ಸಂಕ್ರಾಂತಿ ವಿಶೇಷ-ಗಜಲ್

ಕಾವ್ಯ ಸಂಗಾತಿ

ಗಜಲ್

ಅರ್ಚನಾ ಯಳಬೇರು

ಕ್ರಾಂತಿಯ ಅಲೆಯನು ಪ್ರಕೃತಿಲಿ ತುಂಬುತ ಬಂದಿದೆ ಸಂಕ್ರಾಂತಿ
ಸುಗ್ಗಿಯ ಹಿಗ್ಗಲಿ ಸಗ್ಗದ ಸಿರಿಯನು ಚೆಲ್ಲುತ ಬಂದಿದೆ ಸಂಕ್ರಾಂತಿ

ಪಥವನು ಬದಲಿಸಿ ಹೊರಟಿಹ ದಿವಸ್ಪತಿ ಸುಂದರ ಘಳಿಗೆಯಲಿ
ಬೆಲ್ಲದ ಸಿಹಿಗೆ ಎಳ್ಳಿನ ನಂಟನು ಬೆಸೆಯುತ ಬಂದಿದೆ ಸಂಕ್ರಾಂತಿ

ಅವನಿಯ ನೋಟಕೆ ಸೋತಿಹ ಅರುಣಗೆ ಸರಸದ ಸಂಭ್ರಮವು
ಸಂತಸದಲಿ ಭೂರಮೆಗೆ ಬಸಿರ ಹೊರಿಸುತ ಬಂದಿದೆ ಸಂಕ್ರಾಂತಿ

ಕಂದಳಿಸುವ ಕಿರಣದಲಿ ತುಂಬಿದ ಪ್ರಾಂಜಲತೆಯ ನೋಡಿಲ್ಲಿ
ಬೀಸುವ ಕುಳಿರ್ಗಾಳಿಗೆ ಹಿತಸ್ಪರ್ಶ ನೀಡುತ ಬಂದಿದೆ ಸಂಕ್ರಾಂತಿ

ಅರ್ಚನೆಯಾಗುತಿದೆ ಝೇಂಕರಿಸುವ ಭೃಂಗಕೆ ಕುಸುಮದ ಮಧು
ಹಸನು ಲಾಲಿತ್ಯದಲಿ ಅಸ್ಮಿತೆಯನು ಬೆರೆಸುತ ಬಂದಿದೆ ಸಂಕ್ರಾಂತಿ


ಅರ್ಚನಾ ಯಳಬೇರು

Leave a Reply

Back To Top