ಇಮಾಂ ಮದ್ಗಾರ-ಗಜಲ್

ಕಾವ್ಯ ಸಂಗ್ರಾತಿ

ಗಜಲ್

ಇಮಾಂ ಮದ್ಗಾರ

ರಾಶಿಗಳ ಪಥಬದಲಿಸುತ್ತದೆ ಸಂಕ್ರಾಂತಿ
ರೈತನಬೆವರಿನ ಕನಸುಗಳಲಿಬೆರೆತು

ರಾಶಿಗಳ ಪಥಬದಲಿಸುತ್ತದೆ ಸಂಕ್ರಾಂತಿ
ರೈತನ ಉಲ್ಲಾಸದುಸಿರಲಿ ಬೆರೆತು

ರಾಶಿಗಳ ಪಥಬದಲಿಸುವದು ಸಂಕ್ರಾಂತಿ
ರೈತನಮುಗ್ದ ಮಂದಹಾಸದಲಿಬೆರೆತು

ರಾಶಿಗಳ ಪಥಬದಲಿಸುತ್ತದೆ ಸಂಕ್ರಾಂತಿ
ಅನ್ನದಾತಬೆಳೆದ ಕಾಳುಗಳಲಿಬೆರೆತು

ರಾಶಿಗಳಪಥಬದಲಿಸುತ್ತದೆ ಸಂಕ್ರಾಂತಿ
ಸಾಲಮಾಡಿದದುಡ್ಡು ಮಣ್ಣಿಗೆ ಚಲ್ಲುವರೈತನ ಭರವಸೆಯಲಿಬೆರೆತು

ರಾಶಿಗಳ ಪಥಬದಲಿಸುತ್ತದೆ ಸಂಕ್ರಾಂತಿ
ಹಾಳಾದಬೆಳೆಗಳನೋಡಿ ಉದರುವರೈತನ ಕಣ್ಣೀರಲಿಬೆರೆತು

ರಾಶಿಗಳಪಥಬದಲಿಸುತ್ತದೆ ಸಂಕ್ರಾಂತಿ ಪ್ರತಿವರುಷವೂ
ಬಡರೈತನಸಾಲದ ಬಡ್ಡಿಯಚಕ್ರಬಡ್ಡಿಯಲಿಬೆರೆತು


Leave a Reply

Back To Top