ಕಾವ್ಯಸಂಗಾತಿ
ನನ್ನ ತಮ್ಮ
ಡಾ. ತಯಬಅಲಿ.ಅ. ಹೊಂಬಳ ಮಕ್ಕಳ ಕವಿತ
ನನ್ನ ತಮ್ಮ ನಕ್ಕರೆ
ಹಾಲು ಸಕ್ಕರೆ
ಅವನನ್ನು ಕಂಡರೆ
ಎಲ್ಲರಿಗೆ ಬಲು ಅಕ್ಕರೆ
ನಮ್ಮೊಂದಿಗೆ ಕಿಟಲೆಯ
ಬಲು ಆಟ
ಮೈ ಮೇಲೆರುವನು
ಬಲು ಕಾಟ
ನೆಲದಲ್ಲಿ ಆಟ
ಮಣ್ಣು ತಿನ್ನುವ ಪಾಠ
ಗದರಿಸಿದರೆ ಅಳುವನು
ಜೊಲ್ಲು ಮೆತ್ತಿ ನಗುವನು
ಅಮ್ಮನ ಮಡಿಲಲ್ಲಿ
ಸ್ವರ್ಗದ ಕನಸು
ಭಗ್ನ ಮಾಡಿದರೆ
ಬಿಡಿಸುವುದು ಮನಸ್ಸು
ಅಪ್ಪನ ಕೈ
ಬಲು ಗಟ್ಟಿ ಸೈ
ಹೆಜ್ಜೆ ಹೆಜ್ಜೆ ನಡುಗೆ
ಜೀವನದ ಯಶಸ್ವಿನಡೆಗೆ
ನಕ್ಕರೆ ನಂದಗೋಕುಲ
ಮನೆಯಂಗಳ
ಎತ್ತಿ ಮುದ್ದಾಡುವರು
ಜಗದಗಲ
ನನ್ನ ತಮ್ಮ
ಮುದ್ದು ಮುದ್ದು ಕಂದ
ನಮ್ಮೆಲ್ಲರೊಂದಿಗಿನ ಆಟ
ಬಲು ಚೆಂದ
ನನ್ನ ತಮ್ಮ ನಕ್ಕರೆ
ಹಾಲು ಸಕ್ಕರೆ
ಅವನನ್ನು ಕಂಡರೆ
ಮನೆಯಲ್ಲ ಅಕ್ಕರೆ.
Super