ಹನಿಗವಿತೆಗಳು: ನಾಮದೇವ ಕಾಗದಗಾರ

ಕಾವ್ಯ ಸಂಗಾತಿ

ಹನಿಗವಿತೆಗಳು: ನಾಮದೇವ ಕಾಗದಗಾರ

1.
ನನ್ನ ಬದುಕು
ಕಟ್ಟಿಕೊಂಡಿರುವುದು
ಅವ್ವನ
ಕಣ್ಣೀರಿನಿಂದ..
ಅಪ್ಪನ ರಕ್ತದಂತಹ
ಬೆವರ ಹನಿಗಳಿಂದ…

2.
ಮೈಯಲ್ಲಾ ಒಣಗಿ
ನಿಂತ ಮರ,
ವಸಂತ ಋತುವನು ನೆನೆದು ಸಂಕಟ ಪಡುತ್ತಿದೆ..!
ಭೂಗರ್ಭಕ್ಕೆ ಕನ್ನ ಹಾಕಿರುವ
ಶೂರ ಮಾನವನ
ಆಕ್ರಮಣದಿಂದ….!!

3.
ದೇವರಾದವರ ನೆಲದಲ್ಲಿ
ಹೆತ್ತವಳ
ಕೊರಳಕೊಯ್ಯುವ ನಾವು
ತಾಯಿ ಮೊದಲ
ದೇವರೆಂದು ಜಪಿಸುವೆವೂ…

4.
ಮಾಲಿನ್ಯಯುಕ್ತ ನೆಲಕ್ಕೆ
ಬೆವರ ಬಸಿದು
ಹಸಿರು ಮೂಡಿಸಿ
ಉಸಿರು ನೀಡಬೇಕಾಗಿದೆ..

6.
ಚತುಷ್ಪದ ರಸ್ತೆಗಳೆಲ್ಲಾ
ರೈತನ ಎದೆ ಸೀಳಿ ಹೋಗಿವೆ..
ಹಾದು ಹೋದ ರಸ್ತೆಯ ಕೆಳಗೆ
ಅಪ್ಪ-ಅವ್ವನ ಬೆವರು
ನರಳುತ್ತಿದೆ…


Leave a Reply

Back To Top