ಅಂಕಣ ಸಂಗಾತಿ.

ಶಿಕ್ಷಣ ಲೋಕ

ಡಾ.ದಾನಮ್ಮ ಝಳಕಿ

ಶಾಲೆಗಳಲ್ಲಿ ಚುನಾವಣಾ

ಸಾಕ್ಷರತಾ ಕ್ಲಬ್ ಪ್ರಸ್ತುತತೆ

ಚುನಾವಣೆಗಳು ಪ್ರಜಾಪ್ರಭುತ್ವದ ಬೆನ್ನೆಲಬು. ಎಲ್ಲರೂ ಮತ ಚಲಾಯಿಸುವ ಮೂಲಕ ಪ್ರಜ್ಞಾವಂತ ನಾಗರಿಕರಾಗುವುದು ಜವಾಬ್ದಾರಿ ಪ್ರಜೆಗಳ ಕರ್ತವ್ಯ. ಅಲ್ಲದೇ ಉತ್ತಮ ಆಡಳಿತಗಾರರನ್ನು ಚುನಾಯಿಸುವ ಮೂಲಕ ನಮ್ಮ ರಾಜ್ಯದ ಅಭಿವೃದ್ಧಿಗೆ ನಾವೇ ಹರಿಕಾರರಾಗಬೇಕು. ಇದಕ್ಕಾಗಿ ಶಾಲೆಗಳಲ್ಲಿ ಮಕ್ಕಳಿಗೆ ಚುನಾವಣೆ ಹಾಗೂ ಮತದಾನದ ಕುರಿತು ಉತ್ತಮ ತಿಳವಳಿಕೆ ನೀಡುವುದು ನಮ್ಮಶಿಕ್ಷಣ ಕರ್ತವ್ಯವೂ ಹೌದು. ಈ ನಿಟ್ಟಿನಲ್ಲಿ ಎಲ್ಲ ಪ್ರೌಢಶಾಲೆಗಳಲ್ಲಿ ಚುನಾವಣಾ ಸಾಕ್ಷರತಾ ಕ್ಲಬ್‌ ಸ್ಥಾಪಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಎಲ್ಲಾ ಶಾಲೆಗಳಲ್ಲಿ ಮತದಾರರ ಸಾಕ್ಷರತೆಯನ್ನು ಉತ್ತೇಜಿಸಲು ಮತದಾನ ಸಾಕ್ಷರತಾ ಸಂಘಗಳಲ್ಲಿ ಆಸಕ್ತಿದಾಯಕ ಚಟುವಟಿಕೆಗಳ ಮತ್ತು ಪ್ರತ್ಯಕ್ಷ ಅನುಭವಗಳ ಮೂಲಕ ಆದರೆ ತಟಸ್ಥ ಹಾಗೂ ಪಕ್ಷಾತೀತವಲ್ಲದ ರೀತಿಯಲ್ಲಿ ಸ್ಥಾಪಿಸಲಾಗುತ್ತಿದೆ.
ಮತದಾರ ಸಾಕ್ಷರತಾ ಸಂಘಗಳನ್ನು ವಿಶೇಷವಾಗಿ ಪ್ರೌಢಶಾಲೆಯ ಎಲ್ಲ ತರಗತಿಗಳಲ್ಲಿ ಅಧ್ಯಯನ ಮಾಡುತ್ತಿರುವ (೧೪ ರಿಂದ ೧೭ ವಯೋಮಾನದ)ಭವಿಷ್ಯದ ಮತದಾರರನ್ನು ಗುರಿಯಾಗಿಸಿಕೊಂಡು ಭಾರತದಾದ್ಯಂತ ಎಲ್ಲಾ ಪ್ರೌಢ ಹಾಗೂ ಉನ್ನತ ಪ್ರೌಢ (ಸೀನಿಯರ್ ಸೆಕೆಂಡರಿ) ಶಾಲೆಗಳಲ್ಲಿ ಸ್ಥಾಪಿಸಲಾಗುತ್ತದೆ. ಇವರನ್ನು ಇ.ಎಲ್.ಸಿ (ELC) “ ಭವಿಷ್ಯ ಮತದಾರರು ” ಎಂದು ಕರೆಯಬಹುದು.

