ಭಾವ ಬಸಿರು-ಡಾ ಶಶಿಕಾಂತ ಪಟ್ಟಣ

ಕಾವ್ಯ ಸಂಗಾತಿ

ಭಾವ ಬಸಿರು

ಡಾ ಶಶಿಕಾಂತ ಪಟ್ಟಣ

ಒಳಗೆ ಹೊಕ್ಕ
ಬೇರು ಜೀವ
ಮೇಲೆ ಪ್ರೀತಿಯ
ಪುಷ್ಪ ಅರಳಿದೆ
ಹೃದಯ ಭಾವ
ಶಬ್ದವಾಗಿ ಕವನ
ಕಾವ್ಯದಿ ನಿಂತಿವೆ

ಸೋತ ಮನಕೆ
ಗೆಲುವ ಗಾಳಿ
ಬದುಕು ಭರವಸೆ
ಗುರಿಯ ತೋರಿದೆ
ಗುಡುಗು ಸಿಡಿಲು
ಮಳೆಯು ಬೀಸಿದೆ
ಬಿರುಕು ಭೂಮಿ ನಕ್ಕಿತು

ಕಪ್ಪು ನೆಲದಿ
ಹಸಿರು ಪೈರು
ಭಾವ ಬಸಿರು
ಜೀವ ಕಳೆಯು
ಮೊಳಕೆಯೊಡೆಯಿತು
ಕನಸು ಕಲರವ
ಫಲವು ಕಂಡಿತು


One thought on “ಭಾವ ಬಸಿರು-ಡಾ ಶಶಿಕಾಂತ ಪಟ್ಟಣ

Leave a Reply

Back To Top