ಕಾವ್ಯ ಸಂಗಾತಿ
ಗಜಲ್
ಅರ್ಚನಾ ಯಳಬೇರು

ಚಿತ್ತವನು ಚೊಕ್ಕದಲಿ ಬೆಳಗಲು ಹಚ್ಚಿರಿ ಜ್ಞಾನದ ಹಣತೆ
ಹೃದಯದ ಚೆಲುವು ಕಾಣಲು ಹಚ್ಚಿರಿ ಪ್ರೇಮದ ಹಣತೆ
ಬಂಧಿಸಿಹುದು ಜಗದಗಲ ಆವರಿಸಿದ ಅಜ್ಞಾನದ ತಮ
ಸುಜ್ಞಾನದ ಭಿಕ್ಷೆಯ ಪಡೆಯಲು ಹಚ್ಚಿರಿ ಆರದ ಹಣತೆ
ಅಂಧಕಾರವು ಅಳಿಯಲಿ ಆತ್ಮಜ್ಯೋತಿಯ ಪ್ರಖರತೆಗೆ
ಮಧುರ ಮೈತ್ರಿಯ ಹೆಣೆಯಲು ಹಚ್ಚಿರಿ ಭಾವದ ಹಣತೆ
ಹಸನಾಗಿದೆ ಬಾಳು ಉಲಿವ ಪ್ರೀತಿಯ ಸಂಪನ್ನತೆಯಲಿ
ತೊಟ್ಟಿಕ್ಕುವ ವಾಂಛೆಗಳ ಹತ್ತಿಕ್ಕಲು ಹಚ್ಚಿರಿ ತ್ಯಾಗದ ಹಣತೆ
ಆಸ್ವಾದಿಸು ಸದಾ ಜೋತ್ಸ್ನದ ಲಾವಣ್ಯವನು ತನ್ನೊಳಗೆ
ಅರ್ಚನಾಳ ಅಸ್ಮಿತೆ ಅರಿಯಲು ಹಚ್ಚಿರಿ ಮೌನದ ಹಣತೆ

ಅನಂತ ವಂದನೆಗಳು ನಿಮ್ಮ ಪ್ರೀತಿಯ ಪ್ರೋತ್ಸಾಹಕ್ಕೆ
Excellent
ಹಣತೆ ಕೂಡಾ ಪ್ರಖರ ಏಂದು ಬಿಂಬಿಸುವ ಕವಿತೆ ಇಷ್ಟವಾಯಿತು. ಅಭಿನಂದನೆಗಳು.