ಅರ್ಥ
ವಯಸ್ಕರಾಗುವ ಮಕ್ಕಳಿಗೆ ಪ್ರಜಾಪ್ರಭುತ್ವ ಸಾಧನೆಗಾಗಿ ಚುನಾವಣೆಯಲ್ಲಿ ಪಾಲ್ಗೋಳ್ಳಲು ಸಾಕ್ಷರರನ್ನಾಗಿ ಮಾಡುವ ಶಾಲೆಯಲ್ಲಿನ ಸಂಘವೇ ಚುನಾವಣಾ ಸಾಕ್ಷರತಾ ಕ್ಲಬ್ (ಇ.ಎಲ್.ಸಿ – ELC)

ರಚನೆ
ಮುಖ್ಯ ಶಿಕ್ಷಕರು ಗೌರವ ಅಧ್ಯಕ್ಷರಾಗಿ, ಕಲಾ ಶಿಕ್ಷಕರು ಮಾರ್ಗದರ್ಶಕರಾಗಿ, ವಿದ್ಯಾರ್ಥಿಗಳೇ ಅಧ್ಯಕ್ಷ, ಉಪಾಧ್ಯಕ್ಷ, ಕಾರ್ಯದರ್ಶಿ, ಸದಸ್ಯರಾಗಿ ಸಂಘದ ಚಟುವಟಿಗಳನ್ನು ನಡೆಸುವುದು.

ನಾಮಕರಣ
ಸಂಘಕ್ಕೆ ಚುನಾವಣಾ ಸಾಕ್ಷರತಾ ಕ್ಲಬ್ ಎಂದು ಹೆಸರನ್ನು ಇಡುವುದು.

ಉದ್ದೇಶಗಳು
 ರಾಜಕೀಯ ಮೌಲ್ಯಗಳ ಬಗ್ಗೆ ಜಾಗೃತಿ ಮೂಢಿಸುವುದು.
 ಸಮರ್ಥ ಸಂಪನ್ಮೂಲ ವ್ಯಕ್ತಿಗಳು ಹಾಗೂ ಸಂಪನ್ಮೂಲಗಳೊಂದಿಗೆ ಮತದಾರ ನೊಂದಣೆ, ಮತದಾನ ಪ್ರಕ್ರಿಯೆ ಮತ್ತು ಸಂಬಂಧಿತ ವಿಷಯಗಳ ಬಗ್ಗೆ ಉದ್ದೇಶಿತ ಜನಸಂಖ್ಯೆಯನ್ನು ಸಾಕ್ಷರರನ್ನಾಗಿಸಲು ಇವುಗಳ ಬಗ್ಗೆ ಪ್ರಾತ್ಯಕ್ಷಿಗಳನ್ನು ಏರ್ಪಡಿಸುವುದರ ಮೂಲಕ ಅರಿವು ಮೂಢಿಸುವುದು.
 ಭಾಗವಹಿಸುವವರಿಗೆ ಇ ವಿ ಎಂ ಮತ್ತು ವಿ ವಿ ಪ್ಯಾಟ್ ಬಗ್ಗೆ ಪರಿಚಯಿಸುವುದು ಮತ್ತು ಇ ವಿ ಎಂ ಗಳನ್ನು ಬಳಸಿ ಮತದಾನ ಪ್ರಕ್ರಿಯೆಯ ಭದ್ರತೆ ಮತ್ತು ದೃಢತೆಯ ಬಗ್ಗೆ ಅವರನ್ನು ಜಾಗೃತಗೊಳಿಸುವುದು.
 ಉದ್ದೇಶಿತ ಮತದಾರರು ಅವರ ಮತದ ಮೌಲ್ಯ ಮತ್ತು ಅವರ ಮತದಾನದ ಹಕ್ಕನ್ನು ವಿಶ್ವಾಸದಿಂದ, ಆರಾಮದಾಯಕವಾಗಿ ಮತ್ತು ನೈತಿಕ ರೀತಿಯಲ್ಲಿ ಚಲಾಯಿಸುವುದನ್ನು ಅರ್ಥಮಾಡಿಕೊಳ್ಳಲು ನೆರವಾಗುವುದು.


