ಕಾವ್ಯ ಸಂಗಾತಿ
ಆತ್ಮದ ಪ್ರಶ್ನೆ
ರಜಿಯಾ ಕೆ ಭಾವಿಕಟ್ಟಿ
ಹುಟ್ಟು ಸಾವಿನ ಕುರಿತು ಲೆಕ್ಕ
ಬರೆದ ಬಹ್ಮ ಜೀವನ ನಡುವಿನ ಅಂತರದ ಬದುಕನ್ನ ಮರೆಮಾಚಿಸಿಯೇ ಬಿಟ್ಟ.
ಜೀವನದ ಕೊನೆತನಕವು ನೀನು
ಇನ್ನೊಬ್ಬರನ್ನು ಟೀಕಿಸುತ್ತಲೇ ಹೊರಟೇ ನಿನ್ನಾತ್ಮವನ್ನು ನೀನು ವಿಮರ್ಶಿಸಲೇ ಇಲ್ಲ .
ನಿನ್ನ ಆತ್ಮವು ಪ್ರಶ್ನಿಸುವುದು
ನೀ ಸತ್ತು ಹೆಣವಾದ ಬಳಿಕ
ನೀನು ಏನು ಸಾಧಿಸಿರುವೆ
ನಿನ್ನೊಳಗಣ ಆತ್ಮನಾದ ನನಗೆ ನೀನೆನಲು ಮುಜುಗರವಾಗಿದೆ.
ಜೀವನವನ್ನು ಜಡತ್ವವಾಗಿಸಿದೆ
ಬರೀ ಹಸಿವು ದಾಹಗಳನು ಮಾತ್ರ
ಚಿಂತಿಸಿದೆ ಪ್ರೀತಿ ಕಾಮಗಳನ್ನೆ ಮೋಹಿಸಿದೆ. ಒಬ್ಬರ ಕಷ್ಟಗಳಿಗೆ ಮಿಡಿಯಲಿಲ್ಲ ಒಬ್ಬರ ನೋವುಗಳಿಗೆ ಸ್ಪಂದಿಸಲಿಲ್ಲ .
ಸಾಧಿಸದೆ ಸತ್ತ ನಿನ್ನ ಸಾವು ಸಾವಿಗೆ
ಅವಮಾನಿಸಿದೆ ನಾಲ್ಕು ಜನರಂತೆ
ಇದ್ದು ಹೋದ ಎದ್ದು ಹೋದ ಎಂಬಂತೆ ಬದುಕಿರುವೆ ಇದ್ದಾಗಲೇ
ನಾಲ್ಕು ಜನ ನೆನಯುವಂತೆ ಏನಾದರು ರಚಿಸು ರೂಪಿಸು
ಚಿತ್ರಿಸು ಆತ್ಮ ತೃಪ್ತಿಯಿಂದ ಮಡಿವಂತೆ ಜೀವನ ನಡೆಸು
Wah!!