ಮಿರ್ಜಾ ಗಾಲಿಬ್ ಅವರ ೨೨೫ ನೆ ಜನ್ಮದಿನ ಪ್ರಯುಕ್ತ ಗಜಲ್

ಕಾವ್ಯ ಸಂಗಾತಿ

ಮಿರ್ಜಾ ಗಾಲಿಬ್ ಅವರ ೨೨೫ ನೆ ಜನ್ಮದಿನ

ಅರುಣಾ ನರೇಂದ್ರ

ಪ್ರೀತಿ ಮುಖ ತಿರುಗಿಸಿದಾಗ ಆಗುವ ನೋವನ್ನು ಹೇಗೆ ಸಹಿಸಿದೆ ಗಾಲಿಬ್
ಧರ್ಮ ದಬ್ಬಾಳಿಕೆ ಮಾಡಿದಾಗ ಆಗುವ ದದ್೯ನ್ನು ಹೇಗೆ ನಿರ್ವಹಿಸಿದೆ ಗಾಲಿಬ್

ನೂರು ಮಂದಿ ನೂರು ಮಾತಾಡುತ್ತಾರೆ ಆಡಲಿ ಬಿಡು
ನಗುವಿನಲ್ಲೇ ಅಳುವನ್ನು ಹೇಗೆ ಮರೆಯಾಗಿಸಿದೆ ಗಾಲಿಬ್

ಮದಿರೆಯ ಮತ್ತಲ್ಲೇ ಲೋಕದ ಸೋಗಲಾಡಿತನ ಪ್ರಶ್ನಿಸಿದವ ನೀನು
ಮಧು ಬಟ್ಟಲಲ್ಲಿ ಅಲ್ಲಾಹುವನು ಹೇಗೆ ಸಂಧಿಸಿದೆ ಗಾಲಿಬ್

ಕೇಳಿದವರಿಗೆಲ್ಲ ಬೊಗಸೆ ತುಂಬಾ ಕನಸುಗಳ ಕಡ ಕೊಟ್ಟ ಸಂತ
ಮೊಹಬ್ಬತ್ತಿನ ನಶೆಯನು ಸಾಲುಗಳಲ್ಲಿ ಹೇಗೆ ದಾಖಲಿಸಿದೆ ಗಾಲಿಬ್

ನಸೀಬು ಕೈ ಕೊಟ್ಟಿತೆಂದು ಚಿಂತಿಸದೆ ಪ್ರೀತಿಗಾಗಿ ಉಸಿರು ಹಿಡಿದಿದ್ದಾಳೆ ಅರುಣಾ
ಬದುಕಿನ ಅದಮ್ಯ ಚಿಲುಮೆಯನು ಲೋಕದ ಕೈಗಿತ್ತು ಹೇಗೆ ತನುವ ಒರಗಿಸಿದೆ ಗಾಲಿಬ್


Leave a Reply

Back To Top