 ಸಮುದಾಯಕ್ಕೆ ಮತದಾರ ಸಾಕ್ಷರತೆಯನ್ನು ಕೊಂಡಯ್ಯುವುದಕ್ಕಾಗಿ ಇ ಎಲ್ ಸಿ ಸದಸ್ಯರ ಸಾಮರ್ಥ್ಯವನ್ನು ಬಳಸಿಕೊಳ್ಳುವುದು.
 ೧೮ ವರ್ಷ ಪೂರ್ಣಗೊಳಿಸುವಂತಹ ಅದರ ಸದಸ್ಯರ ಮತದಾರ ನೊಂದಣೆಗೆ ಸಹಕರಿಸುವುದು
 ಮತದಾರ ಭಾಗವಹಿಸುವಿಕೆಯ ಸಂಸ್ಕೃತಿ, ನೀಡಲಾದ ಮಾಹಿತಿಯ ಗರಿಷ್ಠತೆ ಮತ್ತು ನೈತಿಕ ಮತದಾನ ಹಾಗೂ “ ಪ್ರತಿಯೊಂದು ಮತವೂ ಪರಿಗಣಿಸಲ್ಪಡುವುದು” ಮತ್ತು “ಯಾವುದೇ ಮತದಾರನು ಮತದಾನದಿಂದ ಹೊರಗುಳಿಯಬಾರದು” ಎಂಬ ತತ್ವವನ್ನು ಅನುಸರಿಸಲು ಸಜ್ಜುಗೊಳಿಸುವುದು.
 ಮತದಾನದ ಅರಿವು ಹಾಗೂ ಮತದಾನ ನಮ್ಮ ಹಕ್ಕು ಎಂಬ ಪರಿಕಲ್ಪನೆ ದೃಢಗೊಳಿಸುವುದು.
 ಅರ್ಹ ಮತದಾರರು ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸುವಂತೆ ಪ್ರೇರೆಪಿಸುವುದು
 ಭಾವೀ ಮತದಾರರಿಗೆ ಮತದಾನದಲ್ಲಿ ಭಾಗವಹಿಸುವ ಹಕ್ಕಿನ ಬಗ್ಗೆ ತಿಳಿಸುವುದು
 ಮತದಾರರ ನೊಂದಣೆಯ ಬಗ್ಗೆ ಶಿಕ್ಷಣ ನೀಡುವುದು.
 ಚುನಾವಣೆ ಎಂದರೇನು? ಹೇಗೆ? ಯಾವಾಗ? ಎಂಬುದರ ಬಗ್ಗೆ ಮಾಹಿತಿ ನೀದುವುದು
 ಮತದಾನದ ಮಹತ್ವ ಮತ್ತು ತಿಳುವಳಿಕೆ ಹಾಗೂ ಅದರ ಬಗ್ಗೆ ನೈತಿಕತೆ ಹಾಗ ಗುಪ್ತ ಮತದಾನದ ಬಗ್ಗೆ ಮಾಹಿತಿ ನೀಡುವುದು.
 ಮತದಾರ ನೊಂದಣೆ ಮಾಡುವಂತೆ ೧೮ ವರ್ಷ ತುಂಬಿದವರಿಗೆ ಪ್ರೋತ್ಸಾಹಿಸುವುದು.

