ಜಿ.ಎಸ್.ಶರಣು ಕವಿತೆ-ಸಾಧಕರಾಗಿ

ಕಾವ್ಯ ಸಂಗಾತಿ

ಸಾಧಕರಾಗಿ

ಜಿ.ಎಸ್.ಶರಣು

.

ಮತದ ಕಾಲ್ಪನಿಕ ಕಥೆಗಳ ಅಮಲಿನಲ್ಲಿ
ಕತ್ತಿ ಬಿಸಾಡಿದ್ರೀ ಸ್ವರ್ಗದ ಭೂಮಿಯಲ್ಲಿ
ರಕ್ತ ಚೆಲ್ಲಿದ್ರೀ ಅನ್ನ ಕೊಡುವ ನೆಲದಲ್ಲಿ
ಇಷ್ಟಾದರೂ ನಿಮ್ಮ ಮನ ಪರಿವರ್ತನೆಯಾಗಲಿಲ್ಲ

ಪೊಳ್ಳು ಕಥೆಯಲ್ಲಿ ಬರುವ ದೇವರ ಹೆಸರಲ್ಲಿ
ದಿನಕ್ಕೊಂದು ಕೋಮು ಗಲಭೆಗಳು ಗಲ್ಲಿ ಗಲ್ಲಿಯಲ್ಲಿ
ದಾರಿಗೊಂದು ಹೆಣ ನದಿಯಂತೆ ಹರಿಯುವ ರಕ್ತದಲ್ಲಿ
ಇಷ್ಟಾದರೂ ನೀವ್ಯಾರು ಮನುಷ್ಯರಾಗಿ ಬದಲಾಗಲಿಲ್ಲ

s.

ಧರ್ಮ-ಧರ್ಮದ ಸಂಘರ್ಷಕ್ಕಾಗಿ ನಿಂತಿರುವಿರಿ
ರಾಕ್ಷಸರ ಭಾಷಣಕ್ಕೆ ಬದುಕು ಬಲಿ ಕೊಟ್ಟಿದ್ದೀರಿ
ನಿಮ್ಮ ನಡುವಿನ ಸ್ನೇಹಿತರ ಸಾವು ನೋಡಿದ್ದೀರಿ
ಇಷ್ಟಾದಾರೂ ಬದಲಾಗದ ಬೇತಾಳನಿಗಿಂತ ಕಡೆಯಾಗಿದ್ದೀರಿ

ನಿಮ್ಮನಾಳುವ ನಾಯಕರ ಮಕ್ಕಳನ್ನು ನೋಡಿರೀ
ನಿಮ್ಮಂತೆ ಬೀದಿಯಲಿಲ್ಲವರು ಅದನ್ನರಿಯಿರಿ
ನಿಮ್ಮ ಕುಟುಂಬ ನೆನಸಿಕೊಂಡು ಮುನ್ನಡೆಯಿರಿ
ಅದರಿಂದ ಉತ್ತಮ ಜೀವನ ಕಟ್ಟಿಕೊಂಡು ಮೆರೆಯಿರಿ


Leave a Reply

Back To Top