್ಮಣ ಸಂಸ್ಕಾರಶರಣ
ಅಂಧಶ್ರದ್ಧೆ ಜಡ ಸಂಪ್ರದಾಯ ತೊರೆದು ಸತ್ಯಾನ್ವೇಷಕನಾದೆ !
ಅಂತರ್ಜಾತಿ ವಿವಾಹ ಮಾಡಿಸಿ
ಬಿಜ್ಜಳನಾಸ್ಥಾನ ಮಂತ್ರಿ ನೀನು
ಗಡೀಪಾರಿಗೀಡಾದೆ!

ಸಮಾಜ ಸುಧಾರಕನಾದೆ
ಕಾಯಕವೇ ಕೈಲಾಸವೆಂದೆ
ನುಡಿದಂತೆ ನಡೆಯೆಂದೆ
ಅಂತರಂಗಶುದ್ಧಿಯೇ ಮಿಗಿಲೆಂದೆ
ಜ್ಞಾನವೇ ಬಂಢಾರವೆಂದು ನೀ
ಭಕ್ತಿ ಬಂಢಾರಿಯಾದೆ !

ಆಚಾರವೇ ಸ್ವರ್ಗವೆಂದೆ
ಅನಾಚಾರವೇ ನರಕವೆಂದೆ
ಅನುಭವ ಮಂಟಪದೊಳು
ಮಹಾಜ್ಞಾನಿಯಾದೆ !
ಇಷ್ಟಲಿಂಗ ಪರಿಕಲ್ಪನೆಯೊಂದಿಗೆ ಜಗಜ್ಯೋತಿಯಾದೆ !
ಕೂಡಲಸಂಗಮ ವಚನಾಂಕಿತದಿ ನೀ ನಿಜಶರಣನಾದೆ….
ನಿಜ….ಶರಣನಾದೆ…

*****

About The Author

Leave a Reply

You cannot copy content of this page

Scroll to Top