ಮತದಾನದ ಘೋ಼ಣೆಗಳು
 ಮತದಾನ ನಿಮ್ಮ ಹಕ್ಕು
 ತಪ್ಪದೇ ಮತದಾನ ಮಾಡಿ
 ನಿಮ್ಮ ಮತವನ್ನು ಮಾರದಿರಿ
 ನಿಮ್ಮ ಮತ, ನಾಡಿಗೆ ಹಿತ
 ನಿಮ್ಮ ಮತ ನಿಮ್ಮ ಹಕ್ಕು
 ಮತದಾನ ನಮ್ಮ ಕರ್ತವ್ಯ
 ಯೋಚಿಸಿ ಮತದಾನ ಮಾಡಿ
 ಜಾತಿ ಬೇಡ, ಧರ್ಮ ಬೇಡ, ಯೋಗ್ಯರಿಗೆ ಮತ ಹಾಕೋಣ.
 ಇಂದು ಮತದಾನ ಮಾಡುವುದು ಆದಲ್ಲಿ ಕಷ್ಟ,ಮುಂದೆ ಅನುಭವಿಸುವೆವು ಬಹುದೊಡ್ಡ ನಷ್ಟ
 ಪ್ರತಿಶತ ಮತದಾನ, ಉತ್ತಮ ಸಮಾಜದ ನಿರ್ಮಾಣ.
 ವಿವೇಚನೆಯಿಂದ ಹಾಕಿದ ಮತ, ದೇಶ , ಜನರಿಗೆ ಎಂದೆAದಿಗೂ ಹಿತ
 ಕಳಬೇಡ,ಕೊಲಬೇಡ, ಮತದಾನ ಮಾಡುವುದ ಮರಿಬೇಡ
 ಎಲ್ಲ ಕೆಲಸಗಳ ಬದಿಗಿಡಿ, ತಪ್ಪದೇ ಮತದಾನ ಮಾಡಿ
ಜಾಗೃತ ಮತದಾರ, ಪ್ರಜಾಪ್ರಭುತ್ವದ ನೇತಾರ
ಚಟುವಟಿಕೆಗಳು
• ಶಾಲಾ ಸಂಸತ್ತನ್ನು ಚುನಾವಣಾ ಮೂಲಕ ರಚಿಸುವುದು
• ಚುನಾವಣಾ ಪ್ರಕ್ರಿಯೆ ಬಗ್ಗೆ ಅರಿವು ಮೂದಿಸುವ ಬಗ್ಗೆ ಪ್ರಬಂಧ ಸ್ಪರ್ಧೆ, ಭಾಷಣ ಸ್ಪರ್ಧೆ,, ರಸ ಪ್ರಶ್ನೆ, ಚರ್ಚಾ ಸ್ಪರ್ಧೆ, ಆಶುಭಾಷಣ ಸ್ಪರ್ಧೆಗಳನ್ನು ಏರ್ಪಡಿಸುವುದು
• ಅಣುಕು ಸಂಸತ್ತಿನ ಮೂಲಕ ಶಾಲಾ ಚಟುವಟಿಕೆಗಳಲ್ಲಿ ಮಕ್ಕಳನ್ನು ಸಕ್ರೀಯವಾಗಿ ಭಾಗವಹಿಸುವತೆ ಪ್ರೇರೆಪಿಸುವುದು
• ಶಾಲಾ ಸಂಸತ್ತನ್ನು ರಚಿಸುವುದು ಹಾಗೂ ಶಾಲೆಯ ಎಲ್ಲ ಚಟುವಟಿಕೆಗಳನ್ನು ಇದರಡಿಯಲ್ಲಿ ನಡೆಸುವುದು
• ಅಣುಕು ಸಂಸತ್ ಮಾಡುವುದರ ಮೂಲಕ ರಾಜಕೀಯ ತಿಳವಳಿಕೆ ಮೂಡಿಸುವುದು.
• ಮತದಾನದ ಅರಿವಿ ಮೂಡಿಸಲು ಜಾಥಾ ಮಾಡುವುದು
• ಚುನಾವಣಾ ಪ್ರಕ್ರಿಯೆ ಅರಿಯಲು ಚುನಾವಣಾ ಕಾರ್ಡ ಗಳನ್ನು ಆಡಿಸುವದರ ಮೂಲಕ ತಿಳವಳಿಕೆ ಮೂಡಿಸುವುದು.
• ಮತದಾನದ ಘೋಷಣೆಗಳನ್ನು ಹಾಗೂ ಗೋಡೆ ಬರಹ ಸ್ಪರ್ಧೆಯನ್ನು ಏರ್ಪಡಿಸುವುದು
• ರಾಷ್ಟ್ರೀಯ ಮತದಾನದ ದಿನಾಚರಣೆ ಆಚರಿಸುವುದು.

