ಕಾವ್ಯ ಸಂಗಾತಿ
ಆಳ ಮರೆತ ಮನ
ಡಾ. ತಯಬಅಲಿ. ಅ. ಹೊಂಬಳ
ನನ್ನ ಮನಸ್ಸಿನ್ಯಾಗ ಏನೈತಿ
ಅಂತ ಹ್ಯಾಂಗ ಹೇಳಲಿ
ಹೃದಯ ಸುಡತೈತಿ
ಕನಸು ಕಾಡತೈತಿ
ಆಸೆ ತುಂಬಿದ
ಮನಸ್ಸು ಒಡೆದು
ನೋಡಿದಾಗ
ಸಂಕಟ ಆಗತೈತಿ
ಬದುಕಿ ಬರಲು
ಬಿಡದೆ ಮನಸ್ಸು
ದೇಹದ ರಕ್ತದ ಕಣ
ಹಿಂಡಿ ಹಿಂಡಿ ಸುಡತೈತಿ.
ಅಚ್ಚ ಮಲ್ಲಿಗೆ ಹೂ
ಬಿಚ್ಚಿ ಬಿಚ್ಚಿ ಒಡೆದಾಗ
ಮನಸ್ಸಿನ ನೋವು ವೇದನೆ
ಸಹಿಸಲಾರದಾಂಗ
ಮಡಿಲಲ್ಲಿ ಮಲಗಿದ
ಮಗುವನ್ನು ಕಿತ್ತೊಗೆದಾಗ
ತಾಯಿ ಹೃದಯದ ನೋವು
ಕರಗಿಸ ಲಾರದಾಂಗ
ತನ್ನವರು ಕಣ್ಣೇದುರು
ಬದುಕಿ ಸತ್ತಾಗ ಸಂಕಟ
ಮರೆಯಲಾರದೆ
ಬದುಕಿ ನಿಂತಾಂಗ
ಏನಂತ ಹೇಳಲಿ
ಅವಳು ಹೃದಯದ
ಹೊಸಲಿಗೆ ಮಳಿ ಹೊಡೆದಾಳ ನಾ ಬರೆದಿರಲೇಂದು
ನಾ ಹೋಗಲಿ ಹ್ಯಾಂಗ
ಕರಿಮಣಿ ಸರ ಹಿಡಿದುಕೊಂಡು
ಸತ್ತ ಬರಿದಾದ ಕೊರಳಿಗೆ.
ಮನ ಕುಲುಕುವ ಅಭಿವ್ಯಕ್ತಿತ್ವ ! ಸ್ಫೂರ್ತಿ ಕವಿತೆಗೆ ವಂದನೆಗಳು ಸರ್.