ಸ್ವಯಂ ಭೂ-ಕವಿತೆ ಡಾ ಡೋ ನಾ ವೆಂಕಟೇಶ

ಕಾವ್ಯ ಸಂಗಾತಿ

ಡಾ ಡೋ ನಾ ವೆಂಕಟೇಶ

ಸ್ವಯಂ ಭೂ

ಕವಿತೆ ಉಸಿರಾಡಿದಾಗ
ಹಸಿರು!
ಕವನ ಬೆಳೆಯುತ್ತ ಬೆಳೆಯುತ್ತ ಆಗುವುದು ಸಹಜ ಹರಿವು- ನವ್ಯಾತಿನವ್ಯ ನಿರಂತರ ನಿಶ್ಚಿತ !

ಕವಿತೆಯ ಪ್ರಸವ
ಅನುಭೂತಿಯಿಂದ
ಅಪ್ರಮೇಯನಿಂದ

ಹಸಿಹಸಿ ಕೂಸು ಕೂಗಿದಾಗಷ್ಟೆ ಹೊನ್ನು ! ಕೂಗದಿದ್ದಾಗ ಮಣ್ಣು ! ದೇಹವಿಲ್ಲ ಕವಿತೆಗೆ
ಬರೇ ಹೃದಯ
ಹೃತ್ಪೂರ್ವಕ ಗಾಯನ !

ಹಿಮ್ಮೇಳ ಮುಮ್ಮೇಳಗಳ
ಸೊಗಡಿಲ್ಲ
ಸೀದಾ ಸಾದ ಬಾಣ- ಏಕಲವ್ಯನ ಏಕಾಗ್ರತೆಯಂತೆ
ಅರ್ಜುನನ ಕುಶಾಗ್ರತೆಯಂತೆ
ಕರ್ಣನ ಪ್ರತಿಜ್ಞೆಯಂತೆ
(ತೊಟ್ಟ ಬಾಣ ತೊಡುವುದಿಲ್ಲ
ಇಟ್ಟ ಗುರಿ ಬದಲಿಸುವುದಿಲ್ಲ)

ಕವಿತೆ
ಕಥೆಯಂತಲ್ಲ
ಕಾವ್ಯ ಕಥನಳಾಗುವುದಿಲ್ಲ

ಕವನ ಉದ್ಭವಿಸಿದಾಗ
ಕವಿತೆ ಮೈದಳೆಯುತ್ತಾಳೆ
ಕಾವ್ಯ ಉಸಿರಾಡುತ್ತಾಳೆ
ಕಥೆಯಾಗುವ ಮುನ್ನ ತಾನೇ ತಾನಾಗಿ
ಉದ್ಭವಿಸುತ್ತಾಳೆ
ಉದ್ಘೋಷಿಸುತ್ತಾಳೆ

ಸ್ವಯಂ ಭೂ
ಹರಹರ ಶಂಭು


7 thoughts on “ಸ್ವಯಂ ಭೂ-ಕವಿತೆ ಡಾ ಡೋ ನಾ ವೆಂಕಟೇಶ

Leave a Reply

Back To Top