ಚುನಾವಣಾ ಸಂಘದ ವತಿಯಿಂದ ಅಣುಕು ಮಾತದಾನದ ಮೂಲಕ ಶಾಲಾ ಸಂಸತ್ತಿನ ರಚನೆಯನ್ನು ಮಾಡವುದು. ಚುನಾವಣಾ ಪ್ರಕ್ರಿಯೆಯ ಮಾದರಿಯಲ್ಲಿಯೇ ಚುನಾವಣೆ ಆಯೋಜಿಸುವುದು. ಅಧಿಸೂಚನೆಯನ್ನು ಸಹ ಹೊರಡಿಸವುದು. ಅದರ ಪ್ರಕ್ರಿಯೆಯನ್ನು ಈ ಕೆಳಗಿನಂತೆ ಗುರುತಿಸಬಹುದು.
ಅಧಿಸೂಚನೆ :
೧. ಚುನಾವಣಾ ಅಧಿಸೂಚನೆ ಪ್ರಕಟನೆ
೨. ಚುಣಾವಣಾ ವೇಳಾ ಪಟ್ಟಿ ಪ್ರಕಟನೆ : ಮುಖ್ಯೋಪಾದ್ಯಾಯರಿಂದ
೩. ಅಭ್ಯರ್ಥಿಗಳಿAದ ಶಾಲಾ ಕಾರ್ಯಚಟುವಟಿಕೆಗಳಿಗೆ ಸಂಬAಧಿಸಿದAತೆ, ಚುನಾವಣಾ ಪ್ರಣಾಳಿಕೆ ಹಾಗೂ ತಮ್ಮ ಪಕ್ಷದ ಚಿನ್ಹೆಗಳ (ಪ್ರಸ್ತುತ ಯಾವುದೇ ರಾಜಕೀಯ ಚಿನ್ಹೆಗಳನ್ನು ಹೊರತುಪಡಿಸಿ) ನಿರ್ಧಾರ
೪. ಅಭ್ಯರ್ಥಿಗಳ ಉಮೇದುವಾರಿಕೆ ಅಥವಾ ನಾಮಪತ್ರ ಸಲ್ಲಿಕೆ ಆರಂಭ
೫. ನಾಮಪತ್ರಗಳ ಪರಿಶೀಲನೆ
೬. ಉಮೇದುವಾರಿಕೆ ಹಿಂಪಡೆಯುವಿಕೆ ಅಥವಾ ನಾಮಪತ್ರ ಹಿಂಪಡೆಯಲು ಕೊನೆಯ ದಿನಾಂಕ
೭. ನಾಮಪತ್ರ ಪರಿಶೀಲನೆ ಮತ್ತು ಕಣದಲ್ಲಿರುವ ಅಂತಿಮ ಅಭ್ಯರ್ಥಿಗಳ ಪ್ರಕಟನೆ
೮. ಚುಣಾವಣಾ ಪ್ರಚಾರ
೯. ಮತದಾನದ ದಿನ
೧೦. ಮತಏಣಿಕೆ
೧೧. ಫಲಿತಾಂಶಘೋಷಣೆ
೧೨. ಪ್ರತಿಜ್ಞಾ ಸ್ವೀಕಾರ ಸಮಾರಂಭ

ಒಟ್ಟಾರೆ ಮೇಲಿನ ಪ್ರಕ್ರಿಯೆಯ ಮೂಲಕ ಬಾವಿ ಜಗತ್ತಿನ ಜವಾಬ್ದಾರಿ ಪ್ರಜೆಗಳನ್ನು ಸಮರ್ಥವಾಗಿ ತರಬೇತಿಗೊಳಿಸಿ, ಪ್ರಜಾಪ್ರಭುತ್ವದ ತತ್ವವನ್ನು ಹಾಗೂ ಆಶಯವನ್ನು ಗಟ್ಟಿಗೊಳಿಸಬೇಕಿದೆ.


ಡಾ.ದಾನಮ್ಮ ಝಳಕಿ



ಡಾ.ದಾನಮ್ಮ ಝಳಕಿ ಯವರು ಪ್ರಸ್ತುತ ಶ್ರೀಮತಿ ಸೋಮವ್ವ ಚ ಅಂಗಡಿಯ ಕರ್ನಾಟಕ ಪಬ್ಲಿಕ್ ಶಾಲೆಯ ಉಪಪ್ರಾಂಶುಪಾಲರಾಗಿದ್ದು ಶಿಕ್ಷಣದಲ್ಲಿ ಇವರು ನಡೆಸಿದ ಹಲವು ಸಂಶೋದನಾ ಲೇಖನಗಳು ರಾಷ್ಟ್ರೀಯ ಅಂತರರಾಷ್ಟ್ರೀಯ ಸಂಸ್ತೆಗಳಿಂದ ಪ್ರಕಟಗೊಂಡಿವೆ.ರಾಜ್ಯಮಟ್ಟದಲ್ಲಿ ಉತ್ತಮ ಶಿಕ್ಷಕಿ ಪ್ರಶಸ್ತಿಗೂ ಬಾಜನರಾಗಿದ್ದಾರೆ.ಶಿಕ್ಷಣ ಮಾತ್ರವಲ್ಲದೆ ಸೃಜನಶೀಲ ಸಾಹಿತ್ಯ ರಚನೆಯಲ್ಲು ಇವರು ತಮ್ಮ ಛಾಪು ಮೂಡಿಸಿರುವ ಇವರ ಹಲವಾರು ಬರಹಗಳು ನಾಡಿನ ಬಹುತೇಕ ಪತ್ರಿಕೆಗಳಲ್ಲಿ ಪ್ರಕಟವಾಗಿವೆ

Leave a Reply

Back To Top